AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಅಯ್ಯಯ್ಯೋ! ಈ ಐಸ್ಕ್ರೀಮ್ ಅನ್ನೋದು ಇಷ್ಟು ರುಚಿಯಾಗಿರುತ್ತಾ?

Ice cream : ಅಯ್ಯೊ ಏನಿದು? ಬೇಡ ಬೇಡ. ನಂಗಿಷ್ಟ ಇಲ್ಲ. ಊಂಹೂ ಇಲ್ಲ ನಾ ತಿನ್ನಲ್ಲ. ಯಾಕೆ ಫೋರ್ಸ್​ ಮಾಡ್ತೀರಿ? ನನಗೆ ಅಳು ಬರ್ತಿದೆ; ನಾಲಗೆಗೆ ಇಟ್ಟಮೇಲೆ? 12 ಮಿಲಿಯನ್​ ಜನ ಫಿದಾ ಆಗಿದಾರೆ ಈ ಕೂಸಿನ ಎಕ್ಸ್​ಪ್ರೆಷನ್​ಗೆ.

Viral Video : ಅಯ್ಯಯ್ಯೋ! ಈ ಐಸ್ಕ್ರೀಮ್ ಅನ್ನೋದು ಇಷ್ಟು ರುಚಿಯಾಗಿರುತ್ತಾ?
ಹೌದಾ ಅಪ್ಪಾ! ಇದು ನಿನಗೆ ಗೊತ್ತಿತ್ತಾ ಇಷ್ಟು ರುಚಿ ಅಂತ?
TV9 Web
| Edited By: ಶ್ರೀದೇವಿ ಕಳಸದ|

Updated on:Sep 09, 2022 | 3:34 PM

Share

Viral Video : ನಿನಗೆ ಬೇಡ ಅಂದ್ರೆ ಬೇಡ. ಆದರೆ ಒಂದು ಸಲ ನಾಲಗೆಗೆ ತಾಕಿಸಿಕೊಂಡು ನೋಡು. ಆಮೇಲೆ ತಿನ್ನು ಅಂತ ಒತ್ತಾಯ ಮಾಡುವುದೇ ಇಲ್ಲ ನಿನಗೆ. ಹೀಗಂತ ಅಮ್ಮಂದಿರು ಪ್ರೀತಿಯಿಂದ ನಂತರ ಜೋರು ಮಾಡಿ ತಮ್ಮ ತಮ್ಮ ಮಕ್ಕಳಿಗೆ ಹೊಸರುಚಿಗಳನ್ನು ತಿನ್ನಲು ಪ್ರೇರೇಪಿಸುತ್ತಾರೆ. ಏಕೆಂದರೆ ಅಮ್ಮಂದಿರಿಗೆ ಅದರ ರುಚಿ ಏನು ಅಂತ ಗೊತ್ತಿರುತ್ತೆ. ಒಮ್ಮೆ ನಾಲಗೆಗೆ ಆ ರುಚಿ ತಾಕಿದರೆ ಮಕ್ಕಳು ತಿಂದೇ ತಿಂತಾರೆ ಅನ್ನೋ ಆತ್ಮವಿಶ್ವಾಸ ಇದ್ದೇ ಇರುತ್ತೆ.  ನಾವೆಲ್ಲರೂ ಈ ಹಂತವನ್ನು ಹಾಯ್ದು ಬಂದವರೇ. ಈಗಿಲ್ಲಿ ಈ ವಿಡಿಯೋದಲ್ಲಿ ಈ ಕೂಸಿಗೆ ಇದರಮ್ಮ ಮೊದಲ ಸಲ ಐಸ್ಕ್ರೀಮ್ ತಿನ್ನಿಸಲು ಪ್ರಯತ್ನಿಸುತ್ತಿದ್ದಾರೆ. ಎಂಥ ಕೆಟ್ಟ ಎಕ್ಸ್​ಪ್ರೆಷನ್​ ಕೊಡುತ್ತದೆ!

ಲಿಝಿ ಪಾಲ್ಮಟೇರ್​ ಎನ್ನುವ ಟ್ವಿಟರ್ ಖಾತೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ಬರೆದ ಒಕ್ಕಣೆಗಳನ್ನು ಓದುವುದೇ ಒಂಥರಾ ಖುಷಿ. ನೀವೇ ಓದಿ ವಿಡಿಯೋ ನೋಡುತ್ತ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಿಜ ತಾನೆ, ಅಮ್ಮ ಹೇಳುವುದು? ಇನ್ನು ಈ ಕೂಸಿಗೆ ಐಸ್ಕ್ರೀಮ್​ ಎಂದರೆ ಸ್ವರ್ಗ. ಎಷ್ಟೇ ಬೇಡವೆನ್ನಿ ಅದು ಕೇಳುವುದೇ ಇಲ್ಲ. ಹೌದು ತಾನೆ? ನೆಗಡಿ, ಕೆಮ್ಮು ಬಂದಾಗಲೂ ಐಸ್ಕ್ರೀಮ್​ ಕೊಡಿಸಲಿಲ್ಲ ಅಂತ ಅಮ್ಮ ಅಪ್ಪನೊಂದಿಗೆ ಜಗಳ ತೆಗೆದಿದ್ದು ನೆನಪಾಗ್ತಿದೆಯಾ? ನಾಳೆ ಈ ಮಗುವೂ ಹೀಗೇ, ಐಸ್ಕ್ರೀಮ್​ಗಾಗಿ ‘ಹೋರಾಟ’ ಮಾಡುವುದೇ. ಪಾಪ ಅದರ ತಪ್ಪೇನಿದೆ? ರುಚಿ ತೋರಿಸಿದವರು ಯಾರು?

12 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಕಮೆಂಟ್​ಗಳ ಮಳೆಯೇ ಸುರಿದಿದೆ.

ನಿಮಗೀಗ ಐಸ್ಕ್ರೀಮ್ ತಿನ್ನುವ ಆಸೆ ಆಗುತ್ತಿದೆಯಾ? ಹಾಗಿದ್ದರೆ ಮತ್ತೆ ಮಗುವಾಗಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:26 pm, Fri, 9 September 22

Follow Us
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?