Video: ಇದು ಸ್ಪೆಷಲ್ ಫ್ರೂಟ್ ಗ್ರೇವಿ ಮೊಮೊಸ್; ಟೇಸ್ಟ್ ಅಂತೂ ಸೂಪರ್
ಇತ್ತೀಚಿನ ದಿನಗಳಲ್ಲಿ ವಿಯರ್ಡ್ ಕಾಂಬಿನೇಷನ್ ಫುಡ್ ಬಹಳನೇ ಟ್ರೆಂಡ್ ಆಗಿ ಬಿಟ್ಟಿದೆ. ಊಹಿಸಲು ಸಾಧ್ಯವಾಗದ ಆಹಾರ ಪ್ರಯೋಗಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಬೀದಿ ಬದಿ ವ್ಯಾಪಾರಿಯೊಬ್ಬ ಫ್ರೂಟ್ ಗ್ರೇವಿ ಮೊಮೊಸ್ ತಯಾರಿಸಿ ಆಹಾರ ಪ್ರಿಯರನ್ನು ಹುಬ್ಬೇರಿಸುವಂತೆ ಮಾಡಿದ್ದಾನೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಮೊಮೊಸ್ (momos) ಅಂದ್ರೆ ಎಲ್ಲರಿಗೂ ಇಷ್ಟನೇ. ಬೀದಿ ಬದಿಯ ಜನಪ್ರಿಯ ಆಹಾರದ ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುತ್ತದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಮೊಮೊಸ್ ನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರೇ. ಆದರೆ ದೆಹಲಿಯ (Delhi) ಬೀದಿ ಬದಿ ವ್ಯಾಪಾರಿಯೊಬ್ಬ ಈ ಮೊಮೊಸ್ ನಲ್ಲಿ ಪ್ರಯೋಗವೊಂದನ್ನು ಮಾಡಿದ್ದಾನೆ. ಫ್ರೂಟ್ ಮೊಮೊಸ್ ತಯಾರಿಸಿದ್ದು, ಆಹಾರ ಪ್ರಿಯರ ಗಮನ ಸೆಳೆದಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
foodpandits ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಬೀದಿ ಬದಿ ವ್ಯಾಪಾರಿಯೂ ಪ್ಲೇಟ್‌ನಲ್ಲಿ ಕತ್ತರಿಸಿಟ್ಟ ತಾಜಾ ಹಣ್ಣುಗಳನ್ನು ಕಾಣಬಹುದು. ಆ ಬಳಿಕ ಈ ಹಣ್ಣುಗಳನ್ನು ಪ್ಯಾನ್‌ಗೆ ವರ್ಗಾಯಿಸಿ ಮೊಮೊಸ್ ಮಾಡಲು ಪ್ರಾರಂಭಿಸಿದ್ದು, ಚೀಸ್ ಚಿಲ್ಲಿ ಫ್ಲೇಕ್ಸ್, ಉಪ್ಪು ಕೊನೆಗೆ ಫ್ರೆಶ್ ಕ್ರೀಮ್ ಹಾಕಿ ಗ್ರೇವಿ ತಯಾರಿಸುತ್ತಾನೆ. ಇದಕ್ಕೆ ಪ್ರೈ ಮಾಡಿದ ಮೊಮೊ ತುಂಡುಗಳನ್ನು ಸೇರಿಸಿ ಬಡಿಸುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯೂ ಈ ವ್ಯಾಪಾರಿಯನ್ನು ಮಾತನಾಡಿಸಿದ್ದು ಗ್ರಾಹಕನೊಬ್ಬ ಈ ರೀತಿ ಮೊಮೊಸ್ ಮಾಡಲು ಹೇಳಿದ್ದಾನೆ ಎನ್ನುವುದನ್ನು ಕಾಣಬಹುದು. ಇದರ ಬೆಲೆ ಬಗ್ಗೆ ಕೇಳಿದಾಗ 200 ರೂ ಎಂದು ಹೇಳುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ:ದಕ್ಷಿಣ ಭಾರತದಲ್ಲಿ ಹುಟ್ಟಿ ಉತ್ತರ ಭಾರತದಲ್ಲಿ ಸತ್ತ ಇಡ್ಲಿ; ಇದು ಇಡ್ಲಿಯ ದುರಂತ ಕಥೆ
ಈ ವಿಡಿಯೋ ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ವ್ಯಕ್ತಿ ಪ್ರಚಾರಕ್ಕಾಗಿ ಈ ರೀತಿ ರೆಸಿಪಿ ಟ್ರೈ ಮಾಡುತ್ತಿದ್ದಾನೆ ಎಂದಿದ್ದಾನೆ. ಇನ್ನೊಬ್ಬರು, ಮೊಮೊಸ್ ಮರ್ಡರ್ ಎಂದರೆ, ಮತ್ತೊಬ್ಬರು ಈ ರೀತಿ ಫುಡ್ ಇದ್ರೆ ವಾಕರಿಕೆ ಬರೋದು ಗ್ಯಾರಂಟಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




