
Viral News : ಒಂದು ಬ್ಯಾಂಡ್ಕೊಡಿ ಎಂದರೆ ಅಂಗಡಿಯವ ನಿಮ್ಮೆದುರು ಈವತ್ತು ನಾಲ್ಕೈದು ಬ್ಯಾಂಡ್ಏಡ್ಗಳನ್ನು ನಿಮ್ಮೆದುರು ಹರವಿಟ್ಟರೆ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ನಿಮ್ಮ ಮೈಬಣ್ಣಕ್ಕೆ ಒಪ್ಪುವಂಥ ವಿವಿಧ ಛಾಯೆಯ ಬ್ಯಾಂಡ್ಏಡ್ಗಳು ಮಾರುಕಟ್ಟಗೆ ಬಂದಿವೆ. ಇದೀಗ ವೈರಲ್ ಆಗಿರುವ ಈ ಟ್ವೀಟ್ ನೋಡಿ. ಉದ್ಯಮಿ ಹರ್ಷ ಗೋಯೆಂಕಾ ಹಂಚಿಕೊಂಡಿದ್ದಾರೆ. ನೆಟ್ಟಿಗರೂ ಈ ಬಗ್ಗೆ ಭಾರೀ ಚರ್ಚೆ ನಡೆಸಿದ್ದಾರೆ.
ಮೈಬಣ್ಣಕ್ಕೆ ಒಪ್ಪುವಂಥ ಬ್ಯಾಂಡ್ಏಡ್ ಅವಶ್ಯಕತೆ ನಿಜಕ್ಕೂ ಇದೆಯಾ? ಕೆಲ ಆವಿಷ್ಕಾರಗಳು ನಿಜಕ್ಕೂ ಅರ್ಥಹೀನ! ಎಂದು ಹರ್ಷ ಗೋಯೆಂಕಾ ಕೇಳಿದ್ಧಾರೆ. ಅದಕ್ಕೆ ಪ್ರತಿಯಾಗಿ ನೆಟ್ಟಿಗರು ಪರವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಮಧ್ಯರಾತ್ರಿ ಗೂಳಿಸವಾರಿ; ಪೊಲೀಸರೆದುರು ತಪ್ಪೊಪ್ಪಿಕೊಂಡ ಯುವಕ
ಒಂದು ಸಣ್ಣಗಾಯಕ್ಕೆ ಅಂಟಿಸುವ ಪಟ್ಟಿಯ ಬಗ್ಗೆ ಇಷ್ಟೊಂದು ಯೋಚಿಸಿ ತೊಗಿಕೊಳ್ಳಬೇಕಾದ ಅವಶ್ಯಕತೆ ಇದೆಯಾ? ಇದೆಲ್ಲ ಮಾರಾಟದ ಗಿಮಿಕ್ ಎಂದು ಕೆಲವರು ಹೇಳಿದ್ಧಾರೆ. ಅದಕ್ಕೆ ಪ್ರತಿಯಾಗಿ ಇನ್ನೂ ಕೆಲವರು, ಚರ್ಮದ ಬಣ್ಣಕ್ಕಾಗಿ ಜೀವಮಾನವಿಡೀ ನೊಂದುಕೊಳ್ಳುವವರ ಸಂಕಟ ನಿಮಗೇನು ಅರ್ಥವಾಗುತ್ತೆ? ಎಂದು ಕೇಳಿದ್ಧಾರೆ.
ಇದನ್ನೂ ಓದಿ : ವೈರಲ್ ಚಿಲ್ಲಿ ಲಿಪ್ ಗ್ಲಾಸ್; ಇದನ್ನು ಟ್ರೆಂಡ್ ಆಗಲು ಬಿಡಬೇಡಿ ಎನ್ನುತ್ತಿರುವ ನೆಟ್ಟಿಗರು
ಲಿಪ್ಸ್ಟಿಕ್ ಅಲ್ಲವಲ್ಲ? ಇದು ಗಾಯಕ್ಕೆ ಹಚ್ಚಿಕೊಳ್ಳುವ ಪಟ್ಟಿ, ಯಾವ ಬಣ್ಣವಾದರೆ ಏನು? ಗಾಯ ಮಾಗಿದ ಮೇಲೆ ಕಿತ್ತೊಗೆಯುವುದೇ ಅಲ್ಲವೇ ಎಂದು ಕೇಳಿದ್ಧಾರೆ ಒಬ್ಬರು. ನಿಮಗಿದೆಲ್ಲ ಅರ್ಥವಾಗಲ್ಲ, ಅವರವರಿಗೆ ಅವರದೇ ಆದ ಆಯ್ಕೆಗಳಿರುತ್ತವೆ. ಆ ಪ್ರಕಾರ ಅವರು ಖರೀದಿಸುತ್ತಾರೆ ನಿಮಗೆ ಬೇಡವಾದರೆ ನೀವು ಸುಮ್ಮನಿರಿ ಎಂದಿದ್ದಾರೆ ಮತ್ತೊಬ್ಬರು. ಅಯ್ಯೋ ದೇವರೇ ನಿಮ್ಮ ವಾದಗಳೆಲ್ಲ ಸರಿಯೇ. ಈಗ ಮುಂದೇನು ಮಾಡುವುದು? ಎಂದು ಮತ್ತೊಬ್ಬರು ಕೇಳಿದ್ದಾರೆ.
ನೀವೇನಂತೀರಿ? ಬಣ್ಣಬಣ್ಣದ ಬ್ಯಾಂಡ್ಏಡ್ ಮಾರುಕಟ್ಟೆಯಲ್ಲಿರುವುದು ಅನುಕೂಲವೇ ಅನಾನುಕೂಲವೇ? ಏನೇ ಆದರೂ ಆಗುವ ಗಾಯ ಮತ್ತು ಮಾಗುವ ಪ್ರಕ್ರಿಯೆ ಒಂದೇ ಅಲ್ಲವೇ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:49 am, Wed, 10 May 23