ಐಷಾರಾಮಿ ಹಡಗಿನಲ್ಲಿ ಮುಕೇಶ್​ ಅಂಬಾನಿ ಪುತ್ರನ ಮತ್ತೊಂದು ಪ್ರೀ ವೆಡ್ಡಿಂಗ್ ಸಂಭ್ರಮ, ಇದಕ್ಕೆಷ್ಟು ಕೋಟಿ ರೂ. ಖರ್ಚು ಮಾಡಲಿದ್ದಾರೆ?

ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಕಿರಿಯ ಪುತ್ರ ಅನಂತ್​​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎರಡನೇ ಪ್ರಿ-ವೆಡ್ಡಿಂಗ್ ಆಚರಣೆಯನ್ನು ಆಯೋಜಿಸಲು ಸಿದ್ಧರಾಗಿದ್ದಾರೆ. ಸುಮಾರು 800 ಅತಿಥಿಗಳನ್ನೊಳಗೊಂಡ ಐಷಾರಾಮಿ ಹಡಗಿನಲ್ಲಿ ಸಮುದ್ರದ ಮಧ್ಯೆ 2ನೇ ಪ್ರೀ ವೆಡ್ಡಿಂಗ್ ಸಂಭ್ರಮ ಮೇ 28 ರಿಂದ 30 ರ ವರೆಗೆ ನಡೆಯಲಿದೆ ಎಂದು ತಿಳಿದುಬಂದಿದೆ.

ಐಷಾರಾಮಿ ಹಡಗಿನಲ್ಲಿ ಮುಕೇಶ್​ ಅಂಬಾನಿ ಪುತ್ರನ ಮತ್ತೊಂದು ಪ್ರೀ ವೆಡ್ಡಿಂಗ್ ಸಂಭ್ರಮ, ಇದಕ್ಕೆಷ್ಟು ಕೋಟಿ ರೂ. ಖರ್ಚು ಮಾಡಲಿದ್ದಾರೆ?
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್
Follow us
ಅಕ್ಷತಾ ವರ್ಕಾಡಿ
|

Updated on:May 21, 2024 | 12:16 PM

ಮಾರ್ಚ್ 1ರಿಂದ 3ರವರೆಗೆ ಸಾವಿರಾರೂ ಕೋಟಿ ರೂಪಾಯಿ ಖರ್ಚು ಮಾಡಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಈ ಪ್ರಿ ವೆಡ್ಡಿಂಗ್ ಕಾರ್ಯಕ್ರಮವನ್ನೇ ಸಾಕಷ್ಟು ಜನರು ಮದುವೆ ಎಂದು ನಂಬಿದ್ದರು. ಆದರೆ ಮದುವೆ ಜುಲೈ 12 ರಂದು ನಡೆಯಲಿದೆ ಎಂದು ಕೇಳಿ ಸಾಕಷ್ಟು ಜನರು ಶಾಕ್​​ಗೆ ಒಳಗಾಗಿದ್ದರು. ಇದೀಗ ಅಂಬಾನಿ ಕುಟುಂಬ ಮತ್ತೊಂದು ಶಾಕ್​ ನೀಡಿದೆ. ವರದಿಗಳ ಪ್ರಕಾರ ಅಂಬಾನಿ ಕುಟುಂಬವು ಅನಂತ್​ ಅಂಬಾನಿಯ ಎರಡನೇ ಪ್ರಿ-ವೆಡ್ಡಿಂಗ್ ಕಾರ್ಯಕ್ರಮವನ್ನು ಆಯೋಜಿಸಲು ಮುಂದಾಗಿದೆ.

ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಕಿರಿಯ ಪುತ್ರ ಅನಂತ್​​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎರಡನೇ ಪ್ರಿ-ವೆಡ್ಡಿಂಗ್ ಆಚರಣೆಯನ್ನು ಆಯೋಜಿಸಲು ಸಿದ್ಧರಾಗಿದ್ದಾರೆ. ಸುಮಾರು 800 ಅತಿಥಿಗಳನ್ನೊಳಗೊಂಡ ಐಷಾರಾಮಿ ಹಡಗಿನಲ್ಲಿ ಸಮುದ್ರದ ಮಧ್ಯೆ ಮುಕೇಶ್​ ಅಂಬಾನಿ ಪುತ್ರನ 2ನೇ ಪ್ರೀ ವೆಡ್ಡಿಂಗ್ ಸಂಭ್ರಮ ಮೇ 28 ಮತ್ತು 30 ರ ನಡುವೆ ನಡೆಯಲಿದೆ ಎಂದು ತಿಳಿದುಬಂದಿದೆ.

ಬಾಲಿವುಡ್​​ನ ಕೆಲ ಸೆಲೆಬ್ರೆಟಿಗಳು ಸೇರಿದಂತೆ ಸುಮಾರು 800 ಅತಿಥಿಗಳು ಭಾಗಿಯಾಗಲಿದ್ದು, ಮೇ 28 ರಂದು ಇಟಲಿಯಿಂದ ಈ ಐಷಾರಾಮಿ ಹಡಗು ಹೊರಡಲಿದ್ದು ಸುಮಾರು 4380 ಕಿಲೋಮೀಟರ್ ದೂರ ಇದು ಕ್ರಮಿಸಲಿದೆ. ಈ ಹಡಗು ಇಟಲಿಯಿಂದ ದಕ್ಷಿಣ ಫ್ರಾನ್ಸ್‌ಗೆ ಹೋಗಲಿದೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:12 pm, Tue, 21 May 24