Viral Video: ಸವಾರ್ ಲೂ; ಅರೆ! ಈಕೆ ಥೇಟ್​ ಸೋನಾಕ್ಷಿಯೇ, ಎನ್ನುತ್ತಿರುವ ನೆಟ್ಟಿಗರು

| Updated By: ಶ್ರೀದೇವಿ ಕಳಸದ

Updated on: May 24, 2023 | 11:32 AM

Sonakshi Sinha : ಲೂಟೇರಾ ಚಿತ್ರದ ಈ ಹಾಡಿಗೆ ದೃಶ್ಯಾ ರಘುರಾಮ್​ ಎಂಬ ನೃತ್ಯಕಲಾವಿದೆ ಅದ್ಭುತವಾಗಿ ನರ್ತಿಸಿದ್ದಾರೆ. ಇವರ ಪ್ರತಿಭೆ, ವಸ್ತ್ರವಿನ್ಯಾಸ, ಬೆಳಕಿನ ವಿನ್ಯಾಸ ಎಲ್ಲವೂ ಮನೋಹರವಾಗಿದೆ. ನೋಡಿ ವಿಡಿಯೋ.

Viral Video: ಸವಾರ್ ಲೂ; ಅರೆ! ಈಕೆ ಥೇಟ್​ ಸೋನಾಕ್ಷಿಯೇ, ಎನ್ನುತ್ತಿರುವ ನೆಟ್ಟಿಗರು
ಸವಾರ್​ ಲೂ ಹಾಡಿಗೆ ಹೆಜ್ಜೆ ಹಾಕುತ್ತಿರುವ ದೃಶ್ಯಾ ರಘುರಾಮ್
Follow us on

Dance : ರಣವೀರ್​ ಸಿಂಗ್​, ಸೋನಾಕ್ಷಿ ಸಿನ್ಹಾ ಅಭಿನಯದ ಮತ್ತು ಮೊನಾಲಿ ಠಾಕೂರ್​ ಹಾಡಿರುವ ‘ಸವಾರ್​ ಲೂ’ (Sawaar Loon)​ ಹಾಡಿಗೆ ಈ ಯುವತಿ ನರ್ತಿಸಿದ ರೀಲ್​ ವೈರಲ್ ಆಗಿದೆ. ಆಕರ್ಷಕ ಮೈಮಾಟ ಮತ್ತದಕ್ಕೆ ತಕ್ಕಂತೆ ವಸ್ತ್ರವಿನ್ಯಾಸ ಇದೆಲ್ಲಕ್ಕಿಂತ ಮುಖ್ಯ ನೃತ್ಯ ನೆಟ್ಟಿಗರ ಗಮನ ಸೆಳೆದಿದೆ. ಈ ರೀಲ್​ನಲ್ಲಿರುವ ಕಲಾವಿದೆಯ ಹೆಸರು ದೃಶ್ಯಾ ರಘುರಾಮ್. ಇವರು ವೃತ್ತಿಪರ ನೃತ್ಯಕಲಾವಿದರಾಗಿದ್ದು ನ್ಯೂಯಾರ್ಕ್​ನಲ್ಲಿ ವಾಸಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಹೊಂಬಣ್ಣದ ಬೆಳಕಿನ ವಿನ್ಯಾಸ ಇವರ ಈ ಪುಟ್ಟ ಪ್ರದರ್ಶನವನ್ನು ಮತ್ತಷ್ಟು ರಂಗೇರಿಸಿದೆ. ನೋಡಿ ಈ ವಿಡಿಯೋ.

ಈತನಕ 2 ಲಕ್ಷಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಸುಮಾರು 29,000 ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಇವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ನಾನು ಈ ವಿಡಿಯೋ ಅನ್ನು 20 ಕ್ಕೂ ಹೆಚ್ಚು ಸಲ ನೋಡಿದ್ದೇನೆ ಎಂದಿದ್ದಾರೆ. ಅತ್ಯಾಕರ್ಷಕವಾದ ನೃತ್ಯಸಂಯೋಜನೆ. ಕಲಾವಿದೆಗೆ ಅಭಿನಂದನೆ ಎಂದಿದ್ದಾರೆ ಮತ್ತೊಬ್ಬರು. ನೀವು ಅದ್ಭುತ ಕಲೆಗಾರ್ತಿ ಎಂದು ಮಗದೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Video: ಮುಂಬೈನ ಕೊಳಗೇರಿಯ 14ರ ಬಾಲಕಿ ;ಫಾರೆಸ್ಟ್​ ಎಸೆನ್ಷಿಯಲ್;​ ಮಾಡೆಲ್

ಲೂಟೇರಾ ಸಿನೆಮಾದಲ್ಲಿ ಈ ಹಾಡಿನ ನಾಯಕಿ ಹೇಗೆ ಕಾಣುತ್ತಿದ್ದಾರೋ ಮತ್ತು ಹೇಗೆ ನರ್ತಿಸಿದ್ಧಾರೋ ಥೇಟ್ ಹಾಗೆಯೇ ಇದೆ ಎಂದು ಇನ್ನೊಬ್ಬರು ಹೇಳಿದ್ಧಾರೆ. ನೀವು ಹೀರೋಯಿನ್​! ಬರೀ ನೃತ್ಯಗಾತಿಯಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ನೀವೇ ನೆಕ್ಸ್ಟ್ ಮಾಧುರಿ ಎಂದು ಇನ್ನೊಬ್ಬರು ಹೇಳಿದ್ದಾರೆ. ನಿಮ್ಮ ಭಾವಾಭಿವ್ಯಕ್ತಿ ಅತ್ಯಂತ ಮಧುರವಾಗಿದೆ ಎಂದು ಹೇಳಿದ್ಧಾರೆ ಮತ್ತೂ ಒಬ್ಬರು.

ಕಲೆ ಎನ್ನುವುದು ನಮ್ಮ ಜೊತೆಗಿದ್ದರೆ ಜಗತ್ತೇ ಮರೆಯಬಹುದಲ್ಲವೆ? ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 11:31 am, Wed, 24 May 23