ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸಾಂಗವಾಗಿ ನೆರವೇರಿದೆ. ಕೋಟ್ಯಾಂತರ ಹಿಂದೂಗಳ ಭವ್ಯ ರಾಮ ಮಂದಿರದ ಕನಸು ಸಾಕಾರಕೊಂಡಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯ ಆರಂಭವಾಗಿನಿಂದಲೂ ಭಕ್ತರು ಹಲವಾರು ರೂಪದಲ್ಲಿ ರಾಮ ಮಂದಿರಕ್ಕೆ ದೇಣಿಗೆಯನ್ನು ನೀಡುತ್ತಾ ಬಂದಿದ್ದಾರೆ. ದೇಶ ವಿದೇಶಗಳಿಂದ ರಾಮ ಮಂದಿರಕ್ಕೆ ಉಡುಗೊರೆಗಳ ಮಹಾಪೂರವೇ ಹರಿದು ಬಂದಿವೆ. ಬೃಹತ್ ಬೀಗದ ಕೈ, ಪಂಚಧಾತುವಿನಿಂದ ತಯಾರಿಸಿದ ಬೃಹತ್ ದೀಪ, ಬೃಹತ್ ಘಂಟೆ, ವಜ್ರದ ಕಂಠಾಭರಣ, ಚಿನ್ನ ಲೇಪಿತ ಬ್ಯಾಂಡ್, 108 ಅಡಿ ಉದ್ದದ ಅಗರಬತ್ತಿ, ಪಾದುಕೆ, ಬೆಳ್ಳಿ ಇಟ್ಟಿಗೆ ಸೇರಿದಂತೆ ಹಲವಾರು ಉಡುಗೊರೆಗಳು ಹರಿದು ಬಂದಿವೆ. ಇದೀಗ ಅಖಿಲ ಭಾರತೀಯ ಮಾಂಗ್ ಸಮಾಜವು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಬೆಳ್ಳಿಯ ಪೊರಕೆಯನ್ನು ಉಡುಗೊರೆಯಾಗಿ ನೀಡಿದೆ.
ಹೌದು ಅಖಿಲ ಭಾರತೀಯ ಮಾಂಗ್ ಸಮಾಜವು ಬಾಲ ರಾಮನ ಗರ್ಭಗುಡಿಯನ್ನು ಸ್ವಚ್ಛಗೊಳಿಸಲೆಂದು 1.751 ಕೆಜಿ ತೂಕದ ಬೆಳ್ಳಿಯ ಪೊರಕೆಯನ್ನು ಉಡುಗೊರೆಯಾಗಿ ನೀಡಿದೆ. ಈ ಬೆಳ್ಳಿ ಪೊರಕೆಯನ್ನು 11 ದಿನಗಳಲ್ಲಿ ತಯಾರಿಸಲಾಗಿದ್ದು, ಪೊರಕೆಯ ಮೇಲ್ಭಾಗದಲ್ಲಿ ಲಕ್ಷ್ಮೀ ದೇವಿಯ ಚಿತ್ರವನ್ನು ಸಹ ಕೆತ್ತಲಾಗಿದೆ. ಹಾಗೂ ಈ ಬೆಳ್ಳಿ ಪೊರಕೆಯು 108 ಕಡ್ಡಿಗಳನ್ನು ಸಹ ಹೊಂದಿದೆ. ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ:
#WATCH | Ayodhya: Devotees of Shri Ram from the ‘Akhil Bharatiya Mang Samaj’ donate a silver broom to the Ram Janambhoomi Teerth Kshetra Trust, with a request that it be used for cleaning the Garbha Griha.
The silver broom weighs 1.751 kg. pic.twitter.com/K9Mgd6HnMZ— ANI (@ANI) January 28, 2024
ಅಖಿಲ ಭಾರತ ಮಾಂಗ್ ಸಮಾಜದ ಸದಸ್ಯ ಮಧುಕರ್ ರಾವ್ ಮಾಧ್ಯಮಗಳೊಂದಿಗೆ ಮಾತನಾಡಿ, ವಿಶ್ವದ ಮೊದಲ ಬೆಳ್ಳಿ ಪೊರಕೆಯನ್ನು ಶ್ರೀರಾಮನಿಗೆ ಅರ್ಪಿಸಿದ್ದೇವೆ. ಜನವರಿ 22 ರಂದು ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ದಿನದಂದು ಇಡೀ ದೇಶದಲ್ಲಿ ದೀಪಾವಳಿಯನ್ನು ಆಚರಿಸಲಾಯಿತು. ದೀಪಾವಳಿಯ ದಿನದಂದು ಲಕ್ಷ್ಮೀ ದೇವಿಯ ರೂಪದಲ್ಲಿ ಪೊರಕೆಯನ್ನು ಪೂಜಿಸಲಾಗುತ್ತದೆ, ಅದಕ್ಕಾಗಿಯೇ ಅಖಿಲ ಭಾರತ ಮಾಂಗ್ ಸಮಾಜವು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಬೆಳ್ಳಿಯ ಪೊರಕೆಯನ್ನು ಊಡುಗೊರೆಯಾಗಿ ನೀಡಿದೆʼ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಜ್ಜಿಯೊಂದಿಗೆ ಕನ್ನಡ ಮಾತನಾಡಿದ ಗಗನ ಸಖಿ, ವಿಮಾನಯಾನ ಸೂಪರ್ ಎಂದ ಅಜ್ಜಿ
ಈ ವಿಡಿಯೋವನ್ನು ಸುದ್ದಿ ಸಂಸ್ಥೆ ANI ತನ್ನ X ಖಾತೆಯಲ್ಲಿ ಹಂಚಿಕೊಂಡಿದ್ದು, “ಅಖಿಲ ಭಾರತ ಮಾಂಗ್ ಸಮಾಜದ ರಾಮ ಭಕ್ತರು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಬೆಳ್ಳಿ ಪೊರಕೆಯನ್ನು ಕೊಡುಗೆಯಾಗಿ ನೀಡಿದ್ದು, ಅದನ್ನು ಗರ್ಭಗುಡಿಯನ್ನು ಸ್ವಚ್ಛಗೊಳಿಸಲು ಮಾತ್ರ ಬಳಸಬೇಕೆಂದು ಅವರು ವಿನಂತಿಸಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ.
ವೈರಲ್ ವಿಡಿಯೋದಲ್ಲಿ 108 ಕಡ್ಡಿಗಳನ್ನು ಹೊಂದಿರುವ ಬೆಳ್ಳಿಯ ಪೊರಕೆಯನ್ನು ಭಕ್ತರು ಅದ್ಧೂರಿ ಮೆರವಣಿಗೆಯ ಮೂಲಕ ರಾಮ ಮಂದಿರಕ್ಕೆ ಕೊಂಡೊಯ್ಯುತ್ತಿರುವಂತಹ ದೃಶ್ಯವನ್ನು ಕಾಣಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ