ಪ್ಯಾಲೆಸ್ತೀನಿಯರು ಒತ್ತೆಯಾಳಾಗಿ ಇರಿಸಿಕೊಂಡಿದ್ದ 10 ಮಂದಿ ಭಾರತೀಯ ಕಾರ್ಮಿಕರನ್ನು ರಕ್ಷಿಸಿದ ಇಸ್ರೇಲ್
ಭಾರತದಿಂದ ಸಾವಿರಾರು ಕಾರ್ಮಿಕರು ಕೆಲಸಕ್ಕಾಗಿ ಇಸ್ರೇಲ್‌ಗೆ ಹೋಗಿದ್ದರು. ಇತ್ತೀಚೆಗೆ 10 ಮಂದಿ ಭಾರತೀಯರು ನಾಪತ್ತೆಯಾಗಿದ್ದಾರೆ ಎನ್ನುವ ವಿಷಯ ಬೆಳಕಿಗೆ ಬಂದಿತ್ತು. ಅವರೆಲ್ಲರನ್ನು ಪ್ಯಾಲೆಸ್ತೀನಿಯರು ಅಪಹರಿಸಿದ್ದು, ಇಸ್ರೇಲ್ ಅಧಿಕಾರಿಗಳು ರಕ್ಷಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅವರೆಲ್ಲರನ್ನೂ ಇಸ್ರೇಲ್‌ಗೆ ಮರಳಿ ಕರೆತಂದಿದ್ದಾರೆ. ಅವರೆಲ್ಲರ ಪಾಸ್‌ಪೋರ್ಟ್‌ಗಳನ್ನು ಕಸಿದುಕೊಂಡ ನಂತರ ಒಂದು ತಿಂಗಳಿಗೂ ಹೆಚ್ಚು ಕಾಲ ಒತ್ತೆಯಾಳಾಗಿ ಇರಿಸಲಾಗಿದ್ದ ಹಳ್ಳಿಯಿಂದ ಅವರನ್ನು ರಕ್ಷಿಸಲಾಯಿತು.

ಜರುಸಲೇಮ್, ಮಾರ್ಚ್ 07: ಭಾರತದಿಂದ ಸಾವಿರಾರು ಕಾರ್ಮಿಕರು ಕೆಲಸಕ್ಕಾಗಿ ಇಸ್ರೇಲ್‌ಗೆ ಹೋಗಿದ್ದರು. ಇತ್ತೀಚೆಗೆ 10 ಮಂದಿ ಭಾರತೀಯರು ನಾಪತ್ತೆಯಾಗಿದ್ದಾರೆ ಎನ್ನುವ ವಿಷಯ ಬೆಳಕಿಗೆ ಬಂದಿತ್ತು. ಅವರೆಲ್ಲರನ್ನು ಪ್ಯಾಲೆಸ್ತೀನಿಯರು ಅಪಹರಿಸಿದ್ದು, ಇಸ್ರೇಲ್ ಅಧಿಕಾರಿಗಳು ರಕ್ಷಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅವರೆಲ್ಲರನ್ನೂ ಇಸ್ರೇಲ್‌ಗೆ ಮರಳಿ ಕರೆತಂದಿದ್ದಾರೆ. ಅವರೆಲ್ಲರ ಪಾಸ್‌ಪೋರ್ಟ್‌ಗಳನ್ನು ಕಸಿದುಕೊಂಡ ನಂತರ ಒಂದು ತಿಂಗಳಿಗೂ ಹೆಚ್ಚು ಕಾಲ ಒತ್ತೆಯಾಳಾಗಿ ಇರಿಸಲಾಗಿದ್ದ ಹಳ್ಳಿಯಿಂದ ಅವರನ್ನು ರಕ್ಷಿಸಲಾಯಿತು.
ಪ್ಯಾಲೆಸ್ತೀನಿಯನ್ನರು ಭಾರತೀಯ ಕಾರ್ಮಿಕರನ್ನು ಅಲ್-ಜಯೀಮ್ ಗ್ರಾಮಕ್ಕೆ ಉದ್ಯೋಗದ ಭರವಸೆ ನೀಡಿ ಕರೆದೊಯ್ದಿದ್ದರು. ಬಳಿಕ ಅವರ ಪಾಸ್‌ಪೋರ್ಟ್‌ಗಳನ್ನು ಕಸಿದುಕೊಂಡು ಇಸ್ರೇಲ್‌ಗೆ ತಾನು ಪ್ರವೇಶಿಸಲು ಮುಂದಾಗಿದ್ದರು. ಪಾಸ್ಪೋರ್ಟ್ಗಳ ಅಕ್ರಮ ಬಳಕೆಯನ್ನು ಐಡಿಎಫ್ ಗಮನಿಸಿದೆ. ನಂತರ ಅವುಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಯಿತು. ಗಡಿ ಚೆಕ್‌ಪೋಸ್ಟ್ ಅನ್ನು ಸುಲಭವಾಗಿ ದಾಟಿ ಇಸ್ರೇಲ್‌ಗೆ ಪ್ರವೇಶಿಸಲು ಪ್ಯಾಲೆಸ್ತೀನಿಯರು ಭಾರತೀಯರ ಪಾಸ್‌ಪೋರ್ಟ್‌ಗಳನ್ನು ಬಳಸುತ್ತಿದ್ದರು.
ಮಾಹಿತಿಯ ಪ್ರಕಾರ, ಇಸ್ರೇಲಿ ರಕ್ಷಣಾ ಪಡೆಗಳು ಗಡಿ ಚೆಕ್‌ಪಾಯಿಂಟ್‌ನಲ್ಲಿ ಕೆಲವು ಶಂಕಿತರನ್ನು ತಡೆದವು. ಜನಸಂಖ್ಯಾ ಮತ್ತು ವಲಸೆ ಪ್ರಾಧಿಕಾರವು ಇಸ್ರೇಲ್ ರಕ್ಷಣಾ ಪಡೆಗಳು (IDF) ಮತ್ತು ನ್ಯಾಯ ಸಚಿವಾಲಯದ ಸಹಯೋಗದೊಂದಿಗೆ ರಾತ್ರಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾರ್ಮಿಕರನ್ನು ರಕ್ಷಿಸಿತು. ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಘಟನೆಯ ಬಗ್ಗೆ ಮಾಹಿತಿ ನೀಡಿದೆ.
ಮತ್ತಷ್ಟು ಓದಿ:ಪ್ಯಾಲೆಸ್ತೀನ್ನ 90 ಕೈದಿಗಳ ಬಿಡುಗಡೆ ಪ್ರತಿಯಾಗಿ 3 ಒತ್ತೆಯಾಳುಗಳನ್ನು ಬಿಟ್ಟ ಹಮಾಸ್
ಇಸ್ರೇಲ್ ಅಧಿಕಾರಿಗಳು ಪಶ್ಚಿಮ ದಂಡೆಯಲ್ಲಿ ಕಾಣೆಯಾದ 10 ಭಾರತೀಯ ನಿರ್ಮಾಣ ಕಾರ್ಮಿಕರನ್ನು ಪತ್ತೆಹಚ್ಚಿ ಇಸ್ರೇಲ್‌ಗೆ ಮರಳಿ ಕರೆತಂದಿದ್ದಾರೆ. ಆದಾಗ್ಯೂ, ಈ ವಿಷಯ ಇನ್ನೂ ತನಿಖೆಯಲ್ಲಿದೆ.
ರಾಯಭಾರ ಕಚೇರಿಯು ಇಸ್ರೇಲ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಕಾರ್ಮಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ವಿನಂತಿಸಿದೆ. ಈ ಕಾರ್ಮಿಕರು ಮೂಲತಃ ನಿರ್ಮಾಣ ಉದ್ಯಮದಲ್ಲಿ ಕೆಲಸ ಮಾಡಲು ಇಸ್ರೇಲ್‌ಗೆ ಬಂದಿದ್ದರು.
ಮಾಹಿತಿಯ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಸುಮಾರು 16000 ಭಾರತೀಯ ಕಾರ್ಮಿಕರು ನಿರ್ಮಾಣ ಉದ್ಯಮದಲ್ಲಿ ಕೆಲಸ ಮಾಡಲು ಇಸ್ರೇಲ್‌ಗೆ ಹೋಗಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ