Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಭವಿಷ್ಯತ್ಕಾಲಕ್ಕೆ ಇದು ಬೇಕು- ಅಮೆರಿಕದ ಈ ಸ್ಟಾರ್ಟಪ್​ನತ್ತ ಬೊಟ್ಟು ಮಾಡಿದ ಅಜಿತ್ ದೋವಲ್ ಟೀಮ್ ಸದಸ್ಯ

Anshuman Tripathi wants India to join race in AI war: ಎಐ ಗಣಕ ತಯಾರಿಕೆ ಭವಿಷ್ಯದ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದಕ್ಕೆ ಬೇಕಾದ ಚಿಪ್ ಅನ್ನು ತಯಾರಿಸುವ ಕಂಪನಿಗಳಿಗೆ ಬೇಡಿಕೆ ಬರಲಿದೆ. ಡಾಟಾ ಸೆಂಟರ್ ಮತ್ತು ಸೂಪರ್ ಕಂಪ್ಯೂಟರ್​ಗಳಿಗೆ ವೇಫರ್ ಗಾತ್ರದ ಚಿಪ್​ಗಳು ಬೇಕು. ಅಮೆರಿಕದ ಸ್ಟಾರ್ಟಪ್ ಆದ ಸೆರೆಬ್ರಾಸ್ ಸಿಸ್ಟಮ್ಸ್ ಈ ವಿಚಾರದಲ್ಲಿ ಮುಂಚೂಣಿಗೆ ಬರುತ್ತಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಸದಸ್ಯ ಅಂಶುಮಾನ್ ತ್ರಿಪಾಠಿ ಅವರು ಈ ಕಂಪನಿಯತ್ತ ಬೊಟ್ಟು ಮಾಡಿದ್ದಾರೆ.

ಭಾರತ ಭವಿಷ್ಯತ್ಕಾಲಕ್ಕೆ ಇದು ಬೇಕು- ಅಮೆರಿಕದ ಈ ಸ್ಟಾರ್ಟಪ್​ನತ್ತ ಬೊಟ್ಟು ಮಾಡಿದ ಅಜಿತ್ ದೋವಲ್ ಟೀಮ್ ಸದಸ್ಯ
ಅಂಶುಮಾನ್ ತ್ರಿಪಾಠಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 23, 2024 | 12:01 PM

ನವದೆಹಲಿ, ಮೇ 23: ಮುಂದಿನ ದಶಕಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ಗೆ ಸೇರಿದ್ದು. ಇದಕ್ಕೆ ಪೂರಕವಾಗಿರುವಂತಹ ತಂತ್ರಜ್ಞಾನಗಳ ಬೆಳವಣಿಗೆ ಎಷ್ಟು ವೇಗದಲ್ಲಿ ಆಗುತ್ತದೋ ಎಐ ಕೂಡ ಅಷ್ಟೇ ಪ್ರಬಲವಾಗಿರುತ್ತದೆ. ಈ ನಿಟ್ಟಿನಲ್ಲಿ ಜಾಗತಿಕವಾಗಿ ಎಐ ಹಾಗೂ ಸಂಬಂಧ ಪಟ್ಟ ತಂತ್ರಜ್ಞಾನಕ್ಕೆ ಪೈಪೋಟಿ ಹೆಚ್ಚುತ್ತಿದೆ. ಅದರಲ್ಲೂ ಅಮೆರಿಕ ಮತ್ತು ಚೀನಾ ನಡುವೆ ತುರುಸಿನ ಸ್ಪರ್ಧೆ ಇದೆ. ಶೀತಲ ಸಮರ ಕಾಲದಲ್ಲಿ ಅಮೆರಿಕ, ರಷ್ಯಾ ಮಧ್ಯೆ ಇದ್ದಂತಹ ಒಳ ವೈರತ್ವ ಈಗ ಅಮೆರಿಕ ಮತ್ತು ರಷ್ಯಾ ಮಧ್ಯೆ ಆರಂಭಗೊಂಡಂತೆ ಇದೆ. ಭವಿಷ್ಯತ್ಕಾಲದ ಅನಿವಾರ್ಯವಾದ ಎಐನಲ್ಲಿ ಭಾರತ ಮುಂಚೂಣಿಗೆ ಬರಲು ಹೊರಟಿದೆ. ಆದರೆ, ಇದು ಸಾಧ್ಯವಾ? ಓಪನ್​ಎಐನಂತಹ (OpenAI) ಒಂದು ಸಂಸ್ಥೆಯನ್ನು ಭಾರತದಲ್ಲಿ ಆರಂಭಿಸಲು ಸದ್ಯಕ್ಕಂತೂ ಸಾಧ್ಯವಿಲ್ಲ ಎಂದು ಈ ಹಿಂದೆ ಸ್ಯಾಮ್ ಆಲ್ಟ್​​ಮ್ಯಾನ್ ಹೇಳಿದ್ದರು. ಆದರೂ ಭಾರತದಲ್ಲಿ ಸಣ್ಣಪುಟ್ಟದಾಗಿ ಪ್ರಯತ್ನಗಳು ನಡೆಯುತ್ತಿವೆ. ಇದೇ ವೇಳೆ, ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರಿ ಬೋರ್ಡ್ ಸದಸ್ಯ ಅಂಶುಮಾನ್ ತ್ರಿಪಾಠಿ (Anshuman Tripathi) ಅವರು ಅಮೆರಿಕದ ಪುಟ್ಟ ಸ್ಟಾರ್ಟಪ್​ನತ್ತ ಬೊಟ್ಟು ಮಾಡಿ, ಭಾರತದ ಭವಿಷ್ಯತ್ಕಾಲಕ್ಕೆ ಇದು ಬೇಕಾಗುತ್ತದೆ ಎಂದಿದ್ದಾರೆ.

ಅಂಶುಮಾನ್ ತ್ರಿಪಾಠಿ ಅವರು ಬೊಟ್ಟು ಮಾಡಿದ ಕಂಪನಿ ಹೆಸರು ಸೆರಿಬ್ರಾಸ್ ಸಿಸ್ಟಮ್ಸ್ (Cerebras Systems). ಇದು ವೇಫರ್ ಗಾತ್ರದ ಚಿಪ್​ಗಳನ್ನು (wafer sized chips) ತಯಾರಿಸುತ್ತದೆ. 8ರಿಂದ 12 ಇಂಚ್ ಗಾತ್ರ ಇರುತ್ತದೆ ಈ ವೇಫರ್ ಚಿಪ್. ಸಾಮಾನ್ಯವಾಗಿ ಒಂದು ವೇಫರ್​ನಿಂದ ಹಲವು ಚಿಪ್​ಗಳನ್ನು ತಯಾರಿಸಲಾಗುತ್ತಿದೆ. ಆದರೆ, ಸೆರಿಬ್ರಾಸ್ ಸಿಸ್ಟಮ್ಸ್ ಇಡೀ ವೇಫರ್ ಗಾತ್ರದಲ್ಲಿ ಚಿಪ್ ತಯಾರಿಸುತ್ತಿದೆ. ಇದು ಎಐ ಗಣಿಕೆ ಅಥವಾ ಕಾಂಪ್ಯೂಟೇಶನ್​ಗೆ ಬಹಳ ಅಗತ್ಯ. ಶಕ್ತಿಶಾಲಿ ಡಾಟಾ ಸೆಂಟರ್ ಮತ್ತು ಸೂಪರ್ ಕಂಪ್ಯೂಟರ್​ಗಳಿಗೆ ಈ ವೇಫರ್ ಚಿಪ್​ಗಳನ್ನು ಬಳಸಲಾಗುತ್ತಿದೆ. ಇಂಥ ಚಿಪ್ ತಯಾರಿಸುವುದರಲ್ಲಿ ಸೆರಿಬ್ರಾಸ್ ಸಿಸ್ಟಮ್ಸ್ ಮುಂಚೂಣಿಗೆ ಬರುತ್ತಿದೆ.

ಇದನ್ನೂ ಓದಿ: ಕಂಪನಿ ಕಾನೂನು ಉಲ್ಲಂಘನೆ ಆರೋಪ, ಲಿಂಕ್ಡ್​ಇನ್ ಸಂಸ್ಥೆ, ಸತ್ಯ ನಾದೆಲ್ಲಾ ಹಾಗೂ ಇತರ ಎಂಟು ಮಂದಿಗೆ ದಂಡ ವಿಧಿಸಿದ ಸರ್ಕಾರ

‘ಎನ್​ವಿಡಿಯಾ ಈ ಗತಕಾಲ ಎನ್ನಬಹುದು. ವೇಫರ್ ಮಟ್ಟದ ಜೋಡಣೆ ಈಗ ಹೊಸ ತಂತ್ರಜ್ಞಾನವಾಗಿದೆ. ಎಐ ಕಾಂಪ್ಯೂಟೇಶನ್​ಗೆ ಬೇಕಾದ ವೇಫರ್ ಸ್ಕೇಲ್ ಚಿಪ್ ಅನ್ನು ತಯಾರಿಸುವುದು ಹೊಸ ತಂತ್ರಜ್ಞಾನವಾಗಿದೆ. ಇವು ಸದ್ಯೋಭವಿಷ್ಯದಲ್ಲಿ ಸೆಮಿಕಂಡಕ್ಟರ್ ಅನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬಲ್ಲುವು’ ಎಂದು ಅಂಶುಮಾನ್ ತ್ರಿಪಾಠಿ ಹೇಳಿದ್ದಾರೆ.

‘ಈ ಚಿಪ್​ಗಳು ಸಣ್ಣವಲ್ಲ. 8-12 ಇಂಚಿನ ವೇಫರ್. ಇಡೀ ವೇಫರ್ ಒಂದು ಚಿಪ್ ಆಗಿರುತ್ತದೆ. ಹೊಸ ಡಾಟಾ ಸೆಂಟರ್​ಗಳಲ್ಲಿ ಇದನ್ನು ಅಳವಡಿಸಲಾಗುತ್ತಿದೆ. ಇದಕ್ಕಾಗಿ ಅಮೆರಿಕ ಮತ್ತು ಚೀನಾ ಪೈಪೋಟಿ ಮಾಡುತ್ತಿವೆ. ನಾವು ಈ ರೇಸ್​ಗೆ ಸೇರಿಕೊಳ್ಳಬೇಕು,’ ಎಂದು ಅಜಿತ್ ದೋವಲ್ ನೇತೃತ್ವದ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಸದಸ್ಯರಾದ ತ್ರಿಪಾಠಿ ಅವರು ಗುರುಗ್ರಾಮ್​ನಲ್ಲಿ ಇತ್ತೀಚೆಗೆ ನಡೆದ ಎಐ ಆಲಯನ್ಸ್ ಸಭೆಯಲ್ಲಿ ತಿಳಿಸಿದ್ದಾರೆ.

ಅಮೆರಿಕದ ಸೆರೆಬ್ರಾಸ್ ಸಿಸ್ಟಮ್ಸ್ ಸಂಸ್ಥೆ ಈಗಷ್ಟೇ ಐಪಿಒಗೆ ಬರಲು ಹೊರಟಿದೆ. ಎಐ ಕ್ಷೇತ್ರದಲ್ಲಿ ಸೂಪರ್ ಸ್ಟಾರ್ ಆಗಿರುವ ಎನ್​ವಿಡಿಯಾಗೆ ಚಿಪ್ ತಯಾರಿಕೆಯಲ್ಲಿ ಪೈಪೋಟಿ ಕೊಡಲು ಸೆರಬ್ರಾಸ್ ಹೊರಟಿದೆ. ಎಐ ಸಿಸ್ಟಮ್​ಗಳಿಗೆ ಟ್ರೈನಿಂಗ್ ಕೊಡಬಲ್ಲಂತಹ ಕಂಪ್ಯೂಟಿಂಗ್ ಸಿಸ್ಟಂ ಅನ್ನು ಸೆರೆಬ್ರಾಸ್ ರಚಿಸಿದೆ.

ಇದನ್ನೂ ಓದಿ: ಎನ್​ಆರ್​ಐಗಳು ವಿದೇಶೀಯನ್ನು ವಿವಾಹವಾದರೆ ಭಾರತದಲ್ಲಿರುವ ಅವರ ಆಸ್ತಿ ಏನಾಗುತ್ತೆ? ಇಲ್ಲಿದೆ ವಿವರ

ಜರ್ಮನಿ ದೇಶದ ಅಲೆಫ್ ಆಲ್ಫಾ ಎಂಬ ಕಂಪನಿ ಮಿಲಿಟರಿಗೆ ಎಐ ಅಭಿವೃದ್ಧಿಪಡಿಸುತ್ತಿದೆ. ಅದಕ್ಕಾಗಿ ಸೆರೆಬ್ರಾಸ್​ನಿಂದ ಒಂದು ಸೂಪರ್ ಕಂಪ್ಯೂಟಿಂಗ್ ಸಿಸ್ಟಂಗೆ ಆರ್ಡರ್ ಕೊಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್