ಸರಿಯಾದ ಸಮಯಕ್ಕೆ ಸಿಂಧೂರ ತಂದು, ನಿಲ್ಲಬೇಕಿದ್ದ ಮದುವೆಯನ್ನು ಸರಾಗವಾಗಿ ನಡೆಯುವಂತೆ ಮಾಡಿದ ಬ್ಲಿಂಕಿಟ್

ಬ್ಲಿಂಕಿಟ್ ಆಪದ್ಭಾಂದವನಂತೆ ಬಂದು ಮದುವೆಯನ್ನು ಸುಸೂತ್ರವಾಗಿ ನಡೆಯಲು ಅನುವು ಮಾಡಿಕೊಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಬಾರಿ ಬ್ಲಿಂಕಿಟ್ ನಿಲ್ಲಬೇಕಿದ್ದ ಮದುವೆ(Marriage)ಯನ್ನು ಸರಾಗವಾಗಿ ನಡೆಯುವಂತೆ ಮಾಡಿದೆ. ದೆಹಲಿಯಲ್ಲಿ ಮದುವೆ ಸಮಾರಂಭವೊಂದು ನಡೆಯುತ್ತಿತ್ತು, ಎಲ್ಲಾ ವಿಧಿ ವಿಧಾನಗಳು ನಡೆಯುತ್ತಿದ್ದವು. ಇನ್ನೇನು ವರ ವಧುವಿಗೆ ಸಿಂಧೂರ ಹಚ್ಚಬೇಕು ಎನ್ನುವಷ್ಟರಲ್ಲಿ ತಾವು ಸಿಂಧೂರವನ್ನು ತಂದೇ ಇಲ್ಲ ಎಂಬುದು ಕುಟುಂಬಕ್ಕೆ ನೆನಪಾಗಿದೆ.

ಸರಿಯಾದ ಸಮಯಕ್ಕೆ ಸಿಂಧೂರ ತಂದು, ನಿಲ್ಲಬೇಕಿದ್ದ ಮದುವೆಯನ್ನು ಸರಾಗವಾಗಿ ನಡೆಯುವಂತೆ ಮಾಡಿದ ಬ್ಲಿಂಕಿಟ್
ಮದುವೆ
Image Credit source: NDTV

Updated on: Dec 29, 2025 | 12:54 PM

ದೆಹಲಿ, ಡಿಸೆಂಬರ್ 29: ಇತ್ತೀಚಿನ ದಿನಗಳಲ್ಲಿ ಬ್ಲಿಂಕಿಟ್, ಸ್ವಿಗ್ಗಿ, ಜೊಮಾಟೊ ಹೀಗೆ ಆನ್​ಲೈನ್​ ಆ್ಯಪ್​ಗಳದ್ದೇ ಹವಾ. ಬ್ಲಿಂಕಿಟ್ ಕೂಡಾ ಕಣ್ಣು ಮಿಟುಕಿಸುವಷ್ಟರಲ್ಲಿ ನಾವು ಆರ್ಡರ್​ ಮಾಡಿದ್ದನ್ನು ನಮ್ಮ ಕಣ್ಣಮುಂದಿರಿಸುತ್ತದೆ. ಈ ಬಾರಿ ಬ್ಲಿಂಕಿಟ್ ನಿಲ್ಲಬೇಕಿದ್ದ ಮದುವೆ(Marriage)ಯನ್ನು ಸರಾಗವಾಗಿ ನಡೆಯುವಂತೆ ಮಾಡಿದೆ. ದೆಹಲಿಯಲ್ಲಿ ಮದುವೆ ಸಮಾರಂಭವೊಂದು ನಡೆಯುತ್ತಿತ್ತು, ಎಲ್ಲಾ ವಿಧಿ ವಿಧಾನಗಳು ನಡೆಯುತ್ತಿದ್ದವು. ಇನ್ನೇನು ವರ ವಧುವಿಗೆ ಸಿಂಧೂರ ಹಚ್ಚಬೇಕು ಎನ್ನುವಷ್ಟರಲ್ಲಿ ತಾವು ಸಿಂಧೂರವನ್ನು ತಂದೇ ಇಲ್ಲ ಎಂಬುದು ಕುಟುಂಬಕ್ಕೆ ನೆನಪಾಗಿದೆ.

ಸಪ್ತಪದಿ ಮುಗಿದಿತ್ತು, ಪತ್ನಿ ಹಣೆಗೆ ಸಿಂಧೂರವಿಡಬೇಕು ಎನ್ನುವಷ್ಟರಲ್ಲಿ ಸಿಂಧೂರವಿರಲಿಲ್ಲ, ಆಗಲೇ ನೆನಪಾಗಿದ್ದು, ಬ್ಲಿಂಕಿಟ್ ಇದು ಕೂಡಲೇ ಸಿಂಧೂರವನ್ನು ಡೆಲಿವರಿ ಮಾಡಿದೆ. ಮದುವೆ ಸರಾಗವಾಗಿ ನಡೆದಿದೆ. ಮದುವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು, ಕುಟುಂಬ ಸದಸ್ಯರು ಪರಿಸ್ಥಿತಿಯನ್ನು ಪರಿಹರಿಸಲು ಒಟ್ಟುಗೂಡಿದರು.

ಭಯಭೀತರಾಗುವ ಅಥವಾ ಅಂಗಡಿಯನ್ನು ಹುಡುಕಲು ಕುಟುಂಬ ಸದಸ್ಯರನ್ನು ಕಳುಹಿಸುವ ಬದಲು, ಅವರು ಬ್ಲಿಂಕಿಟ್‌ನಲ್ಲಿ ತುರ್ತು ಆರ್ಡರ್ ಮಾಡಿದ್ದರು. ಕೆಲವೇ ನಿಮಿಷಗಳಲ್ಲಿ ಸಿಂಧೂರ ಅವರ ಕೈ ಸೇರಿತು. ಅತಿಥಿಗಳ ಚಪ್ಪಾಳೆ ಮತ್ತು ಹರ್ಷೋದ್ಗಾರದ ನಡುವೆ ವರನು ಆಚರಣೆಯನ್ನು ಮುಗಿಸುತ್ತಾರೆ. ಬ್ಲಿಂಕಿಟ್ ಡೆಲಿವರಿ ಬಾಯ್​ನನ್ನು ಸೈಲೆಂಟ್ ಸೂಪರ್ ಹೀರೋ ಎಂದು ಕರೆದಿದ್ದಾರೆ.

ಪೋಸ್ಟ್

ಗುಜರಾತ್‌ನಲ್ಲಿ ನಡೆದ ನನ್ನ ಮೈದುನನ ಮದುವೆಯಲ್ಲೂ ಇಂಥಾ ಘಟನೆ ಸಂಭವಿಸಿದೆ ಮತ್ತು ಕಣ್ಣು ಮಿಟುಕಿಸುವುದರ ಒಳಗೆ ವ್ಯಕ್ತಿ ಅದನ್ನು ತಲುಪಿಸಿದ್ದಾರೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

Published On - 12:53 pm, Mon, 29 December 25