ಸಾಮಾಜಿಕ ಜಾಲತಾಣಗಳಲ್ಲಿ ಯಾವ ವಿಚಾರ, ಯಾವ ಹೊತ್ತಿನಲ್ಲಿ ವೈರಲ್ ಆಗುತ್ತವೆ ಎಂದು ಹೇಳಲಾಗುವುದಿಲ್ಲ. ಯಾವುದೋ ಹಾಡು, ಘಟನೆ, ಹೇಳಿಕೆ, ಫೋಟೋ ಇತ್ಯಾದಿಗಳು ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣವೆಂಬ ಲೋಕವನ್ನಾವರಿಸಿಕೊಂಡು ಜನರನ್ನು ಸಮೂಹಸನ್ನಿಗೆ ಒಳಗಾಗಿಸಿಬಿಡುತ್ತವೆ. ಸದ್ಯ ಬೋನಿ ಎಂ ಅವರ 1978ರ ಕಾಲದ ಸೂಪರ್ ಹಿಟ್ ಯೂರೋ ಡಿಸ್ಕೋ ಟ್ರ್ಯಾಕ್ ರಾಸ್ಪ್ಯೂಟಿನ್ ಪೆಪ್ಪಿ ಬೀಟ್ಸ್ ಎಲ್ಲರ ಗಮನ ಸೆಳೆಯುತ್ತಿದ್ದು ವೈರಲ್ ಆಗಿದೆ.
ಇತ್ತೀಚೆಗೆ ಕೇರಳದ ತ್ರಿಶೂರ್ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳಿಬ್ಬರು ಈ ಬೀಟ್ಸ್ಗೆ ಡ್ಯಾನ್ಸ್ ಮಾಡಿದ್ದು ಮೊದಲು ಹಿಟ್ ಆಗಿತ್ತು. ಇದೀಗ ಅದನ್ನೇ ಕೇಂದ್ರೀಕರಿಸಿಕೊಂಡ ಕೇರಳ ರಾಜ್ಯ ಸರ್ಕಾರ ಕೊರೊನಾ ಲಸಿಕೆಗಳಿಗೆ ರಾಸ್ಪ್ಯೂಟಿನ್ನ ಪೆಪ್ಪಿ ಬೀಟ್ಸ್ ಬಳಸಿಕೊಂಡು ಹುಬ್ಬೇರಿಸುವಂತೆ ವಿಡಿಯೋ ತಯಾರಿಸಿದೆ. ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಗ್ರಾಫಿಕ್ಸ್ ತಯಾರಿಸಿ ಅವು ಈ ಬೀಟ್ಗೆ ಹೆಜ್ಜೆ ಹಾಕುವಂತೆ ಮಾಡಲಾಗಿದೆ.
ಕೇರಳ ಪೊಲೀಸ್ ಅವರ ಅಧಿಕೃತ ಟ್ವಿಟರ್ ಅಕೌಂಟ್ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಜನರು ಕೊರೊನಾ ಲಸಿಕೆ ತೆಗೆದುಕೊಳ್ಳುವಂತೆ ಆ ಮೂಲಕ ಉತ್ತೇಜಿಸುವ ಪ್ರಯತ್ನ ನಡೆದಿದೆ. ನೋಡಲು ಮಜವಾಗಿರುವ ಈ ವಿಡಿಯೋದಲ್ಲಿ ರಾಸ್ಪ್ಯೂಟಿನ್ ಡ್ಯಾನ್ಸ್ ಚಾಲೆಂಜ್ನಿಂದ ಪ್ರೇರಿತರಾಗಿ ಈ ವಿಡಿಯೋ ತಯಾರಿಸಿದ್ದೇವೆಂದು ಹೇಳಲಾಗಿದೆ. ನಿಮ್ಮ ಹತ್ತಿರದ ಲಸಿಕಾ ಕೇಂದ್ರಗಳಿಗೆ ತೆರಳಿ ಕೊರೊನಾ ಲಸಿಕೆ ಪಡೆಯಿರಿ ಎಂಬ ಸಂದೇಶ ಹೊತ್ತಿರುವ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದ್ದು, ಕೊರೊನಾ ಲಸಿಕೆ ತೆಗೆದುಕೊಳ್ಳಿ ಎಂಬ ಜಾಹೀರಾತನ್ನು ಹೀಗೆ ಕ್ರಿಯಾಶೀಲವಾಗಿ ನೀಡಿರುವುದಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Get Vaccinated From Nearest Vaccination Centre..
Crush The Curve..
Back to Basics..#keralapolice #CovidVaccine pic.twitter.com/QfS8fPCoR3— Kerala Police (@TheKeralaPolice) April 11, 2021
ಇದನ್ನೂ ಓದಿ:
Rahul Dravid: ವೆಂಕಟೇಶ್ ಪ್ರಸಾದ್ ಕೂಡ ಇಂದಿರಾ ನಗರದ ಗೂಂಡಾ! ದ್ರಾವಿಡ್ ಬಳಿಕ ಇನ್ನೊಂದು ವಿಡಿಯೋ ವೈರಲ್
ಕೊರೊನಾ ಟೆಸ್ಟ್ ಕಳ್ಳಾಟದ ವಿಡಿಯೋ ವೈರಲ್; ಕೊಡಿಗೆಹಳ್ಳಿ ಬಿಬಿಎಂಪಿ ಆಸ್ಪತ್ರೆ ಸಿಬ್ಬಂದಿ ವಜಾ
(Covaxin Covishield vaccine steps to Rasputin beat goes viral in Kerala)
Published On - 11:39 am, Mon, 12 April 21