Video Viral: ಅನಂತ್ ಅಂಬಾನಿಯ 2ನೇ ಪ್ರೀ ವೆಡ್ಡಿಂಗ್ ಸಂಭ್ರಮದ ಐಷಾರಾಮಿ ಹಡಗು ಹೇಗಿದೆ ನೋಡಿ

Anant Ambani -Radhika Pre-wedding cruise Party: ಅನಂತ್​​ ಅಂಬಾನಿಯ ಪ್ರೀ ವೆಡ್ಡಿಂಗ್ ಕ್ರೂಸ್ ಪಾರ್ಟಿಗಾಗಿ ಈಗಾಗಲೇ ಆಹ್ವಾನಿತರು ಮತ್ತು ಕುಟುಂಬಸ್ಥರು ಇಟಲಿಗೆ ತೆರಳಿದ್ದಾರೆ. ಮೇ 29ರಿಂದ ಜೂ.1ರವರೆಗೆ 2ನೇ ಪ್ರೀ ವೆಡ್ಡಿಂಗ್ ಸಂಭ್ರಮ ನಡೆಯಲಿದೆ. ಈ ಐಷಾರಾಮಿ ಹಡಗು ಒಳಗೆ ಹೇಗಿದೆ? ಒಳಗೆ ಏನೆಲ್ಲಾ ಸೌಕರ್ಯಗಳನ್ನು ಒಳಗೊಂಡಿದೆ? ಎಂಬುದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

Video Viral: ಅನಂತ್ ಅಂಬಾನಿಯ 2ನೇ ಪ್ರೀ ವೆಡ್ಡಿಂಗ್ ಸಂಭ್ರಮದ ಐಷಾರಾಮಿ ಹಡಗು ಹೇಗಿದೆ ನೋಡಿ
ಅನಂತ್ ಅಂಬಾನಿಯ 2ನೇ ಪ್ರೀ ವೆಡ್ಡಿಂಗ್ ಸಂಭ್ರಮದ ಐಷಾರಾಮಿ ಹಡಗುImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on: May 28, 2024 | 3:14 PM

ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಅವರನ್ನು ಇದೇ ಜುಲೈನಲ್ಲಿ ವರಿಸಲಿದ್ದಾರೆ. ಇದೀಗಾಗಲೇ ಸಾವಿರಾರೂ ಕೋಟಿ ರೂಪಾಯಿಗಳಲ್ಲಿ ಮೊದಲ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ನಡೆದಿದ್ದು , ಇದೀಗ ಎರಡನೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ನಡೆಯಲಿದ್ದು ಮತ್ತೊಮ್ಮೆ ಸಾವಿರಾರೂ ಕೋಟಿ ರೂಪಾಯಿ ಖರ್ಚು ಮಾಡಲು ಮುಖೇಶ್​ ಅಂಬಾನಿ ಕುಟುಂಬ ಮುಂದಾಗಿದೆ. 2ನೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಐಷಾರಾಮಿ ಹಡಗಿನಲ್ಲಿ ನಡೆಯಲ್ಲಿದ್ದು, ಇದೀಗ ಐಷಾರಾಮಿ ಹಡಗು ಒಳಗೆ ಹೇಗಿದೆ? ಒಳಗೆ ಏನೆಲ್ಲಾ ಸೌಕರ್ಯಗಳನ್ನು ಒಳಗೊಂಡಿದೆ? ಎಂಬುದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ ಕಿರಿಯ ಪುತ್ರ ಅನಂತ್​​ ಅಂಬಾನಿಯ ಕ್ರೂಸ್ ಪಾರ್ಟಿಗಾಗಿ ಈಗಾಗಲೇ ಆಹ್ವಾನಿತರು ಮತ್ತು ಕುಟುಂಬಸ್ಥರು ಇಟಲಿಗೆ ತೆರಳಿದ್ದಾರೆ. ಮೇ 29ರಿಂದ ಜೂ.1ರವರೆಗೆ 2ನೇ ಪ್ರೀ ವೆಡ್ಡಿಂಗ್ ಸಂಭ್ರಮ ನಡೆಯಲಿದ್ದು ಮುಖೇಶ್​​ ಅಂಬಾನಿ ಮತ್ತೊಮ್ಮೆ ಜಗತ್ತನ್ನು ಬೆರಗುಗೊಳಿಸಲಿದ್ದಾರೆ. ಸುಮಾರು 800 ಅತಿಥಿಗಳನ್ನೊಳಗೊಂಡ ಐಷಾರಾಮಿ ಹಡಗಿನಲ್ಲಿ ಸಮುದ್ರದ ಮಧ್ಯೆ ಮೇ 29ರಂದು ಇಟಲಿಯಿಂದ ಹೊರಟುಜೂ.1 ಕ್ಕೆ ಸ್ವಿಜರ್‌ಲ್ಯಾಂಡ್ ತಲುಪಲಿದೆ.

ಇದನ್ನೂ ಓದಿ: ಅಂಬಾನಿ ಮನೆ ಮದುವೆ, ವಿಶೇಷ ಅತಿಥಿಗಳಿಗೆ ಉಡುಗೊರೆ ಕೊಡಲು ಕರೀಂನಗರದಿಂದ ತರಿಸಲಾಗುತ್ತಿದೆ ಬೆಳ್ಳಿ ಫಿಲಿಗ್ರೀ

ಇದೀಗ ಐಷಾರಾಮಿ ಹಡಗು ಹೇಗಿದೆ ಎಂಬುದರ ವಿಡಿಯೋವೊಂದು ವೈರಲ್​ ಆಗಿದೆ. @yourpoookieboo ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. 2023ರ ಜನವರಿ 19ರಂದು ಈ ಜೋಡಿ ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ರಾಧಿಕಾ ಮರ್ಚಂಟ್ ಅವರು ಎನ್ಕೋರ್ ಹೆಲ್ತ್‌ಕೇರ್ ಪ್ರೈವೇಟ್‌ ಲಿಮಿಟೆಡ್ ಸಿಇಒ ವೀರೆನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ. ಮದುವೆ ಲಂಡನ್‌ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ