ಮೆಟ್ರೋದಲ್ಲಿ ಸೀಟ್ ಸಿಗದಿದ್ದರಂತೆ ಏನಂತೆ, ಈ ಯುವತಿಯ ಪ್ಲ್ಯಾನ್ ಪಕ್ಕಾ ವರ್ಕ್ ಆಯ್ತು

ಸಾಮಾನ್ಯವಾಗಿ ಬಸ್ಸು, ರೈಲು, ಮೆಟ್ರೋದಲ್ಲಿ ಸೀಟಿನ ವಿಚಾರವಾಗಿ ಪ್ರಯಾಣಿಕರ ನಡುವೆ ನಡೆಯುವ ಜಗಳಗಳು ಹಾಗೂ ರಂಪಾಟಗಳ ಬಗ್ಗೆ ನಾವು ಆಗಾಗ ಕೇಳಿರುತ್ತೇವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ದೆಹಲಿ ಮೆಟ್ರೋದಲ್ಲಿ ಯುವತಿಯೊಬ್ಬಳು ಸೀಟಿಯಿಲ್ಲದೇ ಇದ್ದರೂ ಯಾರ ಜೊತೆಗೂ ಜಗಳ ಮಾಡಿಕೊಳ್ಳಲಿಲ್ಲ. ಹೌದು, ಕೈಯಲ್ಲಿ ಟಬ್ ಹಿಡಿದು ಮೆಟ್ರೋ ಪ್ರವೇಶಿಸಿ ಯುವತಿಯೂ ಅದನ್ನು ಕೆಳಗೆ ಇಟ್ಟು, ಅದರ ಮೇಲೆ ಆರಾಮದಾಯಕವಾಗಿ ಕುಳಿತುಕೊಂಡಿದ್ದಾಳೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಯುವತಿಯ ಬುದ್ಧಿವಂತಿಕೆ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ಮೆಟ್ರೋದಲ್ಲಿ ಸೀಟ್ ಸಿಗದಿದ್ದರಂತೆ ಏನಂತೆ, ಈ ಯುವತಿಯ ಪ್ಲ್ಯಾನ್ ಪಕ್ಕಾ ವರ್ಕ್ ಆಯ್ತು
ವೈರಲ್​ ವಿಡಿಯೋ
Image Credit source: Twitter
Edited By:

Updated on: Apr 18, 2025 | 12:03 PM

ಮೆಟ್ರೋ ಪ್ರಯಾಣಿಕ (metro passenger) ರು ಮಾಡುವಂತಹ ಕಿತಾಪತಿಗಳ ಕಾರಣದಿಂದಲೇ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಅದರಲ್ಲಿ ಸೀಟಿಗಾಗಿ ಜಗಳ, ರೀಲ್ಸ್ ಹುಚ್ಚಾಟ, ಪ್ರೇಮಿಗಳ ರೋಮ್ಯಾನ್ಸ್ ಹೀಗೆ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಾಗುವುದೇ ಹೆಚ್ಚು. ಸಾಮಾನ್ಯವಾಗಿ ಮೆಟ್ರೋದಲ್ಲಿ ಪ್ರಯಾಣಿಸುವಾಗ ಸೀಟು (seat) ಇಲ್ಲದೇ ಹೋದರೆ ಯಾರಾದರೂ ಇಳಿಯುತ್ತಾರೋ ಎಂದು ನೋಡುತ್ತಾ ನಿಲ್ಲುವುದೇ ಹೆಚ್ಚು. ಆದರೆ ಇದೀಗ ಯುವತಿಯೊಬ್ಬರು ಮಾಡಿದ ಪ್ಲ್ಯಾನ್ (plan) ಮಾತ್ರ ಅಲ್ಲಿಂದ ಪ್ರಯಾಣಿಕರನ್ನು ಹುಬ್ಬೇರಿಸುವಂತೆ ಮಾಡಿದೆ. ಹೌದು, ಕಿಕ್ಕಿರಿದ ಜನಸಂದಣಿಯ ನಡುವೆ ದೆಹಲಿ (dehli) ಮೆಟ್ರೋದಲ್ಲಿ ಯುವತಿಯೊಬ್ಬಳು ತನಗೆ ಕುಳಿತುಕೊಳ್ಳಲು ಬೇಕಾದ ವ್ಯವಸ್ಥೆಯನ್ನು ತಾನೇ ಮಾಡಿಕೊಂಡಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಈ ವಿಡಿಯೋವನ್ನು @Rawat_1199 ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕಪ್ಪು ಬಣ್ಣದ ಉಡುಪು ಧರಿಸಿರುವ ಯುವತಿಯೊಬ್ಬಳು ಕೈಯಲ್ಲೊಂದು ಬಿಳಿ ಬಣ್ಣದ ಚೀಲ ಮೆಟ್ರೋವನ್ನು ಪ್ರವೇಶಿಸುವುದನ್ನು ಕಾಣಬಹುದು. ಯುವತಿ ಕೈಯಲ್ಲಿ ಬಿಳಿ ಚೀಲವನ್ನು ಹಿಡಿದಿದ್ದು, ಅದರಲ್ಲಿ ಒಂದು ಟಬ್ ಇಟ್ಟುಕೊಂಡಿದ್ದಾರೆ. ಮೆಟ್ರೋ ಒಳಗೆ ಬಂದ ಯುವತಿ ತನ್ನ ಚೀಲದಿಂದ ಒಂದು ಟಬ್ ತೆಗೆದು ಅದರ ಮೇಲೆ ಹತ್ತಿ ಕುಳಿತುಕೊಳ್ಳುವುದನ್ನು ನೋಡಬಹುದು. ಟಬ್ ಮೇಲೆ ಕುಳಿತ ಯುವತಿಯನ್ನು ನೋಡಿ ಸುತ್ತಲಿನ ಜನರು ನೋಡಿ ನಗಲು ಪ್ರಾರಂಭಿಸುತ್ತಾರೆ.

ಇದನ್ನೂ ಓದಿ : ಡಿಜೆ ವಿಚಾರಕ್ಕೆ ಗಲಾಟೆ; ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವು ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡುಕೊಂಡಿದ್ದು ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ಈಕೆಯ ವಿರುದ್ಧ ದಯವಿಟ್ಟು ಕ್ರಮ ಕೈಗೊಳ್ಳಿ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ಇದು ಒಳ್ಳೆಯ ಜುಗಾಡ್ ಐಡಿಯಾ ಎಂದು ಹೇಳಿದ್ದಾರೆ. ಮತ್ತೊರ್ವ ಬಳಕೆದಾರರು, ಈ ರೀತಿಯ ಐಡಿಯಾಗಳು ಭಾರತೀಯರಿಗೆ ಮಾತ್ರ ಬರಲು ಸಾಧ್ಯ ಎಂದು ತಮಾಷೆಯಾಗಿ ಹೇಳಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ