ಝೊಮ್ಯಾಟೋ ಡೆಲಿವರಿ ಏಜೆಂಟ್ ಪಾತ್ರ ನಿರ್ವಹಿಸಿದ ಸಿಇಒ ದೀಪೀಂದರ್ ಗೋಯಲ್; ಪ್ರಚಾರ ತಂತ್ರ ಎಂದ ನೆಟ್ಟಿಗರು

| Updated By: ಶ್ರೀದೇವಿ ಕಳಸದ

Updated on: Jan 02, 2023 | 4:06 PM

Zomato Delivery Agent : ಹೊಸ ವರ್ಷದ ಮುನ್ನಾ ದಿನ ಆರ್ಡರ್​ಗಳ ಸುರಿಮಳೆ. ಒಟ್ಟು ನಾಲ್ಕು ಗ್ರಾಹಕರಿಗೆ ಸ್ವತಃ ಆಹಾರ ತಲುಪಿಸಿದ್ದೇನೆ. ಒಟ್ಟು ಮೂರು ವರ್ಷಗಳ ಮಾರಾಟ ದಾಖಲೆಯನ್ನು ಈ ದಿನವು ಮುರಿದಿದೆ’ ದೀಪೀಂದರ್ ಗೋಯಲ್

ಝೊಮ್ಯಾಟೋ ಡೆಲಿವರಿ ಏಜೆಂಟ್ ಪಾತ್ರ ನಿರ್ವಹಿಸಿದ ಸಿಇಒ ದೀಪೀಂದರ್ ಗೋಯಲ್; ಪ್ರಚಾರ ತಂತ್ರ ಎಂದ ನೆಟ್ಟಿಗರು
ಝೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್​
Follow us on

Viral Video : ಝೊಮ್ಯಾಟೋ ಸಿಇಒ (Zomato CEO) ದೀಪೀಂದರ್ ಗೋಯಲ್ (Deepinder Goyal) ಹೊಸ ವರ್ಷದ ಮುನ್ನಾ ದಿನ ಹೀಗೆ ತಮ್ಮ ಫೋಟೋ ಟ್ವೀಟ್ ಮಾಡಿದ್ದಾರೆ. ‘ಝೊಮ್ಯಾಟೋ ಆ್ಯಪ್​ನಲ್ಲಿ ಆರ್ಡರ್​ಗಳು  ತುಂಬಿ ತುಳುಕುತ್ತಿದ್ದ ಕಾರಣ ಸ್ವತಃ ಡೆಲಿವರಿ ಏಜೆಂಟ್​ ಸಮವಸ್ತ್ರ ಧರಿಸಿ ಡೆಲಿವರಿಗೆ ಹೊರಟಿದ್ದೇನೆ. ಕೆಲಗಂಟೆಗಳ ನಂತರ ವಾಪಸಾಗುತ್ತೇನೆ’ ಎಂದು ದೀಪೀಂದರ್​ ಗೋಯಲ್ ಟ್ವೀಟ್​​ನಲ್ಲಿ ಹೇಳಿದ್ದಾರೆ. ಸಾಕಷ್ಟು ಜನರು ಇದನ್ನು ಮರುಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ಧಾರೆ.

My first delivery brought me back to the zomato office. Lolwut! https://t.co/zdt32ozWqJ pic.twitter.com/g5Dr8SzVJP

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕೊವಿಡ್​ನ ಈ ಮೂರು ವರ್ಷದ ಅವಧಿಯಲ್ಲಿ ಜಗತ್ತಿನಾದ್ಯಂತ ಜನರ ಅವಸ್ಥೆ ಕೇಳುವುದು ಬೇಡ. ಮನಬಂದಂತೆ  ಎಲ್ಲರನ್ನೂ ಉರುಳಾಡಿಸಿ ಹೊರಳಾಡಿಸಿಬಿಟ್ಟಿತು. 2022 ಮುಗಿದು 2023ನ್ನು ಸ್ವಾಗತಿಸುವ ಕಾತರದಲ್ಲಿ ಜನ ಕಾಯುತ್ತಿದ್ದರು. ಹಾಗಾಗಿ ಎಲ್ಲರಿಗೂ ಪಾರ್ಟಿ ಮೂಡ್​. ಫುಡ್​​ ಡೆಲಿವರಿ ಆ್ಯಪ್​ಗಳಂತೂ ಆರ್ಡರ್​​ಗಳಿಂದ ತುಂಬಿ ತುಳುಕುತ್ತಿದ್ದವು. ಇದಕ್ಕೆ ಝೊಮ್ಯಾಟೋ ಕೂಡ ಹೊರತಾಗಿಲ್ಲ. ಈ ಸಂದರ್ಭದಲ್ಲಿಯೇ ಕೆಲ ಗಂಟೆಗಳ ಕಾಲ ದೀಪೀಂದರ್​ ಡೆಲಿವರಿ ಏಜೆಂಟ್ ಕಾರ್ಯ ನಿರ್ವಹಿಸಿದುದಾಗಿ ಹೇಳಿಕೊಂಡಿದ್ದಾರೆ.

ಇದು ನನ್ನ ಮೊದಲ ಅನುಭವ. ಝೊಮ್ಯಾಟೋ ಪ್ರಧಾನ ಕಚೇರಿಯಿಂದ ಡೆಲಿವರಿಗೆ ಹೊರಟು ಒಟ್ಟು ನಾಲ್ಕು ಗ್ರಾಹಕರಿಗೆ ಆಹಾರ ತಲುಪಿಸಿದ್ದೇನೆ. ಹೊಸ ವರ್ಷದ ಮುನ್ನಾದಿನವು, ಒಟ್ಟು ಮೂರು ವರ್ಷಗಳ ಮಾರಾಟ ದಾಖಲೆಯನ್ನು ಮುರಿದಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Viral Video: ಕೈಗೂಸಿನೊಂದಿಗೆ ಹೋಮ್​ ಡೆಲಿವರಿಗೆ ತೆರಳುವ ಈ ‘ಝೊಮ್ಯಾಟೋತಾಯಿ’

ನೂರಾರು ಜನ ಈ ಪೋಸ್ಟ್​ಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಸುಮ್ಮನೆ ಆಫೀಸ್​ ಮುಂದೆ ನಿಂತುಕೊಂಡು ಪೋಸ್​ ಕೊಟ್ಟಿರಬಹುದೇನೋ. ಇದೆಲ್ಲವೂ ಗಿಮಿಕ್​, ಕಂಪೆನಿಯ ಬಗ್ಗೆ ಪ್ರಚಾರ ಕೊಟ್ಟುಕೊಳ್ಳಲು ಹೀಗೆ ಮಾಡುತ್ತಿರುವುದು. ನಿಜಕ್ಕೂ ನಿಮ್ಮ ಡೆಲಿವರಿ ಏಜೆಂಟ್​ರಂತೆ ಊರೆಲ್ಲ ಸುತ್ತಿ ಮನೆಮನೆಗೆ ಹೋಗಿ ಆಹಾರ ತಲುಪಿಸಿದ್ದೀರಾ? ಎಂದು ಒಬ್ಬರು ಕೇಳಿದ್ಧಾರೆ.

ಡೇಟಾ ಅನಲೈಟಿಕ್ಸ್​ ಏನು ಹೇಳುತ್ತದೆ ಈ ಬಗ್ಗೆ? ಇದೆಲ್ಲವೂ ಪ್ರಚಾರ ತಂತ್ರ. ಕಳೆದ ತಿಂಗಳು ಉಬರ್​ ಕಂಪೆನಿಯ ಸಿಇಒ ಕೂಡ ಇಂಥದೇ ತಂತ್ರವನ್ನು ರೂಪಿಸಿದ್ದರು. ಫಲ ಮಾತ್ರ ಶೂನ್ಯ ಎಂದಿದ್ದಾರೆ ಮತ್ತೊಬ್ಬರು. ತಳಕ್ಕಿಳಿದು ನೀವು ಕೆಲಸದಲ್ಲಿ ತೊಡಗಿಕೊಂಡಿದ್ದೀರಿ ಎಂದರೆ ನೀವೊಬ್ಬ ಆದರ್ಶ ಉದ್ಯಮಿ. ನಿಮಗೆ ಒಳ್ಳೆಯದಾಗಲಿ ಎಂದು ಕೆಲವರು ಹಾರೈಸಿದ್ದಾರೆ.

ನಿಮ್ಮ ಅಭಿಪ್ರಾಯವೇನು ಈ ವಿಷಯವಾಗಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 3:52 pm, Mon, 2 January 23