Shocking News: ವಿಮಾನದೊಳಗೆ ಬೆತ್ತಲೆಯಾಗಿ ಓಡಿದ ಪ್ರಯಾಣಿಕ; ಆಮೇಲೇನಾಯ್ತು?

ಆಕಾಶದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರು ನಗ್ನವಾಗಿ ಓಡಾಡಿದ ಆಘಾತಕಾರಿ ಘಟನೆ ನಡೆದಿದೆ. ಇದರಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ಮುಜುಗರಪಡುವಂತಾಯಿತು. ವಿಮಾನದಲ್ಲಿದ್ದ ಗಗನಸಖಿಯರು ಕೂಡ ಕೆಲಕಾಲ ಆಘಾತಕ್ಕೀಡಾದರು. ಈ ಘಟನೆ ನಡೆದಿದ್ದು ಎಲ್ಲಿ? ಆತ ಹಾಗೆ ಬಟ್ಟೆ ಬಿಚ್ಚಿ ಓಡಾಡಿದ್ದು ಏಕೆ? ಎಂಬ ಕುರಿತು ಮಾಹಿತಿ ಇಲ್ಲಿದೆ.

Shocking News: ವಿಮಾನದೊಳಗೆ ಬೆತ್ತಲೆಯಾಗಿ ಓಡಿದ ಪ್ರಯಾಣಿಕ; ಆಮೇಲೇನಾಯ್ತು?
ವಿಮಾನ
Follow us
ಸುಷ್ಮಾ ಚಕ್ರೆ
|

Updated on: May 29, 2024 | 8:14 AM

ಮೆಲ್ಬೋರ್ನ್: ಪಶ್ಚಿಮ ಕರಾವಳಿಯ ಪರ್ತ್‌ನಿಂದ ಪೂರ್ವ ಕರಾವಳಿಯ ಮೆಲ್ಬೋರ್ನ್‌ಗೆ ಸೋಮವಾರ ಸಂಜೆ ಸಂಚರಿಸುತ್ತಿದ್ದ ಆಸ್ಟ್ರೇಲಿಯಾ ಮೂಲದ ವರ್ಜಿನ್ ಆಸ್ಟ್ರೇಲಿಯಾ ವಿಮಾನದಲ್ಲಿ (Virgin Australia Airplane) ಪ್ರಯಾಣಿಕರೊಬ್ಬರು ಬೆತ್ತಲೆಯಾಗಿ ಓಡಾಡಿರುವ ವಿಚಿತ್ರ ಘಟನೆ (Shocking News) ನಡೆದಿದೆ. ಈ ಘಟನೆಯಿಂದಾಗಿ ವಿಮಾನದ ಹಾರಾಟ 30 ನಿಮಿಷಗಳಷ್ಟು ವಿಳಂಬವಾಯಿತು.

ಆಸ್ಟ್ರೇಲಿಯಾದಿಂದ ಬಂದ ದೇಶೀಯ ವಿಮಾನದಲ್ಲಿ ನಗ್ನವಾಗಿ ಓಡಿದ ಪ್ರಯಾಣಿಕ ಗಗನಸಖಿಯನ್ನು ಕೆಳಗಿಳಿಸಿ ವಿಮಾನವನ್ನು ಅನಿಯಂತ್ರಿತ ಲ್ಯಾಂಡಿಂಗ್ ಮಾಡಲು ಒತ್ತಾಯಿಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಇಂದು ಒಬ್ಬ ವ್ಯಕ್ತಿಯನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ: Viral Video: ಟ್ರಾಫಿಕ್​ನಲ್ಲೇ ರಸ್ತೆಯ ಡಿವೈಡರ್ ಮೇಲೆ ಬೈಕ್ ಓಡಿಸಿದ ಯುವಕ; ಭಯಾನಕ ವಿಡಿಯೋ ವೈರಲ್

ಪ್ರಯಾಣಿಕರೊಬ್ಬರ ವಿಚಿತ್ರ ವರ್ತನೆಯಿಂದ ವಿಮಾನವು ಪರ್ತ್ ಏರ್‌ಪೋರ್ಟ್‌ಗೆ ಹಿಂತಿರುಗುವಂತಾಯಿತು ಎಂದು ಏರ್‌ಲೈನ್ ಹೇಳಿಕೆ ತಿಳಿಸಿದೆ.

ಆಸ್ಟ್ರೇಲಿಯನ್ ಫೆಡರಲ್ ಪೋಲೀಸ್‌ನ ಅಧಿಕಾರಿಗಳು ವಿಮಾನಕ್ಕಾಗಿ ಕಾಯುತ್ತಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತ ತಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಬೆತ್ತಲೆಯಾಗಿ ಓಡಿದ್ದು ಮಾತ್ರವಲ್ಲದೆ ವಿಮಾನದ ಸಿಬ್ಬಂದಿಯನ್ನು ನೆಲಕ್ಕೆ ಕೆಡವಿದ್ದನು. ವಿಮಾನವನ್ನು ಮಧ್ಯದಲ್ಲಿಯೇ ಹಿಂತಿರುಗಿಸುವಂತೆ ಒತ್ತಾಯಿಸಿದ್ದನು ಎಂದು ತಿಳಿಸಿದ್ದಾರೆ.

ಪೊಲೀಸ್ ಹೇಳಿಕೆಯ ಪ್ರಕಾರ, “ಆ ವ್ಯಕ್ತಿಯನ್ನು ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆ ಪ್ರಯಾಣಿಕ ವಿಮಾನದಲ್ಲಿ ಹೇಗೆ ಮತ್ತು ಎಲ್ಲಿ ವಿವಸ್ತ್ರಗೊಂಡರು ಎಂಬುದು ಯಾರಿಗೂ ತಿಳಿದಿಲ್ಲ. ಜೂನ್ 14ರಂದು ಪರ್ತ್ ನ್ಯಾಯಾಲಯಕ್ಕೆ ಹಾಜರಾಗುವಂತೆ ಆ ವ್ಯಕ್ತಿಗೆ ಸಮನ್ಸ್ ನೀಡಲು ಪೊಲೀಸರು ಯೋಜಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ