
ಮಕ್ಕಳು ವೇದಿಕೆಯಲ್ಲಿ ಹೋಗಿ ನಿಂತರೆ ಸಾಕು ನೃತ್ಯ ಮಾಡದಿದ್ದರೂ ನೃತ್ಯ ಮಾಡಿದ ಹಾಗೆ ಕಾಣುತ್ತದೆ. ಹೀಗೆ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಮಕ್ಕಳ ತಂಡವೊಂದು ವೇದಿಕೆಯಲ್ಲಿ ನಿಂತು ಕೈ ಕಾಲು ಆಡಿಸುತ್ತಾ ನೃತ್ಯಮಾಡುತ್ತಿದ್ದಾರೆ. ಇವರ ಹಿಂದೆ ಅದೇ ತಂಡದಲ್ಲಿದ್ದ ಮತ್ತೊಂದು ಮಗು ತನಗೂ ನೃತ್ಯಕ್ಕೂ ಸಂಬಂಧವೇ ಇಲ್ಲವೆಂಬಂತೆ ಚೆನ್ನಾಗಿ ನಿದ್ರೆ ಮಾಡಿದೆ. ಈ ಮನಮೋಹಕ ವಿಡಿಯೋ (Video) ಸಖತ್ ವೈರಲ್ (Viral) ಆಗುತ್ತಿದೆ.
ಇದನ್ನೂ ಓದಿ: Trending: ಮೀನುಗಾರಿಕೆ ವೇಳೆ ಮೀನುಗಾರನ ಬಾಯಿಯೊಳಗೆ ನುಗ್ಗಿದ ಮೀನು! ಮುಂದೇನಾಯ್ತು ಗೊತ್ತಾ?
ಮೇ 30 ರಂದು ಚೀನಾದಲ್ಲಿ ಚಿತ್ರೀಕರಿಸಲಾದ ವಿಡಿಯೋ ಇದಾಗಿದೆ. ಮೂರು ವರ್ಷದ ಮುದ್ದಾದ ಬಾಲಕಿ ತನ್ನ ಸುತ್ತಲೂ ನಡೆಯುತ್ತಿರುವ ನೃತ್ಯ ಪ್ರದರ್ಶನದಿಂದ ವಿಚಲಿತಳಾಗದೆ ಗಾಢ ನಿದ್ದೆಯಲ್ಲಿದ್ದಂತೆ ಕಾಣಿಸುತ್ತದೆ. ಯಾಹೂ ನ್ಯೂಸ್ ಪ್ರಕಾರ, ಚೀನಾದ ಚಾಂಗ್‌ಕಿಂಗ್‌ನಲ್ಲಿರುವ ಶಿಶುವಿಹಾರದಲ್ಲಿ ಮಕ್ಕಳ ದಿನದ ಪ್ರದರ್ಶನದ ವೇಳೆ ಬಾಲಕಿ ಮಲಗಿದ್ದಾಳೆ.
ಅವಳ ಸಹಪಾಠಿಗಳು ವೇದಿಕೆಯ ಮೇಲೆ ಅವಳಿಂದ ಕೆಲವೇ ಹೆಜ್ಜೆಗಳ ದೂರದಲ್ಲಿ ನಿಂತು ಗುಲಾಬಿ ಬಣ್ಣದ ಚಿಟ್ಟೆ ವೇಷಭೂಷಣಗಳನ್ನು ಧರಿಸಿ ತಮ್ಮ ನೃತ್ಯವನ್ನು ಪ್ರದರ್ಶಿಸಿದರು. ಪ್ರೇಕ್ಷಕರು ಆರಂಭದಲ್ಲಿ ಬಾಲಕಿ ರೇಷ್ಮೆ ಹುಳುವಿನ ನೃತ್ಯ ಮಾಡುತ್ತಿದ್ದಾಳೆ ಎಂದು ಭಾವಿಸಿದ್ದರು. ಆದರೆ ನಂತರ ಶಿಕ್ಷಕರೊಬ್ಬರು ಅವಳು ನಿಜವಾಗಿಯೂ ನಿದ್ದೆ ಮಾಡುತ್ತಿದ್ದಾಳೆ ಎಂದು ದೃಢಪಡಿಸಿದರು.
ಇದನ್ನೂ ಓದಿ: Trending: ತಂದೆಯ ಹಾಡಿಗೆ ಇ ಐ ಇ ಐ ಓ… ಎಂದ ಮುದ್ದಾದ ಮಗು, ವಿಡಿಯೋ ವೈರಲ್
ವಿಡಿಯೋ ವೀಕ್ಷಿಸಿ:
ಪುಟ್ಟ ಬಾಲಕಿ ಗಾಢ ನಿದ್ದೆಯಲ್ಲಿದ್ದುದನ್ನು ನೋಡಿದ ಆಕೆಯ ಶಿಕ್ಷಕಿ ನೃತ್ಯದ ಸಮಯದಲ್ಲಿ ಆಕೆಗೆ ತೊಂದರೆ ಕೊಡಲಿಲ್ಲ. ವರದಿಗಳ ಪ್ರಕಾರ, ನಿದ್ರಾವಸ್ಥೆಯಲ್ಲಿದ್ದ ವಿದ್ಯಾರ್ಥಿನಿಯನ್ನು ಪ್ರದರ್ಶನದ ನಂತರ ವೇದಿಕೆಯಿಂದ ಹೊರಗೆ ಕರೆದೊಯ್ಯುತ್ತಿದ್ದರೂ ಸಹ ಎಚ್ಚರಗೊಳ್ಳಲಿಲ್ಲ. ಸದ್ಯ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ತಮ್ಮ ಪ್ರೀತಿಯ ಮಾತುಗಳನ್ನು ಆಡಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:57 pm, Sat, 4 June 22