ಮಧ್ಯ ಪ್ರದೇಶ: ಈಜಲು ಹೋಗಿ ನೀರಿನಲ್ಲಿ ಮುಳುಗಿದ ವ್ಯಕ್ತಿಯ ದೇಹದಿಂದ ನೀರು ಹೊರ ತೆಗೆಯಲು ಮೃತದೇಹವನ್ನು ಮರಕ್ಕೆ ತಲೆಕೆಳಗಾಗಿ ನೇತು ಹಾಕಿದ ಘಟನೆ ನಡೆದಿದೆ. ಈ ಕುರಿತಂತೆ ಸ್ಥಳೀಯ ವರದಿಗಳಿಂದ ಮಾಹಿತಿ ತಿಳಿದು ಬಂದಿದೆ. ಗುಣಾ ಜಿಲ್ಲೆಯ ಕುಂಬ್ರಾಜ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ಜೋಗಿಪುರ ಹಳ್ಳಿಯಲ್ಲಿ ಕಳೆದ ಮಂಗಳವಾರ ಘಟನೆ ನಡೆದಿದೆ.
ಮೃತದೇಹವನ್ನು ತಲೆಕೆಳಗಾಗಿ ಮರಕ್ಕೆ ಕಟ್ಟುಹಾಕಿ ಅಲುಗಾಡಿಸಿದ್ದಾರೆ. 30 ನಿಮಿಷದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭನ್ವರ್ಲಾಲ್ ಭಂಜರಾ ಎಂಬ ಹೆಸರಿನ ವ್ಯಕ್ತಿ ಈಜಲು ನದಿಗೆ ಹೋಗಿದ್ದಾರೆ. ಆ ಸಮಯದಲ್ಲಿ ನೀರಿನಲ್ಲಿ ಮುಳುಗಿದ್ದಾರೆ. ತಕ್ಷಣ ನೋಡಿದ ಸ್ಥಳೀಯರು ಅವರನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ.
ಅಲ್ಲಿದ್ದ ಕೆಲವರು ದೇಹವನ್ನು ತಲೆಕೆಳಗಾಗಿ ಇರಿಸಬೇಕು ಅದರಿಂದ ನೀರು ಹೊರ ಬರಬಹುದು ಎಂದು ಸಲಹೆ ನೀಡಿದ್ದಾರೆ. ಗ್ರಾಮಸ್ಥರು ಕೆಲಹೊತ್ತು ವ್ಯಕ್ತಿಯ ಮೃತದೇಹವನ್ನು ತಲೆಕೆಳಗಾಗಿ ನೇತು ಹಾಕಿದ್ದಾರೆ.
Madhya Pradesh: Hoping to save life of a man, people hanged his body upside down from a tree and kept swinging in Guna district. They believed that if they managed to remove water from his body, he will be saved. This happened in presence of police. The man drowned in a river. pic.twitter.com/QtB0LV4Vde
— Free Press Journal (@fpjindia) August 24, 2021
ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ. ನೀರಿನಲ್ಲಿ ಮುಳುಗಿದ ವ್ಯಕ್ತಿ ಉಸಿರಾಡುತ್ತಿದ್ದಾರೆ, ದೇಹದಿಂದ ನೀರು ಹೊರಹಾಕಿದರೆ ವ್ಯಕ್ತಿ ಉಳಿಯುತ್ತಾನೆ ಎಂದು ಗ್ರಾಮಸ್ಥರು ಹೇಳಿದರು. ಹಾಗೆ ಮಾಡದಂತೆ ನಾನು ಮನವೊಲಿಸಿದೆ. ಆದರೆ ಯಾರೂ ಕೇಳಲು ತಯಾರಿರಲಿಲ್ಲ. ದೇಹವನ್ನು ಮರದ ಕೊಂಬೆಗೆ ತಲೆಕೆಳಗಾಗಿ ನೇತುಹಾಕಿದ್ದಾರೆ ಎಂದು ಪೊಲೀಸ್ ಹೊರಠಾಣೆ ಉಸ್ತುವಾರಿ ತೋರಣ್ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿದಾಗ ಈ ಘಟನೆಯ ಬಗ್ಗೆ ತಿಳಿದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ ಭಾಗಿಯಾಗಿದ್ದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಮೆಡಿಕೊಲೆಗಲ್ ಸಂಸ್ಥೆಯ ಮಾಜಿ ನಿರ್ದೇಶಕ ಹೇಳಿದ್ದಾರೆ.
ಇದನ್ನೂ ಓದಿ:
Crime News: ತ್ರಿಶೂಲದಿಂದ ಇರಿದು ಅರ್ಚಕನ ಬರ್ಬರ ಹತ್ಯೆ; ದೇವಸ್ಥಾನದಲ್ಲಿ ಅರೆ ಸುಟ್ಟ ಶವ ಪತ್ತೆ
(Dead body drowned man hanged down For drain out water from lungs in madhya pradesh)
Published On - 12:18 pm, Wed, 25 August 21