AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ಫುಟ್​ಬಾಲರ್ಸ್​ ಎದೆ ಫ್ಲಾಟ್, ಅವರು ಮದುವೆಗೆ ಸೂಕ್ತರಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾದ ಟಾಂಜೇನಿಯಾ ಅಧ್ಯಕ್ಷೆ

Viral Video: ಪ್ರಾದೇಶಿಕ ಫುಟ್​ಬಾಲ್​ ಚಾಂಪಿಯನ್​ಶಿಪ್​ನಲ್ಲಿ ರಾಷ್ಟ್ರೀಯ ಪುರುಷರ ತಂಡದ ಗೆಲುವನ್ನು ಆಚರಿಸುವ ಅಮಾರಂಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

ಮಹಿಳಾ ಫುಟ್​ಬಾಲರ್ಸ್​ ಎದೆ ಫ್ಲಾಟ್, ಅವರು ಮದುವೆಗೆ ಸೂಕ್ತರಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾದ ಟಾಂಜೇನಿಯಾ ಅಧ್ಯಕ್ಷೆ
ಮಹಿಳಾ ಫುಟ್​ಬಾಲರ್ಸ್​ ಎದೆ ಫ್ಲಾಟ್, ಅವರು ಮದುವೆಗೆ ಸೂಕ್ತರಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾದ ಟಾಂಜೇನಿಯಾ ಅಧ್ಯಕ್ಷೆ
TV9 Web
| Edited By: |

Updated on: Aug 25, 2021 | 10:34 AM

Share

ಟಾಂಜೇನಿಯಾ ಅಧ್ಯಕ್ಷೆ ಸಮಿಯಾ ಸುಲುಹು ಹಸನ್ ಮಹಿಳಾ ಫುಟ್​ಬಾಲ್​ ಆಟಗಾರರ ಬಗ್ಗೆ ವಿವಾದಾತ್ಮಕ ಹೇಳಿಗೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ. ಇವರ ಮಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ದೇಶದ ಮಹಿಳಾ ಫುಟ್​ಬಾಲ್​ ಆಟಗಾರ್ತಿಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಫುಟ್​ಬಾಲ್​ ಆಟಗಾರ್ತಿಯರಿಗೆ ಎದೆ ಫ್ಲಾಟ್ ಆಗಿದೆ. ಅವರು ಮದುವೆಗೆ ಹೆಚ್ಚು ಆಕರ್ಷಕರಾಗಿ ಕಾಣಿಸುವುದಿಲ್ಲ ಎಂದು ಹೇಳಿದ್ದಾರೆ.

ಪ್ರಾದೇಶಿಕ ಫುಟ್​ಬಾಲ್​ ಚಾಂಪಿಯನ್​ಶಿಪ್​ನಲ್ಲಿ ರಾಷ್ಟ್ರೀಯ ಪುರುಷರ ತಂಡದ ಗೆಲುವನ್ನು ಆಚರಿಸುವ ಅಮಾರಂಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬುದು ವರದಿಗಳಿಂದ ತಿಳಿದು ಬಂದಿದೆ. ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಫ್ಲಾಟ್ ಎದೆಯನ್ನು ಹೊಂದಿರುವವರಿಗೆ ಅವರು ಮಹಿಳೆಯರಲ್ಲ ಪುರುಷರು ಎಂದು ನೀವು ಭಾವಿಸಬಹುದು ಎಂದಿದ್ದಾರೆ.

ನೀವು ಮದುವೆಯಾಗಲು ಹೊರಟಿದ್ದೀರಿ ಎಂದಾದರೆ ಅತ್ಯಂತ ಆಕರ್ಷಕ ಮಹಿಳೆಯನ್ನು ಹುಡುಕುತ್ತೀರಿ. ನಿಮಗೆ ಬೇಕಾದ ಗುಣಗಳನ್ನು ಹೊಂದಿರುವ ಮಹಿಳೆಯನ್ನು ಬಯಸುತ್ತೀರಿ. ಮಹಿಳಾ ಫುಟ್​ಬಾಲ್​ ಆಟಗಾರರಿಗೆ ಆ ಗುಣಗಳು ಮಾಯವಾಗಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ಇಂದು ಅವರು ದೇಶಕ್ಕೆ ಟ್ರೋಫಿಗಳನ್ನು ತಂದಾಗ ಒಂದು ರಾಷ್ಟ್ರವಾಗಿ ನಾವು ಹೆಮ್ಮೆ ಪಡುತ್ತಿದ್ದೇವೆ. ಆದರೆ ಭವಿಷ್ಯದಲ್ಲಿ ನೀವು ಅವರ ಜೀವನವನ್ನು ನೋಡಿದರೆ, ಕಾಲುಗಳು ಆಟವಾಡಲು ಆಯಾಸಗೊಂಡಾಗ, ಅವರಿಗೆ ಆಡಲು ಆರೋಗ್ಯ ಇಲ್ಲದಿದ್ದಾಗ ಅವರ ಜೀವನ ಹೇಗಿರುತ್ತದೆ? ಎಂದು ಅಧ್ಯಕ್ಷೆ ಹಸನ್ ಪ್ರಶ್ನಿಸಿದ್ದಾರೆ.

ಮದುವೆಯ ಜೀವನ ಅವರಿಗೆ ಕನಸಿನಂತಿದೆ. ಏಕೆಂದರೆ ಇಲ್ಲಿರುವ ಒಬ್ಬರು ಪತ್ನಿಯಾಗಿ ಅವರನ್ನು ಮನೆಗೆ ಕರೆದುಕೊಂಡು ಹೋದರೆ ನಿಮ್ಮ ತಾಯಿ ಇವಳು ಪುರುಷಳೋ ಅಥವಾ ಮಹಿಳೆಯೋ ಎಂದು ಪ್ರಶ್ನೆ ಕೇಳುತ್ತಾರೆ ಎಂದು ಮಾತನಾಡಿದ್ದಾರೆ. ಪ್ರಸ್ತುತದಲ್ಲಿ ಇಥಿಯೋಪಿಯಾದ ಅಧ್ಯಕ್ಷ ಸಾಹ್ಲೆ-ವರ್ಕ್ ಝೆವ್ಡೆ ಜೊತೆಯಲ್ಲಿ ಆಫ್ರಿಕಾದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಏಕೈಕ ಮಹಿಳಾ ಮುಖ್ಯಸ್ಥೆ ಹಸನ್ ಈ ರೀತಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ:

Viral Video: ರಾಖಿ ಕಟ್ಟಿದವನನ್ನೇ ಕಚ್ಚಿ ಕೊಂದ ಹಾವುಗಳು!; ಈ ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ

Viral Video: ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿದ​ ವಿಡಿಯೋದಿಂದ ಸಂಕಷ್ಟಕ್ಕೆ ಸಿಲುಕಿದ ನರ್ಸ್

(Tanzania president calls women footballers have flat chest unsuitable for marriage viral video)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ