ಬದುಕಿನುದ್ದಕ್ಕೂ ದೇಹ ಸಾಮು ಮಾಡಿಕೊಳ್ಳುತ್ತಿದ್ದ ಒಡಾಲಿಸ್ ಮೆನಾ ಕೇವಲ 23ನೇ ವಯಸ್ಸಿಗೆ ಲೋಕದ ಯಾತ್ರೆ ಮುಗಿಸಿದ್ದಾಳೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 16, 2021 | 8:31 PM

ಆಪರೇಷನ್ ಟೇಬಲ್ ಮೇಲೆ ಅನೆಸ್ತೇಷಿಯಾ ನೀಡಿದಾಗ ಆಕೆ ಹೃದಯಾಘಾತಕ್ಕೊಳಗಾಗಿ ಪ್ರಾಣ ಬಿಟ್ಟರು ಎಂದು ವರದಿಯಾಗಿದೆ. ಆಕೆಯನ್ನು ಉಳಿಸಲು ಶಕ್ತಿಮೀರಿ ಪ್ರಯತ್ನಿಸಲಾಯಿತಾದರೂ ಅದು ಸಾಧ್ಯವಾಗಲಿಲ್ಲ ಎಂದು ಆಪರೇಷನ್​ಗಾಗಿ ಆಕೆ ದಾಖಲಾಗಿದ್ದ ಮೆಕ್ಸಿಕೋದ ಗಾಡಲಾಗಜಾರಾದಲ್ಲಿರುವ ಆಸ್ಪತ್ರೆಯೊಂದರ ವೈದ್ಯಕೀಯ ಸಿಬ್ಬಂದಿ ಹೇಳಿದೆ.

ಬದುಕಿನುದ್ದಕ್ಕೂ ದೇಹ ಸಾಮು ಮಾಡಿಕೊಳ್ಳುತ್ತಿದ್ದ ಒಡಾಲಿಸ್ ಮೆನಾ ಕೇವಲ 23ನೇ ವಯಸ್ಸಿಗೆ ಲೋಕದ ಯಾತ್ರೆ ಮುಗಿಸಿದ್ದಾಳೆ!
ಒಡಾಲಿಸ್ ಸ್ಯಾಂಟೊಸ್
Follow us on

ಸಿಕ್ಸ್ ಪ್ಯಾಕ್ ದೇಹದ ಒಡತಿ ಮತ್ತು ಫಿಟ್ನೆಸ್ ಗುರು ಆಗಿದ್ದ ಮೆಕ್ಸಿಕೋದ ಒಡಾಲಿಸ್ ಸ್ಯಾಂಟೋಸ್ ಮೆನಾ ಜುಲೈ 7 ರಂದು ಕೇವಲ 23 ನೇ ವಯಸ್ಸಿನಲ್ಲೇ ಪ್ರಾಣಬಿಟ್ಟಿದ್ದಾರೆ. ಮೆಕ್ಸಿಕೋ ಅಲ್ಲದೆ ವಿಶ್ವದಾದ್ಯಂತ ಹಬ್ಬಿರುವ ಲಕ್ಷಾಂತರ ಅಭಿಮಾನಿಗಳಿಗೆ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ‘ಮೆಕ್ಸಿಕನ್ ಕಿಮ್ ಕಾರ್ದಶಿಯನ್’ ಎಂದು ಜನಪ್ರಿಯರಾಗಿದ್ದ ಮೆನಾ ಅವರ ಅನಿರೀಕ್ಷಿತ ಮತ್ತು ಆಕಾಲಿಕ ಸಾವಿನ ಬಗ್ಗೆ ಹಲವು ಗೊಂದಲಗಳು ಹುಟ್ಟಿಕೊಂಡಿವೆ. ಸರ್ಜರಿಗೆ ಒಳಗಾಗಿದ್ದಾಗೆ ವೈದ್ಯರ ಅಚಾತುರ್ಯದಿಂದ ಮೆನಾ ಸಾವಿಗೀಡಾದರು ಅಂತ ಹೇಳಲಾಗುತ್ತಿದೆ.

ತಮ್ಮ ದೇಹದಾರ್ಢ್ಯದ ವಿಡಿಯೋ ಮತ್ತು ಇಮೇಜ್​ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಯಮಿತವಾಗಿ ಪೋಸ್ಟ್​ ಮಾಡುತ್ತಿದ್ದ ಮೆನಾ ಅವರಿಗೆ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಫಾಲೋಯರ್​ಗಳಿದ್ದರು.
ತಮ್ಮ ಪಿಟ್ನೆಸ್​ನಿಂದಲೇ ಸೋಶಿಯಲ್ ಮಿಡಿಯಾದಲ್ಲಿ ಜನಪ್ರಿಯತೆ ಗಿಟ್ಟಿಸಿದ್ದ ಮೆನಾ ಅವರು ಮಿರಾಡ್ರೈ ಹೆಸರಿನ ಒಂದು ಬೆವರು ನಿರೋಧಕ ಬ್ರ್ಯಾಂಡ್​ ಅನ್ನು ಎಂಡಾರ್ಸ್ ಮಾಡಲು ಸಿದ್ಧತೆ ನಡೆಸಿದ್ದರು. ಅದಕ್ಕಾಗಿ ಆಕೆ ತನ್ನ ದೇಹದಲ್ಲಿನ ಬೆವರು ಗ್ರಂಥಿಗಳನ್ನು ತೆಗೆಸಲು ಶಸ್ತ್ರಚಿಕಿತ್ಸೆಗೊಳಗಾಗಿದ್ದರು, ಎಂದು ವರದಿಯಾಗಿದೆ.

ಆಪರೇಷನ್ ಟೇಬಲ್ ಮೇಲೆ ಅನೆಸ್ತೇಷಿಯಾ ನೀಡಿದಾಗ ಆಕೆ ಹೃದಯಾಘಾತಕ್ಕೊಳಗಾಗಿ ಪ್ರಾಣ ಬಿಟ್ಟರು ಎಂದು ವರದಿಯಾಗಿದೆ. ಆಕೆಯನ್ನು ಉಳಿಸಲು ಶಕ್ತಿಮೀರಿ ಪ್ರಯತ್ನಿಸಲಾಯಿತಾದರೂ ಅದು ಸಾಧ್ಯವಾಗಲಿಲ್ಲ ಎಂದು ಆಪರೇಷನ್​ಗಾಗಿ ಆಕೆ ದಾಖಲಾಗಿದ್ದ ಮೆಕ್ಸಿಕೋದ ಗಾಡಲಾಗಜಾರಾದಲ್ಲಿರುವ ಆಸ್ಪತ್ರೆಯೊಂದರ ವೈದ್ಯಕೀಯ ಸಿಬ್ಬಂದಿ ಹೇಳಿದೆ.

ಆದರೆ ಆಕೆಯ ಅಭಿಮಾನಿಗಳು ವೈದ್ಯಕೀಯ ನಿರ್ಲಕ್ಷ್ಯತೆಯಿಂದಾಗೇ ಮರಣ ಸಂಭವಿಸಿದೆ, ಮೆಕ್ಸಿಕೊ ನಗರದ ಆ ಆಸ್ಪತ್ರೆಯ ಸಿಬ್ಬಂದಿ ವೈದ್ಯಕೀಯ ವೃತ್ತಿಗೆ ನಾಲಾಯಕ್ಕಾಗಿದೆ, ಅಸ್ಪತ್ರೆ ಮತ್ತು ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಕೆಲವು ವರದಿಗಳ ಪ್ರಕಾರ ಸದರಿ ಆಸ್ಪತ್ರೆಯು ಅಂಗೀಕೃತ ಪರವಾನಗಿ ಹೊಂದಿಲ್ಲ ಎಂದು ಮೆನಾ ಅವರ ಕುಟುಂಬ ಅರೋಪಿಸಿದೆ ಎಂದು ಹೇಳಿವೆ.

ಮೆನಾ ಸಾವಿನ ನಂತರ ಸ್ಕಿನ್​ಪೀಲ್ ಕ್ಲಿನಿಕ್ ಹೆಸರಿನ ಆಸ್ಪತ್ರೆಯ ಸಿಬ್ಬಂದಿಯು ಒಂದು ಹೇಳಿಕೆಯನ್ನು ಬಿಡಗಡೆ ಮಾಡಿದೆ. ದೇಹದಲ್ಲಿರುವ ರಾಸಾಯನಿಕ ಅಂಶಗಳು ಚಯಾಪಚಯ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತವೆ ಮತ್ತು ಆಕೆಯ ಮೇಲೆ ಶಸ್ತ್ರಚಿಕಿತ್ಸೆ ನಡೆಸಲು ತಯಾರಾಗಿದ್ದ ವೈದ್ಯಕೀಯ ಸಿಬ್ಬಂದಿಗೆ ಆಕೆ ಸ್ಟಿರಾಯ್ಡ್​ಗಳನ್ನು ತೆಗೆದುಕೊಳ್ಳುತ್ತಿದ್ದ ಅಂಶವನ್ನು ಮುಂಚಿತವಾಗಿ ತಿಳಿಸಿರಲಿಲ್ಲ. ಅನೆಸ್ತೇಷಿಯಾ ನೀಡಿದ ಕೂಡಲೇ ಮೆನಾ ಅವರ ದೇಹದಲ್ಲಿ ಇದ್ದ ರಾಸಾಯನಿಕ ಅಂಶಗಳು ಪ್ರತಿಕ್ರಿಯಿಸಿ ಸಾವು ಸಂಭವಿಸಿದೆ,’ ಎಂದು ಹೇಳಿದೆ.
ಮೂಲಗಳ ಪ್ರಕಾರ ಮೆನಾ ಒಂದು ನ್ಯೂಟ್ರಿಷನ್ ವ್ಯಾಸಂಗವನ್ನು ಮಾಡುತ್ತಿದ್ದರು. ದೇಹದಾರ್ಢ್ಯಕ್ಕೆ ಸಂಬಂಧಿಸಿದಂತೆ ಮಿಸ್ ಹರ್ಕ್ಯುಲಿಸ್ 2019 ಕಿರೀಟ ಧರಿಸುವುದು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಆಕೆ ಗೆದ್ದಿದ್ದರು.

ಇದನ್ನೂ ಓದಿ: Viral Video : ಆಹಾರ ಹುಡುಕುತ್ತಾ ಬಂದ ಆನೆ ಗೋಡೆಯಿಂದ ಮನೆಯೊಳಗೆ ನುಗಿತ್ತು!

Published On - 8:21 pm, Fri, 16 July 21