ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೊಸ ವ್ಯವಸ್ಥೆ: ಪುರುಷರು ಕೂಡ ಬದಲಾಯಿಸಬಹುದು ಮಗುವಿನ ಡೈಪರ್!

| Updated By: ವಿವೇಕ ಬಿರಾದಾರ

Updated on: Jun 29, 2022 | 10:43 PM

ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಪುರುಷರ ವಾಶ್ ರೂಂ ಸನಿಹ ಡೈಪರ್ ಬದಲಾಯಿಸುವ ಕೊಠಡಿಯನ್ನು ನಿರ್ಮಿಸಿದ್ದಾರೆ.

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೊಸ ವ್ಯವಸ್ಥೆ: ಪುರುಷರು ಕೂಡ ಬದಲಾಯಿಸಬಹುದು ಮಗುವಿನ ಡೈಪರ್!
ಡೈಪರ್​ ಬದಲಾವಣೆಯ ಕೊಠಡಿ
Follow us on

ಬೆಂಗಳೂರು: ಪುಟ್ಟ ಕಂದಮ್ಮಗಳಿಗೆ (Baby) ಸಾರ್ವಜನಿಕ ಸ್ಥಳಗಳಲ್ಲಿ ಡೈಪರ್ (Diaper) ಬದಲಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಡೈಪರ್​ ಬದಲಾಯಿಸಲು ಪ್ರತ್ಯೇಕ ಕೊಠಡಿಗಳನ್ನು (Room) ನಿರ್ಮಿಸಿರುತ್ತಾರೆ.  ಈ ಕೊಠಡಿಗಳನ್ನು ಸಾಮಾನ್ಯವಾಗಿ ಮಹಿಳೆಯೆರ (Woman) ಸ್ನಾನಗೃಹದ ಪಕ್ಕದಲ್ಲಿ ನಿರ್ಮಿಸಲಾಗುತ್ತದೆ. ಇದರಿಂದಾಗಿ ಮಹಿಳೆಯರಿಗೆ ಮಾತ್ರ ಡೈಪರ್​ ಬದಲಾಯಿಸಲು ಸಾಧ್ಯವಾಗುತ್ತದೆ. ಆದರೆ ಕೆಲವೊಂದು ಬಾರಿ ಪುರುಷರು (Man) ಮಕ್ಕಳ ಡೈಪರ್​ ಬದಲಾಯಿಸಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ.

ಇದನ್ನು ಓದಿ: ಈ ಪನ್ನೀರ್​ಗೆ ಬಂದಿದೆ ಬಂಗಾರದ ಬೆಲೆ! ಇದನ್ನು ಯಾವುದರಿಂದ ತಯಾರಿಸುತ್ತಾರೆ ಗೊತ್ತಾ?

ಈ ಸಮಯದಲ್ಲಿ ಪುರುಷರು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಆದರೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಪುರುಷರು ಕಷ್ಟ ಪಡಬೇಕಿಲ್ಲ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಪುರುಷರ ವಾಶ್ ರೂಂ ಸನಿಹ ಡೈಪರ್ ಬದಲಾಯಿಸುವ ಕೊಠಡಿಯನ್ನು ನಿರ್ಮಿಸಿದ್ದಾರೆ. ಡೈಪರ್​​ ಬದಲಾವಣೆಯ ಕೊಠಡಿಯ ಚಿತ್ರವನ್ನು ಸುಖಾದ ಎಂಬವರು ಟ್ವೀಟ್‌ ಮಾಡಿ “ಇದು ಸಂಭ್ರಮಿಸಬೇಕಾದ ಕ್ಷಣ ಪುರುಷರು ಕೂಡ ಮಕ್ಕಳ ಡೈಪರ್​​ ಬದಲಾವಣೆ ಮಾಡಬಹುದಾದ ಕೊಠಡಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿದೆ ಮಕ್ಕಳ ರಕ್ಷಣೆ ಕೇವಲ ಮಹಿಳೆಯ ಜವಾಬ್ದಾರಿಯಲ್ಲ ಎಂದು ಬರೆದುಕೊಂಡು @BLRAirportಗೆ ಟ್ಯಾಗ್​​ ಮಾಡಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣ ವ್ಯವಸ್ಥಾಪಕರು ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು “ಸುಖದಾ ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಡೈಪರ್ ಬದಲಾಯಿಸುವ ಕೊಠಡಿಯನ್ನು #BLRA ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.