Viral : ನಿಮ್ಮ ಪಾಡಿಗೆ ನೀವು ಏನೋ ಕೆಲಸವೋ ಆಚರಣೆಯೋ ಏನೋ ಒಟ್ಟು ತೊಡಗಿಕೊಂಡಿರುತ್ತೀರಿ. ಸ್ಕೀನ್ ಮೇಲೆ ಕಾಣಿಸಿಕೊಳ್ಳುವವರು ನಿಮ್ಮ ಬಳಿ ಬಂದರೆ ಏನೆನ್ನಿಸುತ್ತದೆ? ಇಲ್ಲಿ ಈ ವಿಡಿಯೋದಲ್ಲಿಯೂ ಹಾಗೇ ಆಗಿದೆ. ಬಂಗಾಳದ ಶಾಂತಿನಿಕೇತನದ ಸೋನಾಝುವಾರಿ ಮಾರುಕಟ್ಟೆಯಲ್ಲಿ ಸಂತಾಲಿ ಬುಡಕಟ್ಟು ಜನಾಂಗದ ಹೆಣ್ಣುಮಕ್ಕಳು ನೃತ್ಯ ಮಾಡುತ್ತಿರುವ ವೇಳೆ ಅಚಾನಕ್ಕಾಗಿ ಸ್ಪೈಡರ್ ಮ್ಯಾನ್ ಕಾಣಿಸಿಕೊಂಡಿದ್ದ ವಿಡಿಯೋ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ. ಈಗಾಗಲೇ ಈ ವಿಡಿಯೋ ಸುಮಾರು 45,000 ವೀಕ್ಷಣೆಯನ್ನು ಹೊಂದಿದೆ. ಸುಮಾರು 4,000 ಪ್ರತಿಕ್ರಿಯೆಗಳನ್ನು ಪಡೆದಿದೆ. ಕೊಲ್ಕತ್ತಾಸ್ ಇಲ್ಲ್ಯೂಷನ್ ಎಂಬ ಟ್ವಿಟರ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ.
ವಿಡಿಯೋ ನೋಡಿ.
ಈ ವಿಡಿಯೋ ನೋಡಿದ ಅನೇಕರು ಉರುಳಾಡಿ ನಗುವ ಎಮೊಟಿಕಾನ್ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
http://viral
Published On - 12:57 pm, Fri, 12 August 22