Viral Video : ‘ವರ್ಷದ ಅಟೆನ್ಷನ್​ ಸೀಕರ್’ ಅವಾರ್ಡ್​ ಕೊಡಬಹುದಲ್ವಾ ಈ ನಾಯಿಗೆ

Dog Seeking Attention : ತನ್ನನ್ನೇ ನೋಡಬೇಕು. ತನ್ನೊಂದಿಗಿರುವುದನ್ನು ಬಿಟ್ಟು ಬೇರೆ ಏನೂ ಕೆಲಸ ಮಾಡಲೇಬಾರದು! ಇಂಥ ನಾಯಿಯನ್ನು ಎಲ್ಲಿಯಾದರೂ ನೋಡಿದ್ದಿರಾ? 1.4 ಮಿಲಿಯನ್ ನೆಟ್ಟಿಗರ ಗಮನ ಸೆಳೆದಿದೆ ಈ ನಾಯಿ!

Viral Video : ‘ವರ್ಷದ ಅಟೆನ್ಷನ್​ ಸೀಕರ್’ ಅವಾರ್ಡ್​ ಕೊಡಬಹುದಲ್ವಾ ಈ ನಾಯಿಗೆ
ಸ್ವಲ್ಪ ನನ್ನನ್ನೂ ನೋಡು
Updated By: ಶ್ರೀದೇವಿ ಕಳಸದ

Updated on: Aug 30, 2022 | 4:23 PM

Viral Video : ನಿಮ್ಮ ಗಮನ ಸೆಳೆಯಲು ಏನು ಬೇಕೋ ಅದೆಲ್ಲವನ್ನೂ ಮಾಡುವ ಪ್ರಾಣಿಗಳಲ್ಲಿ ಮೊದಲ ಸ್ಥಾನ ಕೊಡುವುದಾದರೆ ಅದು ನಾಯಿಗೇ. ವಸ್ತುಗಳನ್ನು ಕದಿಯುವುದು, ನುಂಗುವುದು, ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡುವುದು, ಕೂಗುವುದು, ಮುಖ ಉಜ್ಜುವುದು, ಮತ್ತೆ ಮತ್ತೆ ನಿಮ್ಮ ಪ್ರತಿಕ್ರಿಯೆಗಾಗಿ ನಿಮ್ಮತ್ತ ನೋಡಿ ಗಮನ ಸೆಳೆಯುವುದು… ಒಂದಾ ಎರಡಾ ಬರೆಯುತ್ತ ಹೋದರೆ! ಇಲ್ಲಿರುವ ಈ ವಿಡಿಯೋದಲ್ಲಿ ತನ್ನ ಪೋಷಕರು ತನ್ನೆಡೆ ಗಮನ ಸೆಳೆಯಲು ಈ ನಾಯಿ ಏನು ಮಾಡುತ್ತಿದೆ ನೋಡಿ. ಈ ಪುಟ 3 ಮಿಲಿಯನ್​ಗಿಂತಲೂ ಹೆಚ್ಚು ಫಾಲೋವರ್ಸ್​ ಹೊಂದಿದೆ. ಇದು ಡ್ಯಾಶ್​ ದಿ ಕೊರ್ಗಿ ಎಂಬ ನಾಯಿಗೆ ಮೀಸಲಾಗಿದೆ.

ಮೀಟಿಂಗ್​ನಲ್ಲಿರುವ ತನ್ನ ಪೋಷಕನ ಮೇಲೆ ಸತತವಾಗಿ ಚೆಂಡನ್ನು ಎಸೆದು ತನ್ನತ್ತ ನೋಡೂ… ಎಂದು ದುಂಬಾಲು ಬೀಳುತ್ತಿದೆ ಈ ನಾಯಿ. 1.4 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆ ಇದಕ್ಕೆ ದೊರೆತಿದೆ. ಸಾವಿರಾರು ಲೈಕ್​ಗಳು, ನೂರಾರು ವೈವಿಧ್ಯಮಯ ಪ್ರತಿಕ್ರಿಯೆಗಳು ಇಲ್ಲಿವೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:20 pm, Tue, 30 August 22