Viral Video: ಸ್ಮೋಕಿ ಬಿಸ್ಕೆಟ್ ಪಾನೀಯ ಸೇವಿಸಿ ತಂದೆಯ ಮಡಿಲಿನಲ್ಲಿ ಪ್ರಾಣ ಬಿಟ್ಟ ಬಾಲಕ

ಪುಟ್ಟ ಬಾಲಕನೊಬ್ಬ ಸ್ಮೋಕಿ ಬಿಸ್ಕೆಟ್ ಪಾನೀಯ ಸೇವಿಸಿ ತಂದೆಯ ಮುಂದೆಯೇ ಪ್ರಾಣ ಬಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್​​ ಆಗಿದೆ. ಈ ಪಾನೀಯಗಳು -196 ಡಿಗ್ರಿ ಸೆಲ್ಸಿಯಸ್‌ಗೆ ತಂಪಾಗುವ ದ್ರವ ಸಾರಜನಕವನ್ನು ಹೊಂದಿರುತ್ತವೆ. ಇದರಿಂದಾಗಿ ಹೊಟ್ಟೆ ಉರಿ, ಉಸಿರಾಟದ ತೊಂದರೆ ಪ್ರಾರಂಭವಾಗುತ್ತದೆ. ಇಂತಹ ದ್ರವ ಸಾರಜನಕವನ್ನು ಕುಡಿಯುವುದು ಸಾವಿಗೆ ಕಾರಣವಾಗುತ್ತದೆ ಎಂದು ಬಳಕೆದಾರರೂ ಹೇಳಿದ್ದಾರೆ.

Viral Video: ಸ್ಮೋಕಿ ಬಿಸ್ಕೆಟ್ ಪಾನೀಯ ಸೇವಿಸಿ ತಂದೆಯ ಮಡಿಲಿನಲ್ಲಿ ಪ್ರಾಣ ಬಿಟ್ಟ ಬಾಲಕ
ವೈರಲ್​​ ವಿಡಿಯೋ ಇಲ್ಲಿದೆ
Follow us
ಅಕ್ಷಯ್​ ಪಲ್ಲಮಜಲು​​
|

Updated on:Apr 22, 2024 | 4:22 PM

ಆಹಾರ ಪದ್ದತಿಯಲ್ಲಿ ಸ್ವಲ್ಪ ಬದಲಾದರು, ಅದು ನಮ್ಮ ಜೀವವನ್ನೇ ತೆಗೆದು ಬಿಡುತ್ತದೆ. ಅದರಲ್ಲೂ ಈ ಆಧುನಿಕ ಜಗತ್ತಿನಲ್ಲಿ ಸೃಷ್ಟಿಯಾಗಿರುವ ಆಹಾರಗಳು ತುಂಬಾ ಡೇಜರ್ ಆಗಿದೆ. ಸಂಪ್ರಾದಾಯಕ ಆಹಾರದಿಂದ ಆಧುನಿಕ ಆಹಾರದತ್ತ ಸಾಗುತ್ತಿದ್ದೇವೆ. ಇದು ತಪ್ಪು ಎಂದಲ್ಲ, ಆದರೆ ಇದರಲ್ಲಿ ಯೋಚನೆ ಮಾಡಿ ಆಹಾರ ಆಯ್ಕೆ ಮಾಡಿಕೊಳ್ಳಬೇಕು, ಏಕೆ ಎಂದು ಈ ವಿಡಿಯೋವನ್ನು ಒಮ್ಮೆ ನೋಡಿ, ನಿಮಗೆ ಅರ್ಥವಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್​​ ಆಗುತ್ತಿದೆ. ಈ ವೀಡಿಯೋದಲ್ಲಿ ಚಿಕ್ಕ ಬಾಲಕನೊಬ್ಬ ಸ್ಟಾಲ್‌ನಲ್ಲಿ ಸ್ಮೋಕಿ ಬಿಸ್ಕೆಟ್ ಪಾನೀಯ ಸೇವಿಸುತ್ತಿರುವುದನ್ನು ಕಾಣಬಹುದು. ಬಾಲಕ ಆ ಬಿಸ್ಕತ್ತು ಪಾನೀಯವನ್ನು ತೆಗೆದುಕೊಂಡ ತಕ್ಷಣ ಎದೆಯಲ್ಲಿ ಉರಿ ಕಾಣಿಸಿಕೊಂಡಿದೆ. ಸ್ವಲ್ಪ ಸಮಯದ ನಂತರ ಈ ಬಾಲಕ ತಂದೆಯ ಮುಂದೆ ಕೂಗಲು ಶುರು ಮಾಡಿದ್ದಾನೆ ಪಕ್ಕದಲ್ಲಿದ್ದ ತಾಯಿ ಕೂಡ ಬಾಲಕನ್ನು ಸಮಾಧಾನ ಮಾಡುತ್ತಾಳೆ. ಅದರೂ ಆತನಿಗೆ ಉರಿ ತೆಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಪಕ್ಕದಲ್ಲಿ ಕುಳಿತುಕೊಂಡಿದ್ದ ಮಹಿಳೆಯಿಂದ ನೀರನ್ನು ತೆಗೆದುಕೊಂಡ ನೀರು ಕುಡಿಸುತ್ತಾರೆ. ಬಾಲಕ ನೀರು ಕುಡಿದ ನಂತರ ಬಾಲಕ ಪ್ರಜ್ಞಾಹೀನನಾಗುತ್ತಾನೆ. ತಂದೆ ಆತನನ್ನು ಎತ್ತುಕೊಂಡು  ಮಡಿಲಿನಲ್ಲಿ ಮಲಗಿಸುತ್ತಾರೆ. ಕೊನೆಗೆ ಎಚ್ಚರಗೊಳ್ಳದ ಬಾಲಕ ತಂದೆಯ ಮಡಿಲಿನಲ್ಲಿ ಸಾವನ್ನಪ್ಪುತ್ತಾನೆ.

ಸ್ಮೋಕಿ ಬಿಸ್ಕೆಟ್ ಕುಡಿದು ಮಗು ಸಾವು:

ಈ ವಿಡಿಯೋವನ್ನು ಬಾಲಕ ಸ್ಮೋಕಿ ಬಿಸ್ಕೆಟ್ ಕುಡಿದು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ವೈರಲ್​​ ಆಗಿರುವ ವಿಡಿಯೋ ಬಗ್ಗೆ ಅನೇಕರು ಕಮೆಂಟ್​​ ಮಾಡಿದ್ದಾರೆ. ಒಬ್ಬ ಎಕ್ಸ್​​ ಬಳಕೆದಾರ ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಇಂತಹ ಪಾನೀಯ ನೀಡುವ ಮುನ್ನ ಯೋಚನೆ ಮಾಡಬೇಕು. ಇನ್ನೊಬ್ಬರು ನಿಮ್ಮ ಮಕ್ಕಳ ಜೀವನದ ಬಗ್ಗೆ ಕಾಳಜಿ ಇದ್ದರೆ ಅಂತಹ ಪಾನೀಯಗಳಿಂದ ಅವರನ್ನು ದೂರವಿಡಿ ಎಂದು ಕಮೆಂಟ್​​ ಮಾಡಿದ್ದಾರೆ.

ಇದನ್ನೂ ಓದಿ: ಒಂದು ಗಂಟೆಯಲ್ಲಿ ಆರು ಮಕ್ಕಳಿಗೆ ಜನ್ಮ ನೀಡಿದ ಪಾಕಿಸ್ತಾನಿ ಮಹಿಳೆ

ಈ ಪಾನೀಯಗಳು -196 ಡಿಗ್ರಿ ಸೆಲ್ಸಿಯಸ್‌ಗೆ ತಂಪಾಗುವ ದ್ರವ ಸಾರಜನಕವನ್ನು ಹೊಂದಿರುತ್ತವೆ. ಇದರಿಂದಾಗಿ ಹೊಟ್ಟೆ ಉರಿ, ಉಸಿರಾಟದ ತೊಂದರೆ ಪ್ರಾರಂಭವಾಗುತ್ತದೆ. ಇಂತಹ ದ್ರವ ಸಾರಜನಕವನ್ನು ಕುಡಿಯುವುದು ಸಾವಿಗೆ ಕಾರಣವಾಗುತ್ತದೆ ಎಂದು ಬಳಕೆದಾರರೂ ಹೇಳಿದ್ದಾರೆ. ಇಂತಹದೆ ಒಂದು ಘಟನೆ ಗುರುಗ್ರಾಮ್‌ನ ರೆಸ್ಟೋರೆಂಟ್‌ನಲ್ಲಿ ನಡೆದಿತ್ತು ಮೌತ್ ಫ್ರೆಶ್ನರ್ ಸೇವಿಸಿ ಬಾಯಲ್ಲಿ ರಕ್ತಸ್ರಾವ ಆಗಿರುವುದನ್ನು ನೋಡಿರಬಹುದು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:12 pm, Mon, 22 April 24