Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬಾನಿ ಮನೆ ಮದುವೆ, ವಿಶೇಷ ಅತಿಥಿಗಳಿಗೆ ಉಡುಗೊರೆ ಕೊಡಲು ಕರೀಂನಗರದಿಂದ ತರಿಸಲಾಗುತ್ತಿದೆ ಬೆಳ್ಳಿ ಫಿಲಿಗ್ರೀ

GI tagged Karimnagar Silver Filigree artefacts for Ambani wedding: ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿಯ ಮದುವೆ ಬಹಳ ವಿಜೃಂಬನೆಯಿಂದ ನಡೆಯುತ್ತಿದೆ. ಎರಡು ಪ್ರೀವೆಡ್ಡಿಂಗ್ ಕಾರ್ಯಕ್ರಮಗಳು ನಡೆದಿವೆ. ಬಿಲ್ ಗೇಟ್ಸ್, ಮಾರ್ಕ್ ಜುಕರ್ಬರ್ಗ್ ಮೊದಲಾದ ಬಿಸಿನೆಸ್ ದಿಗ್ಗಜರು, ಕೆಲ ದೇಶಗಳ ಪ್ರಧಾನಿ, ಅಧ್ಯಕ್ಷರೂ ಕೂಡ ಆ ಕಾರ್ಯಕ್ರಮಕ್ಕೆ ಬಂದಿದ್ದರು. ಈಗ ಜುಲೈನಲ್ಲಿ ವಿವಾಹ ಮಹೋತ್ಸವ ನಡೆಯಲಿದೆ. ಜಾಗತಿಕ ವಿಶೇಷ ಅತಿಥಿಗಳಿಗೆ ವಿಶೇಷ ಉಡುಗೊರೆ ನೀಡಲು ತೆಲಂಗಾಣದ ಕರೀಮ್​ನಗರ ಸಿಲ್ವರ್ ಫಿಲಿಗ್ರೀ ಕಲಾಕೃತಿಗಳನ್ನು ಕೊಡಲು ಅಂಬಾನಿ ಕುಟುಂಬ ನಿರ್ಧರಿಸಿದೆ. ಈ ಸಿಲ್ವರ್ ಫಿಲಿಗ್ರಿ ವಿಶೇಷತೆಗಳೇನು ನೋಡಿ...

ಅಂಬಾನಿ ಮನೆ ಮದುವೆ, ವಿಶೇಷ ಅತಿಥಿಗಳಿಗೆ ಉಡುಗೊರೆ ಕೊಡಲು ಕರೀಂನಗರದಿಂದ ತರಿಸಲಾಗುತ್ತಿದೆ ಬೆಳ್ಳಿ ಫಿಲಿಗ್ರೀ
ಸಿಲ್ವರ್ ಫಿಲಿಗ್ರೀ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 23, 2024 | 2:37 PM

ಹೈದರಾಬಾದ್, ಮೇ 23: ಜುಲೈನಲ್ಲಿ ನಡೆಯಲಿರುವ ಅನಂತ್ ಅಂಬಾನಿ, ರಾಧಿಕಾ ಮರ್ಚಂಟ್ ವಿವಾಹ ಮಹೋತ್ಸವದಲ್ಲಿ (Anant Ambani Radhika Merchant wedding) ಜಾಗತಿಕ ವಿಶೇಷ ಅತಿಥಿಗಳಿಗೆ ಸಿಲ್ವರ್ ಫಿಲಿಗ್ರೀ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ. ಅದಕ್ಕಾಗಿ ತೆಲಂಗಾಣದ ಕರೀಮ್​ನಗರ್ ಜಿಲ್ಲೆಯ ಬೆಳ್ಳಿ ಕುಸುರಿ ಕಲೆಯ ಫಿಲಿಗ್ರಿಗೆ ಆರ್ಡರ್ ಕೊಡಲಾಗಿದೆ. ಕರೀಮ್​ನಗರದ ಸಿಲ್ವರ್ ಫಿಲಿಗ್ರಿ ಕರಕುಶಲ ಕಲ್ಯಾಣ ಸಂಸ್ಥೆಯಾದ ಸಿಫ್ಕಾದಿಂದ (SIFKA) ಅಂಬಾನಿ ಮದುವೆಗೆ 400 ಸಂಖ್ಯೆಯ ಫಿಲಿಗ್ರಿಗಳು (silver filigree) ಸರಬರಾಜಾಗಲಿವೆ. ಭಾರೀ ಬೆಲೆಬಾಳುವ ವಸ್ತುಗಳಾಗಿವೆ. ಫಿಲಿಗ್ರಿ ಕಲೆ ಬಳಸಿ ಅಲಂಕರಿಸಲಾದ ಜ್ಯುವೆಲರಿ ಬಾಕ್ಸ್, ಪರ್ಸ್, ಟ್ರೇ, ಹಣ್ಣು ಬಟ್ಟಲು ಮತ್ತಿತರ ವಸ್ತುಗಳಿವು. 400 ಬೇರೆ ಬೇರೆ ಫಿಲಿಗ್ರಿ ಕಲಾಕೃತಿಗಳಿಗೆ ಆರ್ಡರ್ ಸಿಕ್ಕಿರುವ ವಿಚಾರವನ್ನು ಮಾಧ್ಯಮಗಳಿಗೆ ಸಿಫ್ಕಾ ಖಚಿತಪಡಿಸಿದೆ.

ಕರೀಮ್​ನಗರದ ಈ ಫಿಲಿಗ್ರಿ ಕಲೆಗೆ ಜಿಐ ಟ್ಯಾಗ್ ಸಿಕ್ಕಿದೆ. ಮುಂಬೈನಲ್ಲಿರುವ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್​ನಲ್ಲಿ ಕೆಲ ವರ್ಷಗಳ ಹಿಂದೆ ಸಿಫ್ಕಾ ಅಧ್ಯಕ್ಷ ಆರೋಜು ಅಶೋಕ್ ಅವರು ಸಿಲ್ವರ್ ಫಿಲಿಗ್ರಿ ಕಲೆಯ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಆಗ ಅವು ನೀತಾ ಅಂಬಾನಿಯ ಗಮನ ಸೆಳೆದಿವೆ. 2023ರ ನವೆಂಬರ್​ನಿಂದ ರಿಲಾಯನ್ಸ್ ರೀಟೇಲ್​ನ ಸ್ವದೇಶ್ ಮಳಿಗೆಗೆ ಸಿಫ್ಕಾದಿಂದ ಫಿಲಿಗ್ರಿ ಕಲಾವಸ್ತುಗಳ ಸರಬರಾಜು ಆಗುತ್ತಾ ಬಂದಿದೆ. ಈ ಕೃತಿಗಳ ಗುಣಮಟ್ಟ ಮತ್ತು ಆಕರ್ಷಣೆಯ ಕಾರಣಕ್ಕೆ ಅಂತಾರಾಷ್ಟ್ರೀಯ ಮಟ್ಟದ ವಿಶೇಷ ಅತಿಥಿಗಳಿಗೆ ಮದುವೆಯಲ್ಲಿ ಉಡುಗೊರೆಯಾಗಿ ಕೊಡಲು ಅಂಬಾನಿ ಕುಟುಂಬ ನಿರ್ಧರಿಸಿದೆ.

ಇದನ್ನೂ ಓದಿ: ಎನ್​ಆರ್​ಐಗಳು ವಿದೇಶೀಯನ್ನು ವಿವಾಹವಾದರೆ ಭಾರತದಲ್ಲಿರುವ ಅವರ ಆಸ್ತಿ ಏನಾಗುತ್ತೆ? ಇಲ್ಲಿದೆ ವಿವರ

ಕರೀಮ್​ನಗರ್ ಫಿಲಿಗ್ರಿ ವಿಶೇಷತೆ ಏನು?

ಭಾರತದಲ್ಲಿ ಒಡಿಶಾ ಸೇರಿದಂತೆ ಕೆಲವೆಡೆ ಫಿಲಿಗ್ರಿ ಕಲೆ ಉಳಿದುಕೊಂಡು ಬಂದಿದೆ. ಇದು ಬೆಳ್ಳಿಯ ತಂತಿ ಅಥವಾ ಎಳೆ ಬಳಸಿ ವಿವಿಧ ವಸ್ತುಗಳಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಕರೀಮ್​ನಗರದಲ್ಲಿ ಶೇ. 92ರಷ್ಟು ಶುದ್ಧತೆಯ ಬೆಳ್ಳಿ ಬಳಸಿ ಸಂಪೂರ್ಣ ಕೈಯಿಂದಲೇ ಫಿಲಿಗ್ರಿ ರಚಿಸಲಾಗುತ್ತದೆ. 2007ರಲ್ಲಿ ಈ ಫಿಲಿಗ್ರಿಗೆ ಜಿಐ ಟ್ಯಾಗ್ ಸಿಕ್ಕಿದೆ.

ಫಿಲಿಗ್ರಿ ಇತಿಹಾಸ ಕೂಡ ಇಂಟರೆಸ್ಟಿಂಗ್

ಕರೀಮ್​ನಗರದಲ್ಲಿ ಕಳೆದ 400 ವರ್ಷಗಳಿಂದ ಫಿಲಿಗ್ರಿ ಕಲೆ ಅಸ್ತಿತ್ವದಲ್ಲಿದೆ. 150 ಕುಟುಂಬಗಳಿಂದ 300 ಕಲಾವಿದರು ಈಗಲೂ ಕೂಡ ಈ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ.

ಇದನ್ನೂ ಓದಿ: ಹತ್ತು ವರ್ಷದಿಂದ ಅಪ್​ಡೇಟ್ ಆಗದ ಆಧಾರ್ ಕಾರ್ಡ್ ನಿಷ್ಕ್ರಿಯವಾಗುತ್ತಾ? ಯುಐಡಿಎಐ ಕೊಟ್ಟ ಮಾಹಿತಿ ಇದು

ಜಾಗತಿಕವಾಗಿ ಫಿಲಿಗ್ರೀ ಕಲೆಗೆ ಕ್ರಿಸ್ತಪೂರ್ವದ ಹಲವು ಶತಮಾನದ ಹಿಂದಿನಷ್ಟು ದೊಡ್ಡ ಇತಿಹಾಸವೇ ಇದೆ. ಗ್ರೀಕರಲ್ಲಿ ಈ ಕಲೆ ಖ್ಯಾತವಾಗಿತ್ತು. ಕುತೂಹಲವೆಂದರೆ ಭಾರತದಲ್ಲಿ ಇರುವ ಫಿಲಿಗ್ರೀ ಕಲೆಯ ಕೆತ್ತನೆ ಶೈಲಿ ಬಹುತೇಕ ಗ್ರೀಕರದ್ದಂತೆಯೇ ಇದೆ ಎನ್ನುತ್ತಾರೆ ಇತಿಹಾಸತಜ್ಞರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:35 pm, Thu, 23 May 24

ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ