Viral Video: ಕೋಯಿ ಲಡ್ಕೀ ಹೈ ಹಾಡಿಗೆ 63 ವರ್ಷದ ಅಜ್ಜಿಯ ಸಕತ್ ಸ್ಟೆಪ್; ವಿಡಿಯೋ ನೋಡಿ

ಪಿಂಕ್ ಬಣ್ಣದ ಸಲ್ವಾರ್ ತೊಟ್ಟು ಹುಡುಗಿಯಂತೆಯೇ 2 ಜಡೆ ಹೆಣೆದು ನೃತ್ಯ ಮಾಡಿರುವ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಇವರ ಪ್ರತಿಭೆಗೆ ಶ್ಲಾಘನೆ ವ್ಯಕ್ತವಾಗಿದೆ.

Viral Video: ಕೋಯಿ ಲಡ್ಕೀ ಹೈ ಹಾಡಿಗೆ 63 ವರ್ಷದ ಅಜ್ಜಿಯ ಸಕತ್ ಸ್ಟೆಪ್; ವಿಡಿಯೋ ನೋಡಿ
ಕೋಯಿ ಲಡ್ಕೀ ಹೈ ಹಾಡಿಗೆ 63 ವರ್ಷದ ಅಜ್ಜಿಯ ಸಕತ್ ಸ್ಟೆಪ್
Edited By:

Updated on: Aug 27, 2021 | 10:48 AM

ವಯಸ್ಸು ಕೇಲವ ಸಂಖ್ಯೆಯಷ್ಟೆ! 63 ವರ್ಷದ ರವಿ ಬಾಲಾ ಶರ್ಮಾ ಅವರು ನೃತ್ಯದ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ತಾವು ನತ್ಯ ಮಾಡುತ್ತಿರುವ ಅನೇಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್​ಸ್ಟಾಗ್ರಾಂನಲ್ಲಿ 158 ಸಾವಿರ ಹಿಂಬಾಲಕರನ್ನು ಹೊಂದಿರುವ ರವಿ ಬಾಲಾ ಶರ್ಮಾ ನೃತ್ಯ ಇದೀಗ ಫುಲ್ ವೈರಲ್ ಆಗಿದೆ. ಪಿಂಕ್ ಬಣ್ಣದ ಸಲ್ವಾರ್ ತೊಟ್ಟು ಹುಡುಗಿಯಂತೆಯೇ 2 ಜಡೆ ಹೆಣೆದು ನೃತ್ಯ ಮಾಡಿರುವ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಇವರ ಪ್ರತಿಭೆಗೆ ಶ್ಲಾಘನೆ ವ್ಯಕ್ತವಾಗಿದೆ.

ಅವರ ಅಂದದ ನಗು, ಜತೆಗೆ ಅತ್ಯದ್ಭುತ ಅಭಿನಯ ಮೆಚ್ಚುವಂತಿದೆ. ಈಗಿನ ಯುವತಿಯರಿಗೇ ಸವಾಲೊಡ್ಡುವಂತಹ ಪ್ರತಿಭೆ ನೋಡಿ ಹೆಮ್ಮೆ ಅನಿಸುತ್ತದೆ. ಮಾಧುರಿ ದೀಕ್ಷಿತ್ ಅವರಂತೆ ಅಭಿನಯಿಸಲು ರವಿ ಶರ್ಮಾ ಪ್ರಯತ್ನಿಸಿದ್ದಾರೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ಇನ್ನೂ ಹೆಚ್ಚಿನ ನೃತ್ಯದ ವಿಡಿಯೋಗಳನ್ನು ಹಂಚಿಕೊಂಡಿರುವುದನ್ನು ನೀವು ಇನ್​ಸ್ಟಾಗ್ರಾಮ ಅವರ ಅಧಿಕೃತ ಖಾತೆಯಲ್ಲಿ ಕಾಣಬಹುದು. ಸುಂದರವಾಗಿ ರೆಡಿಯಾಗಿ, ಸಕತ್ ಸ್ಟೆಪ್ ಹಾಕಿದ್ದಾರೆ ರವಿ ಬಾಲಾ ಶರ್ಮಾ. ನೆಟ್ಟಿಗರಿಂದ ಒಳ್ಳೊಳ್ಳೆಯ ಪ್ರತಿಕ್ರಿಯೆಗಳು ಕೇಳಿ ಬಂದಿವೆ.

ಇದನ್ನೂ ಓದಿ:

Viral Video: ಮೊಮ್ಮಗನೊಂದಿಗೆ 89 ವರ್ಷದ ಅಜ್ಜಿಯ ಸಕತ್ ಡಾನ್ಸ್; ವಿಡಿಯೋ ನೋಡಿದ್ರೆ ನೀವೂ ಫಿದಾ ಆಗ್ತೀರಾ

Viral Video: ಮೊಮ್ಮಗನೊಂದಿಗೆ 89 ವರ್ಷದ ಅಜ್ಜಿಯ ಸಕತ್ ಸ್ಟೆಪ್! ವಯಸ್ಸಿಗೂ ಮೀರಿದ ಅಭಿನಯ ನೀವೂ ನೋಡಿ ..

Published On - 10:47 am, Fri, 27 August 21