Video Viral: ಮಗನಿಗೆ ಮನ ಬಂದಂತೆ ಥಳಿಸಿದ ಪತ್ನಿ; ಸಿಸಿಟಿವಿ ದೃಶ್ಯ ಕಂಡು ಪೊಲೀಸರಿಗೆ ದೂರು ನೀಡಿದ ಪತಿ

|

Updated on: May 28, 2024 | 1:02 PM

ಕೆಲಸದಿಂದ ಸಂಜೆ ಮನೆಗೆ ಬಂದ ಪತಿ ಸಿಸಿಟಿವಿ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾನೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಾಲಕನ ತಂದೆ, ಪತ್ನಿಯ ಕ್ರೂರ ವರ್ತನೆ ವಿರುದ್ಧ ಪೊಲೀಸರಿಗೆ ದೂರು ಕೂಡ ನೀಡಿದ್ದಾನೆ.

Video Viral: ಮಗನಿಗೆ ಮನ ಬಂದಂತೆ ಥಳಿಸಿದ ಪತ್ನಿ; ಸಿಸಿಟಿವಿ ದೃಶ್ಯ ಕಂಡು ಪೊಲೀಸರಿಗೆ ದೂರು ನೀಡಿದ ಪತಿ
Follow us on

ಹರಿಯಾಣ: ಮಹಿಳೆಯೊಬ್ಬರು ತನ್ನ 11 ವರ್ಷದ ಮಗನನ್ನು ಅಮಾನುಷವಾಗಿ ಥಳಿಸಿರುವ ಘಟನೆ ಫರಿದಾಬಾದ್‌ನಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಲಸದಿಂದ ಸಂಜೆ ಮನೆಗೆ ಬಂದ ಪತಿ ಸಿಸಿಟಿವಿ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾನೆ. ಇಂತಹ ಅಮಾನುಷ ಕೃತ್ಯಗೈದ ಪತ್ನಿಯ ವಿರುದ್ಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾನೆ.  ಮಹಿಳೆ ತನ್ನ ಮಗನಿಗೆ ಥಳಿಸುತ್ತಿರುವುದನ್ನು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ತನ್ನ ಮಗುವಿಗೆ ಥಳಿಸುವ ಹಲವು ದೃಶ್ಯಗಳನ್ನು ತೋರಿಸಲಾಗಿದೆ. ಅವಳು ಹುಡುಗನನ್ನು ಒದೆಯುವುದು ಕೂಡ ಕಂಡುಬಂದಿದೆ. ಹಲ್ಲೆಯ ಸಂದರ್ಭದಲ್ಲಿ ಮಗುವಿನ ತಂದೆ ಮಧ್ಯಪ್ರವೇಶಿಸಿ ಮಗುವನ್ನು ತನ್ನ ಕ್ರೂರ ತಾಯಿಯಿಂದ ರಕ್ಷಿಸಿದ ದೃಶ್ಯಾವಳಿಗಳು ಸಹ ಸೆರೆಯಾಗಿದೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಾಲಕನ ತಂದೆ, ಪತ್ನಿಯ ಕ್ರೂರ ವರ್ತನೆ ವಿರುದ್ಧ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ.

ಇದನ್ನೂ ಓದಿ: BMW ಕಾರು ಓಡಿಸಿದ ಅಪ್ರಾಪ್ತ ಮಗ, ಕಾರಿನ ಬಾನೆಟ್ ಮೇಲೆ ಮಲಗಿ ಅಪ್ಪನ ಸವಾರಿ

ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯುಸಿ) ಆದೇಶದ ಮೇರೆಗೆ ಸೂರಜ್‌ಕುಂಡ್ ಪೊಲೀಸ್ ಠಾಣೆಯು ತಾಯಿಯ ವಿರುದ್ಧ ಕ್ರೌರ್ಯ ಪ್ರಕರಣವನ್ನು ದಾಖಲಿಸಿದೆ. ಪ್ರಕರಣ ದಾಖಲಾದ ಬಳಿಕ ಮಹಿಳೆ ತನ್ನ ಮಗನನ್ನು ಕರೆದುಕೊಂಡು ತಾಯಿ ಮನೆಗೆ ಹೋಗಿದ್ದಾಳೆ. ಮಗುವಿನ ಹೇಳಿಕೆಯನ್ನು ಇನ್ನೂ ತೆಗೆದುಕೊಂಡಿಲ್ಲ. ಮಗು ತನ್ನ ಹೇಳಿಕೆಯನ್ನು ನೀಡಿದ ನಂತರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸೂರಜ್‌ಕುಂಡ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಶಂಶೇರ್ ಸಿಂಗ್ ತಿಳಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ