Viral Video : ಅಮ್ಮ ಕೊಟ್ಟ ಗಿಫ್ಟ್ಗೆ ಈ ಪೋರಿ ಪ್ರತಿಕ್ರಿಯಿಸಿದ್ದು ಹೇಗೆ? ವಿಡಿಯೋ ನೋಡಿ
Mother’s Gift : ಆಟವಾಡಿ ಹೊರಬಂದ ಈ ಪುಟಾಣಿಗೆ ಅಮ್ಮ ಕೊಟ್ಟ ಗಿಫ್ಟ್ ನೋಡಿ ಏನನ್ನಿಸುತ್ತದೆ? 1.8 ಮಿಲಿಯನ್ ಜನರನ್ನು ಹಿಡಿದಿಟ್ಟ ಈ ವಿಡಿಯೋದಲ್ಲಿ ಏನಿದೆ?

Viral Video : ಗಿಫ್ಟ್ ಎಂದರೆ ಏನು? ಯಾರಿಗೆ ಏನಿಷ್ಟವೋ ಅದನ್ನವರಿಗೆ ಕೊಡುವುದು. ನಮಗೆ ಇಷ್ಟವಾಗಿದ್ದನ್ನು ಅವರಿಗೆ ಕೊಡುವುದಲ್ಲ. ಈ ವಿಡಿಯೋ ನೋಡಿ, ಆಟವಾಡಿಕೊಂಡು ತನ್ನದೇ ಲೋಕದಲ್ಲಿ ಮನೆಯೊಳಗೆ ಬರುವ ಈ ಹುಡುಗಿಗೆ ಅಮ್ಮ ಹೊಸ ಗಿಫ್ಟ್ ಬಗ್ಗೆ ಗಮನ ಸೆಳೆಯುತ್ತಾಳೆ. ಏನಿರಬಹುದು ಎಂದು ಹೆಜ್ಜೆ ಮುಂದಿಡುತ್ತಾ ಬರುತ್ತಾಳೆ ಪೋರಿ. ಪೆಟ್ ಬಾಸ್ಕೆಟ್ ತೆರೆದು ನೋಡಿದಾಗ ಭಾವುಕತೆಯಲ್ಲಿ ಮುಳುಗಿಹೋಗುತ್ತಾಳೆ. ನಿನಗೆ ಖುಷಿಯಾ? ಎಂದು ಕೇಳುತ್ತ ಅಮ್ಮನೂ ಹನಿಗಣ್ಣಾಗುತ್ತಾಳೆ. ಅವರಿಬ್ಬರೂ ಅಳುತ್ತಾರೆ, ನಗುತ್ತಾರೆ, ಅಳುತ್ತಾರೆ ನಗುತ್ತಾರೆ. ಇದು ಬದುಕು.
ಅಳುತ್ತಲೇ ಮುದ್ದಾಡುತ್ತಾಳೆ ಈ ಬಾಲಕಿ. ಆ ಪುಟ್ಟ ನಾಯಿಯೋ ಗೋಲಿಕಣ್ಣುಗಳಿಂದ ಇದೆಲ್ಲವನ್ನೂ ನೋಡುತ್ತ, ಮುದ್ದು ಮಾಡಿಸಿಕೊಳ್ಳುತ್ತ ಕುಳಿತುಕೊಳ್ಳುತ್ತದೆ. ಮತ್ತೆ ಸಮಾಧಾನಿಸಿಕೊಂಡ ಹುಡುಗಿ ಅದನ್ನೆತ್ತಿಕೊಂಡು ಸೋಫಾ ಮೇಲೆ ಕುಳಿತು ಹರ್ಷ ವ್ಯಕ್ತಪಡಿಸುತ್ತ ಅಮ್ಮನಿಗೆ ಥ್ಯಾಂಕ್ಸ್ ಹೇಳುತ್ತಾಳೆ. ಈ ವಿಡಿಯೋ ಅನ್ನು 1.8 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಸಾಕಷ್ಟು ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ.
‘ಎಂಥ ಮುದ್ದಾಗಿದೆ’ ಎಂದು ಒಬ್ಬರು, ‘ಅಯ್ಯೋ ಎಂಥ ಸುಂದರ’ ಎಂದು ಇನ್ನೊಬ್ಬರು, ‘ಎಂಥ ಅಮೂಲ್ಯ! ಇಡೀ ಕುಟುಂಬಕ್ಕೆ ಅಭಿನಂದನೆ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ತಾವು ಇಷ್ಟಪಡುವುದು ತಮಗೆ ಸಿಕ್ಕಾಗ ಉಳಿದ ಜಗತ್ತೆಲ್ಲ ಶೂನ್ಯವೆನ್ನಿಸಲಾರಂಭಿಸುತ್ತದೆ ಅಲ್ಲವೆ? ಅದರಲ್ಲೂ ಪ್ರಾಣಿಪ್ರೀತಿಗೆ ಅಂಥ ಕ್ಷಣಗಳನ್ನು ಸೃಷ್ಟಿಸುವ ತಾಕತ್ತಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:10 pm, Fri, 9 September 22