Sign In

By signing in or creating an account, you agree with Associated Broadcasting Company's Terms & Conditions and Privacy Policy.

ತರಗತಿಯಲ್ಲಿ ಗುಡ್​ ಆಫ್ಟರ್​ನೂನ್ ಗರ್ಲ್ಸ್​ ಎಂದಿದ್ದಕ್ಕೆ ಎಲ್ಲರೆದುರು ಶಿಕ್ಷಕಿ ಕ್ಷಮೆ ಕೇಳಬೇಕಾಯ್ತು, ಹೇಳಿದ್ರಲ್ಲಿ ತಪ್ಪೇನಿತ್ತು?

ಸಾಮಾನ್ಯವಾಗಿ ಯಾರಾದರೂ ಸಿಕ್ಕಾಗ ಗುಡ್​ ಮಾರ್ನಿಂಗ್, ಗುಡ್​ ಆಫ್ಟರ್​ನೂನ್ ಅಥವಾ ಗುಡ್​ ಈವ್ನಿಂಗ್ ಎಂದು ವಿಶ್ ಮಾಡುತ್ತೀರಲ್ಲವೇ ಅದರಲ್ಲೇನು ತಪ್ಪಿಲ್ಲ.

ತರಗತಿಯಲ್ಲಿ ಗುಡ್​ ಆಫ್ಟರ್​ನೂನ್ ಗರ್ಲ್ಸ್​ ಎಂದಿದ್ದಕ್ಕೆ ಎಲ್ಲರೆದುರು ಶಿಕ್ಷಕಿ ಕ್ಷಮೆ ಕೇಳಬೇಕಾಯ್ತು, ಹೇಳಿದ್ರಲ್ಲಿ ತಪ್ಪೇನಿತ್ತು?
ವಿದ್ಯಾರ್ಥಿಗಳು( ಸಾಂದರ್ಭಿಕ ಚಿತ್ರ)
Follow us
ನಯನಾ ರಾಜೀವ್
|

Updated on: Apr 16, 2023 | 2:28 PM

ಸಾಮಾನ್ಯವಾಗಿ ಯಾರಾದರೂ ಸಿಕ್ಕಾಗ ಗುಡ್​ ಮಾರ್ನಿಂಗ್, ಗುಡ್​ ಆಫ್ಟರ್​ನೂನ್ ಅಥವಾ ಗುಡ್​ ಈವ್ನಿಂಗ್ ಎಂದು ವಿಶ್ ಮಾಡುತ್ತೀರಲ್ಲವೇ ಅದರಲ್ಲೇನು ತಪ್ಪಿಲ್ಲ. ಆದರೆ ತರಗತಿಯೊಂದರಲ್ಲಿ ಶಿಕ್ಷಕಿಯೊಬ್ಬರು ‘ಗುಡ್​ ಆಫ್ಟರ್​ನೂನ್ ಗರ್ಲ್ಸ್’​ ಎಂದು ಹೇಳಿರುವುದು ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ಅಷ್ಟಕ್ಕೂ ಅವರು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ನೀವು ಯೋಚಿಸುತ್ತಿರಬೇಕಲ್ಲವೇ.

ಬ್ರಿಟನ್​ನಲ್ಲಿ ಈ ಘಟನೆ ನಡೆದಿದೆ. ಡೈಲಿ ಮೇಲ್ ವರದಿಯ ಪ್ರಕಾರ, ಶಾಲೆಯ ಶಿಕ್ಷಕಿ ತನಗೆ ಅವಮಾನ ಮಾಡಿದ್ದಾರೆ ಎಂದು ಕ್ಷಮೆಯಾಚಿಸಲು ಒತ್ತಾಯಿಸಲಾಯಿತು. ಘಟನೆಯ ಬಗ್ಗೆ ಮಾಹಿತಿ ನೀಡಿದ ಶಿಕ್ಷಕಿ, ಒಂದು ದಿನ ಮಧ್ಯಾಹ್ನ ತರಗತಿಗೆ ಬಂದೆ, ವಿದ್ಯಾರ್ಥಿಗೆ ಕಲಿಸಬೇಕಿತ್ತು. ಮಧ್ಯಾಹ್ನದ ಸಮಯವಾದ್ದರಿಂದ ವಿದ್ಯಾರ್ಥಿನಿಯರಿಗೆ ಗುಡ್​ ಆಫ್ಟರ್​ನೂನ್ ಗರ್ಲ್ಸ್​ ಎಂದು ಹೇಳಿ ಪಾಠ ಮುಂದುವರೆಸಿದೆ, ಆಗ ಇಲ್ಲಿ ಯಾರನ್ನೂ ಲಿಂಗದೊಂದಿಗೆ ಗುರುತಿಸುವಂತಿಲ್ಲ ಗುಡ್​ ಆಫ್ಟರ್​ನೂನ್ ಸ್ಟೂಡೆಂಟ್ಸ್​ ಎಂದು ಹೇಳಬೇಕಿತ್ತು ಎಂದು ಹೇಳಿ ಪ್ರತಿಭಟನೆ ನಡೆಸಿದರು.

Viral Video: ಪ್ಲೀಸ್ ಮೋದಿ ಜೀ: ಮುದ್ದು ಮುದ್ದಾಗಿ ಮಾತನಾಡುತ್ತಲೇ ಪ್ರಧಾನಿ ಮೋದಿಯವರ ಬಳಿ ಬೇಡಿಕೆ ಇಟ್ಟ ಜಮ್ಮುವಿನ ಪೋರಿ

ಎಲ್ಲರೂ ತಮ್ಮ ಹೆಸರು ಮತ್ತು ಉಪನಾಮವನ್ನು ಬೋರ್ಡ್ ಮೇಲೆ ಬರೆದಿದ್ದರು. ಶಾಲೆಯವರು ಕ್ಷಮೆಯಾಚಿಸುವಂತೆ ಇಮೇಲ್ ಕೂಡ ಕಳುಹಿಸಿದ್ದಾರೆ. ಇಮೇಲ್ ಕಳುಹಿಸುವ ಮೂಲಕ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಕೇಳಲಾಯಿತು. ಯಾರನ್ನೂ ಅವರ ಲಿಂಗದಿಂದ ಗುರುತಿಸುವುದು ಬೇಡ, ಆಗ ಬೇರೆ ಲಿಂಗದವರಿಗೆ ಬೇಸರವಾಗುತ್ತದೆ ಹೀಗಾಗಿ ವಿದ್ಯಾರ್ಥಿಗಳೆಲ್ಲರನ್ನೂ ಉದ್ದೇಶಿಸಿ ಮಾತನಾಡಿದರೆ ಸಾಕು ಎಂದಿದ್ದಾರೆ.

ಅಂತಿಮವಾಗಿ ಶಿಕ್ಷಕಿ ಮಾತನಾಡಿ, ಮಕ್ಕಳೇ ನಿಮ್ಮ ಮನಸ್ಸನ್ನು ನೋಯಿಸುವ ಉದ್ದೇಶ ನನಗಿರಲಿಲ್ಲ, ನಿಮಗೆ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ