Economy Class : ಅರೆ ಓ ಧೋನಿ! (M S Dhoni) ನನ್ನ ಪಕ್ಕದಲ್ಲಿಯೇ ಕುಳಿತಿದ್ದಾರೆ. ನನ್ನ ಮುಂದಿನ ಸೀಟಿನಲ್ಲಿದ್ದಾರೆ. ನನ್ನ ಹಿಂದಿನ ಸೀಟಿನಲ್ಲಿದ್ದಾರೆ. ನಿಮ್ಮದೊಂದು ಆಟೋಗ್ರಾಫ್ ಬೇಕು. ಒಂದು ಸೆಲ್ಫೀ ಸರ್ಜೀ… ಹೀಗೆಲ್ಲ ಯಾವ ಧ್ವನಿಗಳೂ ಅಲ್ಲ ಕೇಳಿಬರಲಿಲ್ಲ. ನೂಕುನುಗ್ಗಲು ಉಂಟಾಗಲಿಲ್ಲ. ಎಲ್ಲರೂ ಅವರವರ ಪಾಡಿಗೆ ಕುಳಿತಿದ್ದರು. ಹಾಗೆಯೇ ಧೋನಿ ಕೂಡ. ಮೊದಲ ಸಾಲಿನಲ್ಲಿ ಅಲ್ಲ ಮತ್ತೆ! 3F ನಲ್ಲಿ. ಅಚ್ಚರಿಯಾಗುತ್ತಿದೆಯಾ? ಹೌದು ಇದು ನಡೆದಿದ್ದು ರಾಂಚಿ ಬಜೆಟ್ ಫ್ಲೈಟ್ನಲ್ಲಿ. ಗಗನಸಖಿ ತಟ್ಟೆತುಂಬ ಥರಾವರಿ ಚಾಕೋಲೇಟ್ ತಂದುಕೊಟ್ಟಾಗ ಹಿಂದಿನ ಸೀಟಿನಲ್ಲಿರುವ ಮಹಿಳೆ, ಅರೆ ನನಗ್ಯಾಕೆ ಚಾಕೊಲೇಟ್ ತಂದುಕೊಟ್ಟಿಲ್ಲ ಎಂದು ನೋಡುತ್ತಿರುವಂತೆ ತೋರುತ್ತಿಲ್ಲವೆ?
Dhoni bhai flying economy. Not even the first row but 3F. Ranchi only has budget airline connectivity.
ಇದನ್ನೂ ಓದಿ— Gabbar (@GabbbarSingh) June 25, 2023
ರಾಂಚಿಯು ಕೇವಲ ಬಜೆಟ್ ಫ್ಲೈಟ್ ಅನ್ನು ಹೊಂದಿದೆ ಎಂದು ಗಬ್ಬರ್ ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ ಬೆನ್ನಲ್ಲಿ ನೆಟ್ಟಿಗರೆಲ್ಲರೂ ರಾಂಚಿಗೆ ಇರುವ ವಿಮಾನ ಸೌಲಭ್ಯದ ಬಗ್ಗೆ ಚರ್ಚಿಸಿದ್ದಾರೆ. ರಾಂಚಿಗೆ ಏರ್ ಇಂಡಿಯಾ ಮತ್ತು ವಿಸ್ತಾರಾ ಎರಡೂ ವಿಮಾನ ಸೌಲಭ್ಯ ಇವೆ. ಆದರೆ ರಾಂಚಿಗೆ ವಿಸ್ತಾರಾ ನೇರ ಸಂಪರ್ಕ ಹೊಂದಿಲ್ಲದ ಕಾರಣ ಧೋನಿ ಹೀಗೆ ಪ್ರಯಾಣಿಸಿದ್ದಾರೆ. ಬಿಝಿನೆಸ್ ಕ್ಲಾಸ್ ಬಗ್ಗೆ ಯೋಚಿಸದ ಅವರ ಸರಳತೆಯನ್ನು ಗಮನಿಸಿ ಎಂದಿದ್ದಾರೆ.
ಇದನ್ನೂ ಓದಿ : Viral: ಸೇಕ್ರೆಡ್ ಫೈರ್; 16 ವರ್ಷಗಳ ”ದಾಸವಾಳ ಪುಷ್ಪಾ” ಕನಸು ನನಸಾದದ್ದು ಹೀಗೆ
ಏರ್ ಇಂಡಿಯಾ, ಏರ್ ಏಷ್ಯಾ ಇಂಡಿಯಾ, ಗೋ ಏರ್, ಇಂಡಿಗೊ, ವಿಸ್ತಾರಾ ಈ ಎಲ್ಲ ಕನೆಕ್ಟೆಡ್ ಫ್ಲೈಟ್ಗಳು ರಾಂಚಿಗೆ ಲಭ್ಯ ಎಂದ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ರಾಂಚಿಗೆ ಪ್ರಯಾಣಿಸಲು ಇಂಡಿಗೋ ವಿಮಾನ ಉತ್ತಮ ಎಂದು ಇನ್ನೊಬ್ಬರು ಹೇಳಿದ್ದಾರೆ. ಎಲ್ಲಾ ಸರಿ ಮಧ್ಯದ ಸೀಟ್ ಯಾಕೆ ಖಾಲೀ ಇದೆ ಎಂದು ಮಗದೊಬ್ಬರು ಪ್ರಶ್ನಿಸಿದ್ದಾರೆ. ಅರೆರೆ! ಧೋನಿ ಕ್ಯಾಂಡಿ ಕ್ರಷ್ ಆಡುತ್ತಿದ್ದಾರೆ ಎಂದಿದ್ದಾರೆ ಕೆಲವರು. ಧೋನಿಯವರ ಸರಳತೆಗೆ ಸುಧಾ ಮೂರ್ತಿ ಹೆಮ್ಮೆ ಪಡಬಹುದು ಎಂದಿದ್ದಾರೆ ಒಬ್ಬರೇ ಒಬ್ಬರು!
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:44 am, Tue, 27 June 23