
ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ಕಾಣಸಿಗುತ್ತವೆ. ಕೆಲವು ವಿಡಿಯೋಗಳು ಆಶ್ಚರ್ಯ ಉಂಟುಮಾಡುತ್ತದೆ. ಮತ್ತೆ ಕೆಲವು ತಮಾಷೆಯ ವಿಡಿಯೋಗಳಾಗಿರುತ್ತವೆ. ಸದ್ಯ ತಂದೆ-ಮಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ತಂದೆ ಮತ್ತು ಮಗಳ ಬಾಂಧವ್ಯ ತುಂಬಾ ಸುಂದರವಾದದ್ದು. ಈ ಬಾಂಧವ್ಯಕ್ಕೆ ಬೆಲೆ ಕಟ್ಟಲಾಗದು. ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಂದೆಯೊಂದಿಗೆ ಹೆಚ್ಚು ಪ್ರೀತಿ ವಿಶ್ವಾಸದಿಂದ ಇರುತ್ತಾರೆ. ಇದಕ್ಕೆ ಪುಷ್ಠಿ ನೀಡುವಂತಿದೆ ಈಗ ವೈರಲ್ ಆದ ಈ ವಿಡಿಯೋ. ಪುಟ್ಟ ಮಗಳು ತನ್ನ ತಂದೆಗೆ ಮೇಕಪ್(Makeup) ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು.
ವೈರಲ್ ಆದ ವಿಡಿಯೋದಲ್ಲಿ ಮಗಳು ತನ್ನ ತಂದೆಯೊಂದಿಗೆ ಕುಳಿತಿದ್ದು, ಬಳಿಕ ತಂದೆಗೆ ಲಿಪ್ಸ್ಟಿಕ್ ಹಾಕಿದ್ದಾಳೆ. ತಂದೆ ಈ ವೇಳೆ ತನ್ನ ಮಗಳೊಂದಿಗೆ ಸಂಭಾಷಣೆಗೆ ಮುಂದಾಗಿದ್ದು, ಇದೆಲ್ಲಾ ಏಕೆ ಮಗಳೇ ಎಂದು ಕೇಳಿದ್ದಾರೆ. ಅಲ್ಲದೇ ಲಿಪ್ಸ್ಟಿಕ್ನಲ್ಲಿ ಕೆಮಿಕಲ್ ಇರುತ್ತದೆ ಎಂದು ಹೇಳಿದ್ದಾರೆ. ಆದರೆ ಮಗಳು ಇದಕ್ಕೆ ಬೇರೆಯೇ ಉತ್ತರಕೊಟ್ಟಿದ್ದು, ಸದ್ಯ ನೆಟ್ಟಿಗರಿಗೆ ಖುಷಿ ನೀಡಿದೆ.
ಲಿಪ್ಸ್ಟಿಕ್ ಹಚ್ಚಿದರೆ ನೀವು ಸುಂದರವಾಗಿ ಕಾಣುತ್ತೀರಾ ಅಪ್ಪ ಎಂದ ಮಗಳ ಮಾತು ಸದ್ಯ ವೈರಲ್ ಆಗಿದೆ. ಈ ವಿಡಿಯೋವನ್ನು ವಿಜಯಕುಮಾರ್ ಐಪಿಎಸ್ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊವನ್ನು ಮಗಳು ಅಥವಾ ಮಕ್ಕಳು ಸದಾ ಸಂತೋಷವನ್ನು ತರುತ್ತಾರೆ. ನನ್ನ ಜೊತೆ ನನ್ನ ಮಗಳು ನೀಲಾ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಈ ವೀಡಿಯೊವನ್ನು ಸಾವಿರಾರು ಜನರು ರಿಟ್ವೀಟ್ ಮಾಡಿದ್ದಾರೆ. ಲಕ್ಷಾಂತರ ವಿವ್ಸ್ ಕೂಡ ಬಂದಿದೆ. ಅಲ್ಲದೇ ಕಮೆಂಟ್ ಮೂಲಕ ಅನೇಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮಗಳು ಮತ್ತು ತಂದೆಯ ಜೋಡಿ ತುಂಬಾ ಅದ್ಭುತವಾಗಿದೆ ಎಂದು ಕೆಲವರು ಕಮೆಂಟ್ ಮಾಡಿದೆ, ಮತ್ತೊಬ್ಬರು ಈ ವೀಡಿಯೊ ನಿಜವಾಗಿಯೂ ಮುದ್ದಾಗಿದೆ, ಇಂತಹ ವೀಡಿಯೊಗಳು ಅಪರೂಪವಾಗಿ ಕಂಡುಬರುತ್ತವೆ ಎಂದು ಹೇಳಿದ್ದಾರೆ. ಇನ್ನೊಬ್ಬರು ನನ್ನ ಮಗಳು ಪ್ರತಿದಿನ ನನ್ನೊಂದಿಗೆ ಇದನ್ನು ಮಾಡುತ್ತಾಳೆ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
Viral Video: ತನ್ನೊಂದಿಗಿದ್ದ ಶ್ವಾನಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ : ವಿಡಿಯೋ ವೈರಲ್
ಬರ್ತಡೇಗೆ ಮೊಬೈಲ್ ಗಿಪ್ಟ್ ನೀಡಿದ ಮಗ: ಖುಷಿಯಿಂದ ಕಣ್ಣೀರಾದ ತಾಯಿಯ ವಿಡಿಯೋ ವೈರಲ್