Viral Video: ಅವ್ರೇ ನಮ್ಗೆ ನೀರ್ ಕೊಡೋದು, ಅದಕ್ಕೆ ನನಗೆ ಬಿಜೆಪಿ ಇಷ್ಟ, ಪುಟ್ಟ ಹುಡುಗನ ಅಭಿಮಾನ
ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವು ದೃಶ್ಯಗಳು ನಮ್ಮ ಮನಮುಟ್ಟುವಂತಿರುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಬಿಜೆಪಿಯ ಪುಟ್ಟ ಅಭಿಮಾನಿಯ ಮಾತುಗಳನ್ನು ಕೇಳಿ ನೆಟ್ಟಿಗರು ಭಾವುಕರಾಗಿದ್ದಾರೆ.
ಸಾಮಾನ್ಯವಾಗಿ ಪುಟ್ಟ ಮಕ್ಕಳಿಗೆ ಸಿನೆಮಾ ಸ್ಟಾರ್ ಗಳು, ಕ್ರಿಕೆಟರ್ಸ್, ಕಾರ್ಟೂನ್ ಪಾತ್ರಗಳೆಂದರೆ ಬಲು ಇಷ್ಟ. ಮಕ್ಕಳೇ ನನ್ಗೆ ದರ್ಶನ್ ಅಂದ್ರೆ ಇಷ್ಟ, ಕೊಹ್ಲಿ ಅಂದ್ರೆ ಪಂಚಪ್ರಾಣ, ಚೋಟಾ ಭೀಮ್ ಅಂದ್ರೆ ಇಷ್ಟ ಅಂತೆಲ್ಲಾ ಹೇಳ್ತಾ ಇರ್ತಾರೆ. ಆದ್ರೆ ಇಲ್ಲೊಂದು ಪುಟ್ಟ ಬಾಲಕನಿಗೆ ಬಿಜೆಪಿ ಪಕ್ಷ ಅಂದ್ರೆ ತುಂಬಾನೇ ಇಷ್ಟವಂತೆ. ಈ ಕುರಿತ ವಿಡಿಯೋವೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಿಜೆಪಿ ಮೇಲಿನ ಪುಟ್ಟ ಬಾಲಕನ ಅಭಿಮಾನವನ್ನು ಕಂಡು ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ.
ಈ ವಿಡಿಯೋವನ್ನು ಪ್ರದೀಪ್ ಚನ್ನಗಿರಿ (madal_1231) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಜೋಪಡಿಯಲ್ಲಿ ವಾಸಿಸುವಂತಹ ಪುಟ್ಟ ಬಾಲಕನ ಜೊತೆ ಪ್ರದೀಪ್ ಅವರು ಸಂಭಾಷಣೆ ನಡೆಸುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಪುಟ್ಟ ಬಾಲಕ ಬಿಜೆಪಿ ಬಾವುಟವನ್ನು ಕೈಯಲ್ಲಿ ಹಿಡಿದುಕೊಂಡಿದ್ದನ್ನು ನೋಡಿ ಪ್ರದೀಪ್ ಅವ್ರು ಬಾಲಕನ ಬಳಿ ನಿನ್ಗೆ ಬಿಜೆಪಿಯವ್ರಂದ್ರೆ ಇಷ್ಟನಾ ಅಂತಾ ಕೇಳ್ತಾರೆ. ಅದಕ್ಕೆ ಆ ಬಾಲಕ ಹೌದು ನಮ್ಗೆ ನೀರ್ ಕೊಡೊದು ಕೂಡಾ ಅವ್ರೇ, ಅವರಂದ್ರೆ ಇಷ್ಟ ಅಂತಾ ಹೇಳ್ತಾನೆ. ಜೊತೆಗೆ ನಿನ್ ಮನೆ ಎಲ್ಲಿ ಅಂತ ಕೇಳಿದ್ದಕ್ಕೆ ಆ ಹುಡುಗ ಇಲ್ಲೇ ಜೋಪಡಿಯಲ್ಲಿ ಅಂತ ಹೇಳ್ತಾನೆ. ಕೊನೆಯಲ್ಲಿ ಆ ಪುಟ್ಟ ಬಾಲಕ ಟೈರ್ ಇಲ್ಲದಂತಹ ತನ್ನ ಸೈಕಲ್ ಮೇಲೆ ಬಿಜೆಪಿಯ ಬಾವುಟ ಕಟ್ಟಿ ಅಲ್ಲಿಂದ ಹೊರಟು ಹೋಗ್ತಾನೆ. ಆ ಪುಟ್ಟ ಹುಡುಗನ ಪರಿಸ್ಥಿತಿಯನ್ನು ಕಂಡು ಇಂತಹವರಿಗೆ ಸಹಾಯ ಮಾಡಿ ಎಂದು ಪ್ರದೀಪ್ ಅವರು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸ್ಮೋಕಿ ಬಿಸ್ಕೆಟ್ ಪಾನೀಯ ಸೇವಿಸಿ ತಂದೆಯ ಮಡಿಲಿನಲ್ಲಿ ಪ್ರಾಣ ಬಿಟ್ಟ ಬಾಲಕ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 79 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ಯಾರಾದರೂ ಸರಿ ಆ ಪುಟ್ಟ ಬಾಲಕನಿಗೊಂದು ಸೈಕಲ್ ಕೊಡಿಸಿ ಎಂದು ಕೇಳಿಕೊಂಡಿದ್ದಾರೆ. ಇನ್ನೂ ಅನೇಕರು ಬಿಜೆಪಿ ಮೇಲಿನ ಈ ಪುಟ್ಟ ಬಾಲಕನ ಅಭಿಮಾನವನ್ನು ಕಂಡು ಬಹಳ ಸಂತೋಷಪಟ್ಟಿದ್ದಾರೆ.