Viral Post: ಮೆಟ್ರೋದಲ್ಲಿ ನೆಲದ ಮೇಲೆ ಮಲಗಿಕೊಂಡು ವ್ಯಕ್ತಿಯ ಪ್ರಯಾಣ; ಫೋಟೋ ವೈರಲ್​

ವೈರಲ್ ಆಗುತ್ತಿರುವ ಪೋಸ್ಟ್​​​ನಲ್ಲಿ, ಒಬ್ಬ ವ್ಯಕ್ತಿ ಮೆಟ್ರೋದ ನೆಲದ ಮೇಲೆ ಮಲಗಿರುವುದನ್ನು ಕಾಣಬಹುದು. ಈ ರೀತಿಯ ವರ್ತನೆ ಶಿಕ್ಷಾರ್ಹ ಅಪರಾಧ ಎಂದು ಗೊತ್ತಿದ್ದರೂ ಯಾವುದೇ ಭಯವಿಲ್ಲದೇ ಮಲಗಿ ಮೊಬೈಲ್ ನೋಡುತ್ತಾ ಖುಷಿಯಿಂದ ಪ್ರಯಾಣಿಸುತ್ತಿದ್ದಾನೆ.

Viral Post: ಮೆಟ್ರೋದಲ್ಲಿ ನೆಲದ ಮೇಲೆ ಮಲಗಿಕೊಂಡು ವ್ಯಕ್ತಿಯ ಪ್ರಯಾಣ; ಫೋಟೋ ವೈರಲ್​
Follow us
ಅಕ್ಷತಾ ವರ್ಕಾಡಿ
|

Updated on: Jul 24, 2024 | 3:36 PM

ನವದೆಹಲಿ: ದೆಹಲಿ ಮೆಟ್ರೋದಲ್ಲಿ ರೀಲ್ಸ್ ಮಾಡುವುದು, ಪ್ರೇಮಿಗಳ ಅಸಭ್ಯ ವರ್ತನೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಈ ರೀತಿಯ ಅಸಭ್ಯ ವರ್ತನೆಯ ಜೊತೆಗೆ ಮೆಟ್ರೋದಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವುದು, ಕುಡಿಯುವುದು ಮತ್ತು ಪ್ರಯಾಣಿಸುವುದು ಶಿಕ್ಷಾರ್ಹ ಅಪರಾಧ. ಮೆಟ್ರೋದಲ್ಲಿ ಪ್ರಯಾಣಿಸಿದಾಗಲೆಲ್ಲಾ, ಕೋಚ್‌ನಲ್ಲಿ ಈ ಕುರಿತು ಪ್ರಕಟಣೆಯನ್ನು ನೀವು ಕೇಳಿರಬೇಕು. ಆದರೂ ಕೂಡ ಕೆಲವರು ನಿಯಮಗಳನ್ನು ಉಲ್ಲಂಘಿಸಿ ವಿಚಿತ್ರವಾಗಿ ವರ್ತಿಸುವುದುಂಟು. ಇದೀಗ ಅಂತದ್ದೇ ಮತ್ತೊಂದು ಘಟನೆ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

ವೈರಲ್ ಆಗುತ್ತಿರುವ ಪೋಸ್ಟ್​​​ನಲ್ಲಿ, ಒಬ್ಬ ವ್ಯಕ್ತಿ ಮೆಟ್ರೋದ ನೆಲದ ಮೇಲೆ ಮಲಗಿರುವುದನ್ನು ಕಾಣಬಹುದು. ಹೀಗೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಗೊತ್ತಿದ್ದರೂ ಯಾವುದೇ ಭಯವಿಲ್ಲದೇ ಮಲಗಿ ಮೊಬೈಲ್ ನೋಡುತ್ತಾ ಖುಷಿಯಿಂದ ಪ್ರಯಾಣಿಸುತ್ತಿದ್ದಾನೆ. ಈ ವೇಳೆ ಪ್ರಯಾಣಿಕನ ಕೃತ್ಯದಿಂದ ಬೇಸರಗೊಂಡ ಮತ್ತೊಬ್ಬ ಪ್ರಯಾಣಿಕ ಆತನ ಕೆಲವು ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಬೀದಿ ಬದಿ ಟೀ ಮಾರುತ್ತಿದ್ದ ವ್ಯಕ್ತಿಯ ಮಗಳು ಸಿಎ ಪಾಸ್​​​; ವಿಡಿಯೋ ವೈರಲ್​​

@ShikharSha34718 ಎಂಬ ಟ್ವಿಟರ್​​ ಖಾತೆಯಲ್ಲಿ ಪೋಸ್ಟ್​​​ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗುತ್ತಿದೆ. ಮೆಟ್ರೋ ನಿಯಮಗಳನ್ನು ಉಲ್ಲಂಘಿಸಿದ ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಕಾಮೆಂಟ್​ನಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ