AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಂಜಾನ್ ಪ್ರಾರ್ಥನೆ ವೇಳೆ ಮೊಳಗಿದ ಪ್ಯಾಲಿಸ್ತಾನಿ ಪರ ಘೋಷಣೆ, ಪ್ಲೇ ಕಾರ್ಡ್ ಪ್ರದರ್ಶನ

ರಂಜಾನ್ ಹಬ್ಬದ ಸಂದರ್ಭದಲ್ಲಿ ಕರ್ನಾಟಕದ ವಿವಿಧೆಡೆ ಪ್ಯಾಲೆಸ್ತೀನ್​ಗೆ ಬೆಂಬಲ ವ್ಯಕ್ತಪಡಿಸುವ ವ್ಯಕ್ತಪಡಿಸುವ ಘೋಷಣೆ ಮೊಳಗಿದವು. ಅಲ್ಲದೇ ಪ್ಯಾಲೆಸ್ತೀನ್​ ಪರ ಫಲಕಗಳನ್ನು ಪ್ರದರ್ಶಿಸಲಾಯಿತು. ಕೊಪ್ಪಳ ಜಿಲ್ಲೆಗಳಲ್ಲಿ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಲಾಯಿತು. ಹುಬ್ಬಳ್ಳಿಯಲ್ಲಿ ಸಂಘ ಪರಿವಾರದ ವಿರುದ್ಧ ಪೋಸ್ಟರ್ ಪ್ರದರ್ಶಿಸಲಾಗಿದ್ದು, ಎಫ್​ಐಆರ್​ ದಾಖಲಾಗಿದೆ.

Follow us
Basavaraj Yaraganavi
| Updated By: ವಿವೇಕ ಬಿರಾದಾರ

Updated on:Mar 31, 2025 | 11:03 PM

ಶಿವಮೊಗ್ಗ/ ಕೊಪ್ಪಳ, ಮಾರ್ಚ್​ 31: ದೇಶಾದ್ಯಂತ ಸೋಮವಾರ (ಮಾ.31) ಪ್ರವಿತ್ರ ರಂಜಾನ್ (Ramzan)​ ಹಬ್ಬವನ್ನು ಆಚರಿಸಲಾಯಿತು. ಶಿವಮೊಗ್ಗ (Shivamogga) ಜಿಲ್ಲೆ ಸಾಗರದ ಈದ್ಗಾ ಮೈದಾನದಲ್ಲಿ ನಮಾಜ್ ಬಳಿಕ ಎಸ್​ಡಿಪಿಐ ‘ಪ್ಯಾಲೆಸ್ತೀನ್ ಫ್ರೀ’ (Palestine) ನಾಮಫಲಕ ಪ್ರದರ್ಶನ ಮಾಡಿತು. ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಮರು ಸಾಗರದ ಕೆಳದಿ ರಸ್ತೆಯ ಈದ್ಗಾ ಮೈದಾನದಲ್ಲಿ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಬಳಿಕ ಎಸ್​ಡಿಪಿಐ ಸಂಘಟನೆ ಕಾರ್ಯಕರ್ತರು ‘ಪ್ಯಾಲೆಸ್ತೀನ್ ಫ್ರೀ’, ಪ್ಯಾಲೆಸ್ತೀನ್, ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿ ನಿಲ್ಲಿಸುವಂತೆ ಫಲಕ ಪ್ರದರ್ಶಿಸಿದರು.

ಪ್ಯಾಲೆಸ್ತೀನ್ ಪರ ಘೋಷಣೆ

ಕೊಪ್ಪಳ: ಗಂಗಾವತಿಯಲ್ಲಿ ಬೆಳಗ್ಗೆ ಪ್ರಾರ್ಥನೆ ವೇಳೆ ಪ್ಯಾಲೆಸ್ತೀನ್​ ಪರ ಘೋಷಣೆ ಕೂಗಲಾಯಿತು. ಪ್ಯಾಲೆಸ್ತೀನ್ ಪರ ಮತ್ತು ವಕ್ಫ್​​ ತಿದ್ದುಪಡಿ ಬಿಲ್ ವಿರುದ್ಧ ಘೋಷಣೆಗಳನ್ನು ಕಿಡಿಗೇಡಿಗಳು ಹಾಕಿದರು. ಪ್ಯಾಲೆಸ್ತೀನ್​ ಪರ ಘೋಷಣೆ ಕೂಗಿದ್ದ ಆರು ಮಂದಿ ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದರು.

ಇದನ್ನೂ ನೋಡಿ: ಪಿಒಕೆಯಲ್ಲಿ ಹಮಾಸ್ ನಾಯಕನಿಗೆ ವಿಐಪಿ ಸ್ವಾಗತ, ಉಗ್ರರಿಂದ ಭಾರತ ವಿರೋಧಿ ರ್‍ಯಾಲಿ

ಇದನ್ನೂ ಓದಿ
Image
ಪ್ಯಾಲೆಸ್ತೀನಿಯರು ಒತ್ತೆಯಾಳಾಗಿ ಇರಿಸಿದ್ದ 10 ಮಂದಿ ಭಾರತೀಯರ ರಕ್ಷಣೆ
Image
ಪ್ಯಾಲೆಸ್ತೀನ್​ನ 90 ಕೈದಿಗಳ ಬಿಡುಗಡೆ ಪ್ರತಿಯಾಗಿ 3 ಒತ್ತೆಯಾಳುಗಳ ಬಿಡುಗಡೆ
Image
Video: ಸಂಸತ್ತಿಗೆ ಪ್ಯಾಲೆಸ್ತೀನ್ ಬ್ಯಾಗ್ ಹಿಡಿದು ಬಂದ ಪ್ರಿಯಾಂಕಾ ಗಾಂಧಿ
Image
ಯುದ್ಧ ನಿಲ್ಲಿಸಿ, ಶಾಂತಿ ನೆಲಸಲಿ: ಕಲಬುರಗಿಯಲ್ಲಿ ಧರಣಿ

ಸಂಘ ಪರಿವಾರಕ್ಕೆ ಅವಹೇಳನ ಮಾಡಿ ಭಿತ್ತಿಪತ್ರ ಪ್ರದರ್ಶನ

ಹುಬ್ಬಳ್ಳಿ: ಹುಬ್ಬಳ್ಳಿಯ ರಾಣಿ ಚನ್ನಮ್ಮ ವೃತ್ತದಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಸಂಘ ಪರಿವಾರವನ್ನು ಅವಹೇಳನ ಮಾಡಿ ಪ್ಲೇ ಕಾರ್ಡ್ ಪ್ರದರ್ಶನ ಮಾಡಿದ್ದSDPI ಕಾರ್ಯಕರ್ತರ ವಿರುದ್ಧ ಉಪನಗರ‌ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಇಂದು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ವೇಳೆ ಭಿತ್ತಿಪತ್ರ ಪ್ರದರ್ಶನ ಮಾಡಲಾಯಿತು. ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಈ ಸಂಬಂಧ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ವಕೀಲರ ಸಂಘ ದೂರು ನೀಡಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:02 pm, Mon, 31 March 25