Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni: ಖುಷ್ಬು ಸುಂದರ್ ಅವರ ಅತ್ತೆಯನ್ನು ಭೇಟಿಯಾದ ಧೋನಿ; ಮಾಹಿಗೆ ಪ್ರಣಾಮಗಳು ಎಂದ ಖುಷ್ಬು

ಎಂಎಸ್ ಧೋನಿ (MS Dhoni) ತಮ್ಮ 88 ವರ್ಷದ ಅತ್ತೆಯನ್ನು ಭೇಟಿಯಾದ ಚಿತ್ರಗಳನ್ನು ನಟಿ-ರಾಜಕಾರಣಿ ಖುಷ್ಬು ಸುಂದರ್ (Khushboo Sundar)ಹಂಚಿಕೊಂಡಿದ್ದಾರೆ.

MS Dhoni: ಖುಷ್ಬು ಸುಂದರ್ ಅವರ ಅತ್ತೆಯನ್ನು ಭೇಟಿಯಾದ ಧೋನಿ; ಮಾಹಿಗೆ ಪ್ರಣಾಮಗಳು ಎಂದ ಖುಷ್ಬು
Image Credit source: Khushboo Sundar twitter
Follow us
TV9 Web
| Updated By: ನಯನಾ ಎಸ್​ಪಿ

Updated on:Apr 15, 2023 | 4:57 PM

ಇಡೀ ದೇಶವೇ ಇಷ್ಟಪಡುವ ಕ್ರಿಕೆಟಿಗರಲ್ಲಿ ಮಾಹಿ ಮುಂಚೂಣಿಯಲ್ಲಿದ್ದಾರೆ. ಅದೆಷ್ಟೋ ಜನ ಒಮ್ಮೆಯಾದರೂ ಧೋನಿಯವರನ್ನು ನೋಡಬೇಕು ಅಂದುಕೊಂಡಿರುತ್ತಾರೆ. ಇದೀಗ ಎಂ.ಎಸ್ ಧೋನಿ ಸ್ಟಾರ್ ನಟಿ ಒಬ್ಬರ ಅತ್ತೆಯವರನ್ನು ಭೇಟಿಯಾಗಿದ್ದಾರೆ. ಇವರಿಬ್ಬರ ಚಿತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ವೈರಲ್ ಆಗಿದೆ, ಹೌದು, ಎಂಎಸ್ ಧೋನಿ (MS Dhoni) ತಮ್ಮ 88 ವರ್ಷದ ಅತ್ತೆಯನ್ನು ಭೇಟಿಯಾದ ಕುರಿತು ನಟಿ-ರಾಜಕಾರಣಿ ಖುಷ್ಬು ಸುಂದರ್ (Khushboo Sundar) ಟ್ವಿಟ್ಟರ್ ಅಲ್ಲಿ ಹಂಚಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ, ಖುಷ್ಬು ಅನೇಕ ಚಿತ್ರಗಳನ್ನು ಹಂಚಿಕೊಂಡು, ಹೃತ್ಪೂರ್ವಕ ಸಂದೇಶವನ್ನು ಬರೆದಿದ್ದಾರೆ. “ವೀರರನ್ನು ಯಾರು ತಯಾರಿಸುವುದಿಲ್ಲ, ಹುಟ್ಟಿನಿಂದಲೇ ಅವರು ವೀರರಾಗಿರುತ್ತಾರೆ. ಅದನ್ನು ಧೋನಿ ಸಾಬೀತು ಮಾಡಿದ್ದಾರೆ. ನಮ್ಮ ಧೋನಿ ಅವರು ತೋರಿದ ಕಾಳಜಿ ಮತ್ತು ಆಡಿದ ಮಾತುಗಳನ್ನು ಕೇಳಿ ನನಫ್ ಏನು ಹೇಳಬೇಕೆಂದು ತೋಚುತ್ತಿಲ್ಲ, ಮಂತ್ರಮುಗ್ದಳಗಿದ್ದೇನೆ. 88 ವರ್ಷದ ನನ್ನ ಅತ್ತೆಯನ್ನು ಧೋನಿ ಭೇಟಿಯಾದರು. ಅವರ ಜೀವನದಲ್ಲಿ ಧೋನಿ ಬಿಟ್ಟು ಬೇರೆ ಯಾರು ಹೀರೋ ಇಲ್ಲ, ಧೋನಿಯವರನ್ನು ನನ್ನ ಅತ್ತೆ ಆರಾಧಿಸುತ್ತಾರೆ. ಮಾಹಿ, ನೀವು ಅವರ ಜೀವನಕ್ಕೆ ಹಲವು ವರ್ಷಗಳು, ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಸೇರಿಸಿದ್ದೀರಿ. ಇದಕ್ಕಾಗಿ ನಿಮಗೆ ನನ್ನ ಪ್ರಣಾಮಗಳು. ಇದನ್ನು ಸಾಧ್ಯವಾಗಿಸಿದ @ChennaiIPL ಗೆ ನನ್ನ ಕೃತಜ್ಞತೆಗಳು. CSKಗೆ ಶಿಳ್ಳೆ ಪೋಡು!!” ಎಂದು ಖುಷ್ಬು ತಮ್ಮ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಇನ್ನೂ ಮುನ್ನಡೆಸುತ್ತಿರುವ ಕಾರಣ ಧೋನಿ ಚೆನ್ನೈನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಜಿಯೋ ಸಿನಿಮಾ ಪ್ರಕಾರ, ಐಪಿಎಲ್ 2023 ರ ಆರಂಭಿಕ ದಿನದಂದು, CSK ಗುಜರಾತ್ ಟೈಟಾನ್ಸ್ ವಿರುದ್ಧ ಆಡಿದಾಗ, ಧೋನಿ ಫೈನಲ್‌ನಲ್ಲಿ ಬ್ಯಾಟ್ ಮಾಡಲು ಹೊರಬಂದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೆಲವು ಅದ್ಬುತ ಹೊಡೆತಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು.

ಇದನ್ನೂ ಓದಿ: IPL 2023: RCB ಪರ ಕನ್ನಡಿಗ ಪಾದಾರ್ಪಣೆ

“ಈ ಪೋಸ್ಟ್ ನೋಡಿ ನಾನು ನನ್ನ ಅಜ್ಜಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಅವರು ಧೋನಿಯನ್ನು ಬಹಳ ಪ್ರೀತಿಸುತ್ತಿದ್ದಳು, ಕೊನೆಯ ದಿನಗಳಲ್ಲಿ ನನ್ನ ಅಜ್ಜಿ ಹಾಸಿಗೆಯಲ್ಲಿದ್ದಾಗ, ಧೋನಿ ಆಟವಾಡುತ್ತಿದ್ದನಾ? ಧೋನಿ ಆಡುತ್ತಿದ್ದಾರೆ ನಾವು ಖಂಡಿತ ಗೆಲ್ಲುತೇವೆ ಎಂದು ಹೇಳುತ್ತಿದ್ದರು. ಧೋನಿ ನಿವೃತ್ತಿಯಾದ ದಿನ ಅವರುತುಂಬಾ ದುಃಖಿತರಾಗಿದ್ದರು,” ಎಂದು ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬ ವ್ಯಕ್ತಿ “ನನ್ನ ಚಿಟ್ಟಿ (ಚಿಕ್ಕಮ್ಮ) ಅಂದರೆ ಕಮಲಾ ಚೆನ್ನೈನಲ್ಲಿ ನೆಲೆಸಿದ್ದಾರೆ, 87 ವರ್ಷ ವಯಸ್ಸಿನವರು ಮಾಹಿಯನ್ನು ತುಂಬಾ ಪ್ರೀತಿಸುತ್ತಾರೆ. ಅವರು ಕ್ರಿಕೆಟ್ ಅನ್ನು ಪ್ರೀತಿಸುತ್ತಾರೆ. ಮತ್ತು ಮಾಹಿ ಪಂದ್ಯಗಳನ್ನು ಮಿಸ್ ಮಾಡದೆ ನೋಡುತ್ತಾರೆ.” ಎಂದು ಹೇಳಿದರು. ಇದೀಗ ಈ ಪೋಸ್ಟ್ ಸಖತ್ ವೈರಲ್ ಆಗಿದ್ದು, ಎಲ್ಲರು ಮಾಹಿಯ ಈ ನಡೆಯನ್ನು ಪ್ರಶಂಸಿಸುತ್ತಿದ್ದಾರೆ.

Published On - 4:41 pm, Sat, 15 April 23