ಎನ್​ಆರ್​ಐಗಳು ವಿದೇಶೀಯನ್ನು ವಿವಾಹವಾದರೆ ಭಾರತದಲ್ಲಿರುವ ಅವರ ಆಸ್ತಿ ಏನಾಗುತ್ತೆ? ಇಲ್ಲಿದೆ ವಿವರ

NRI marrying foreigner abroad: ಭಾರತದಿಂದ ವಿದೇಶಕ್ಕೆ ಹೋಗಿ ನೆಲಸುವ ಅನಿವಾಸಿ ಭಾರತೀಯರು ಅಲ್ಲಿಯೇ ವಿದೇಶಿಗರೊಬ್ಬರನ್ನು ಮದುವೆಯಾದರೆ ಅವರ ಸಂಗಾತಿ ಮತ್ತು ಮಕ್ಕಳಿಗೆ ಭಾರತದಲ್ಲಿರುವ ಆಸ್ತಿಯಲ್ಲಿ ಹಕ್ಕು ಇರುತ್ತದಾ? ಕಾನೂನು ತಜ್ಞರ ಪ್ರಕಾರ ಎನ್​ಆರ್​ಐನ ವಿದೇಶೀ ಸಂಗಾತಿಗೆ ಆಸ್ತಿಯಲ್ಲಿ ಹಕ್ಕು ಇದ್ದೇ ಇರುತ್ತದೆ. ವಿದೇಶದಲ್ಲಿ ಮದುವೆಯಾದಾಗ ಅಲ್ಲಿಯೇ ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಿ, ಅದರ ದೃಢೀಕರಣ ಪತ್ರ ಪಡೆದಿದ್ದರೆ ಸಾಕು. ಅದನ್ನಿಟ್ಟುಕೊಂಡು ಎನ್​ಆರ್​ಐನ ಭಾರತೀಯ ಆಸ್ತಿಯಲ್ಲಿ ಹಕ್ಕು ಸಾಧಿಸಬಹುದು.

ಎನ್​ಆರ್​ಐಗಳು ವಿದೇಶೀಯನ್ನು ವಿವಾಹವಾದರೆ ಭಾರತದಲ್ಲಿರುವ ಅವರ ಆಸ್ತಿ ಏನಾಗುತ್ತೆ? ಇಲ್ಲಿದೆ ವಿವರ
ವಿವಾಹ
Follow us
|

Updated on: May 22, 2024 | 6:47 PM

ನವದೆಹಲಿ, ಮೇ 22: ಆಸ್ತಿ ವಾರಸುದಾರಿಕೆ ವಿಚಾರವು ಸಾಮಾನ್ಯವಾಗಿ ಮೇಲ್ನೋಟಕ್ಕೆ ಕಾಣುವಷ್ಟು ಸರಳವೂ ಅಲ್ಲ, ಅಥವಾ ಅಂಥ ಜಟಿಲವೂ ಅಲ್ಲ. ಅದರಲ್ಲೂ ಅನಿವಾಸಿ ಭಾರತೀಯರು (NRI) ವಿದೇಶೀಯರನ್ನು ಮದುವೆಯಾದರೆ ಭಾರತದಲ್ಲಿರುವ ಅವರ ಆಸ್ತಿ ಏನಾಗುತ್ತದೆ ಎಂಬ ಪ್ರಶ್ನೆ ಕುತೂಹಲಕಾರಿ ಎನಿಸುತ್ತದೆ. ಸಾಮಾನ್ಯವಾಗಿ ಭಾರತದಲ್ಲಿರುವ ಅವರ ಆಸ್ತಿಯ ವಾರಸುದಾರಿಕೆ ಹಕ್ಕು ಎನ್​ಆರ್​ಐನ ಕುಟುಂಬ ಸದಸ್ಯರಿಗೆ ಇದ್ದೇ ಇರುತ್ತದೆ. ಇದನ್ನು ನಿರಾಕರಿಸಲು ಸಾಧ್ಯವಾಗುವುದಿಲ್ಲ. ಆದರೆ, ಅದಕ್ಕೆ ಸಂಬಂಧ ಪಟ್ಟ ಒಂದಷ್ಟು ನೀತಿ ನಿಯಮಗಳನ್ನು ತಿಳಿದಿರುವುದು ಉತ್ತಮ.

ಮೊದಲಿಗೆ ಭಾರತದಲ್ಲಿ ಆಸ್ತಿ ಹೊಂದಿರುವ ಎನ್​ಆರ್​ಐಗಳು ವಿದೇಶದಲ್ಲಿ ಮದುವೆಯಾದರೆ ತಮ್ಮ ವಿವಾಹವನ್ನು ಭಾರತದಲ್ಲಿ ನೊಂದಾಯಿಸಿಕೊಳ್ಳಬೇಕಿಲ್ಲ. ಇದು ಗಮನಿಸಬೇಕಾದ ಅಂಶ. ಯಾವ ದೇಶದಲ್ಲಿ ಇವರ ಮದುವೆ ಆಗಿರುತ್ತದೋ ಅಲ್ಲಿಯ ಸ್ಥಳೀಯ ಕಾನೂನು ಪ್ರಕಾರ ವಿವಾಹ ನೊಂದಣಿ ಮಾಡಿಸಿದರೆ ಸಾಕು. ಅವರ ಪತಿ ಅಥವಾ ಪತ್ನಿ ಮತ್ತು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ಇರುತ್ತದೆ.

ಇದನ್ನೂ ಓದಿ: ತೆರಿಗೆ, ಶುಲ್ಕಗಳು ಲಾಭ ತಿಂದುಹಾಕೀತು ಜೋಕೆ; ಷೇರುಪೇಟೆಗೆ ಹೊಸಬರಾಗಿದ್ದರೆ ಈ ಟಿಪ್ಸ್ ತಿಳಿದಿರಿ

ಅಷ್ಟೇ ಅಲ್ಲ, ಎನ್​ಆರ್​ಐಗಳು ವಿದೇಶಗಳಲ್ಲಿ ಲಿವ್ ಇನ್ ರಿಲೇಶನ್​ಶಿಪ್ ಹೊಂದಿ ಅದರಿಂದ ಹುಟ್ಟಿದ ಮಕ್ಕಳು, ಅಥವಾ ವಿದೇಶದಲ್ಲಿ ಇವರು ದತ್ತುಪಡೆದ ಮಕ್ಕಳೂ ಕೂಡ ಆಸ್ತಿ ಪಡೆಯಲು ಅಡ್ಡಿ ಇರುವುದಿಲ್ಲ. ಈ ಬಗ್ಗೆ ಭಾರತದ ಕೋರ್ಟ್ ತೀರ್ಪುಗಳು ಪೂರಕವಾಗಿವೆ.

ಮದುವೆ ನೊಂದಣಿ ವಿಚಾರದಲ್ಲಿ ಎನ್​ಆರ್​ಐಗಳಿಗೆ ಎರಡು ಆಯ್ಕೆಗಳಿವೆ. ವಿದೇಶದಲ್ಲಿ ಮದುವೆಯಾಗಿ ಅಲ್ಲಿನ ಕಾನೂನು ಪ್ರಕಾರ ವಿವಾಹ ನೊಂದಣಿ ಪಡೆಯಬೇಕು. ಮತ್ತು ಅದರ ದೃಢೀಕರಣ ಪತ್ರ ಪಡೆಯಬೇಕು. ಎರಡನೇ ಆಯ್ಕೆ ಎಂದರೆ ಫಾರೀನ್ ಮ್ಯಾರೇಜ್ ಆ್ಯಕ್ಟ್ ಅಡಿಯಲ್ಲಿ ಮದುವೆ ನೊಂದಣಿ ಮಾಡಿಸಬೇಕು.

ಎರಡನೇ ಆಯ್ಕೆಯಾದ ವಿದೇಶೀ ವಿವಾಹ ಕಾಯ್ದೆ 1969ರ ಅಡಿಯಲ್ಲಿ ವಿದೇಶದಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಯಲ್ಲಿರುವ ಅಧಿಕಾರಿಗಳಿಂದ ವಿವಾಹ ಪ್ರಮಾಣ ಪತ್ರ ಪಡೆಯಬೇಕು. ಇವೆರಡು ದಾಖಲೆಗಳು ಭಾರತದಲ್ಲಿ ಆಸ್ತಿ ವರ್ಗಾವಣೆ ಮಾಡಿಕೊಳ್ಳಲು ಸಾಕಾಗುತ್ತವೆ.

ಇದನ್ನೂ ಓದಿ: ಹಡಗು ಅಲ್ಲಿಂದ ಇಲ್ಲಿ ಬರುವಷ್ಟರಲ್ಲಿ ಬೆಲೆ ದುಪ್ಪಟ್ಟು; ಯುಪಿಎ ಟೈಮಲ್ಲಿ ಅದಾನಿ ಬಿಸಿನೆಸ್ ಹೇಗಿತ್ತು ನೋಡಿ

ವಿವಾಹ ಪ್ರಮಾಣಪತ್ರವು ಆಸ್ತಿ ಹಕ್ಕುದಾರಿಕೆ ಪಡೆಯಲು ಮಾತ್ರವಲ್ಲ, ವಿದೇಶೀ ಸಂಗಾತಿಗೆ ಪಾಸ್​ಪೋರ್ಟ್ ಮಾಡಿಸಲು, ಭಾರತದಲ್ಲಿ ಖಾತೆ ತೆರೆಯಲು ಮತ್ತಿತರ ಕಾರ್ಯಗಳಿಗೆ ಸಹಕಾರಿ ಆಗುತ್ತದೆ.

ಎನ್​ಆರ್​ಐಗಳು ವಿದೇಶದಲ್ಲಿ ಮದುವೆಯಾದರೆ 30 ದಿನದೊಳಗೆ ಭಾರತದಲ್ಲಿ ವಿವಾಹ ನೊಂದಣಿ ಮಾಡಿಸಬೇಕು ಎನ್ನುವಂತಹ ಕಾನೂನನ್ನು ರೂಪಿಸಲು ಸರ್ಕಾರ ಪ್ರಯತ್ನಿಸಿತ್ತು. ಆದರೆ ಆ ಮಸೂದೆಗೆ ಸಂಸತ್ತಿನಲ್ಲಿ ಅಂಗೀಕಾರ ಸಿಕ್ಕಿಲ್ಲ. ಮುಂದೆ ಆ ಕಾನೂನು ಬಂದರೆ ಬರಬಹುದು. ಸದ್ಯಕ್ಕೆ ವಿದೇಶದಲ್ಲಿ ಮದುವೆಯಾಗುವ ಅನಿವಾಸಿ ಭಾರತೀಯರು ಅಲ್ಲಿಯ ಕಾನೂನು ಪ್ರಕಾರ ವಿವಾಹ ನೊಂದಣಿ ಮಾಡಿಸಿ ಅದರ ಅಪೋಸ್ಟೈಲ್ ಪಡೆದರೆ ಸಾಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು