56 ವರ್ಷದ ಮಹಿಳೆಯ ಹೊಟ್ಟೆಯಿಂದ 47 ಕೆಜಿ ತೂಕದ ಗಡ್ಡೆಯನ್ನು ವೈದ್ಯರು ಹೊರತೆಗೆದಿದ್ದಾರೆ. ಈ ಮೂಲಕ ಹಲವು ವರ್ಷಗಳಿಂದ ನೋವು ಅನುಭವಿಸುತ್ತಿದ್ದ ಮಹಿಳೆಯ ಜೀವ ಉಳಿಸಿದ್ದಾರೆ. 18 ವರ್ಷಗಳಿಂದ ಟ್ಯೂಮರ್ನಿಂದ (Tumour) ಬಳಲುತ್ತಿದ್ದ ಗುಜರಾತಿನ ಮಹಿಳೆಯನ್ನು ವೈದ್ಯರು(Doctors) ಶಸ್ತ್ರ ಚಿಕಿತ್ಸೆಯ ಮೂಲಕ ಬದುಕುಳಿಸಿದ್ದಾರೆ. ಇದನ್ನು ಭಾರತದಲ್ಲಿ ಶಸ್ತ್ರಚಿಕಿತ್ಸೆಯ(Surgery) ಮೂಲಕ ಹೊರತೆಗೆದ ಅತಿ ದೊಡ್ಡ ಗಡ್ಡೆ ಎಂದು ಹೇಳಲಾಗಿದೆ.
ಈ ಕುರಿತು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಮಾತನಾಡಿ ರೋಗಿಗೆ ನಿಂತುಕೊಳ್ಳಲು ಕಷ್ಟವಾಗುತ್ತಿತ್ತು, ಆಪರೇಷನ್ ಬಳಿಕ 47 ಕೆಜಿ ತೂಕದ ಗಡ್ಡೆಯನ್ನು ಹೊರಗೆ ತೆಗೆಯಲಾಗಿದೆ. ನಂತರ ಅವರ ತೂಕ 49 ಕೆಜಿ ಆಗಿದೆ ಎಂದಿದ್ದಾರೆ. 2004ರಲ್ಲಿ ಮಹಿಳೆ ದೇಹದಲ್ಲಿ ಅಗಾಧ ತೂಕವನ್ನು ಕಂಡುಕೊಂಡಿದ್ದರು. ದಿನಕಳೆದಂತೆ ದೇಹದ ತೂಕ ಅತಿಯಾಗಿ ದೊಡ್ಡ ಗಡ್ಡೆ ಬೆಳೆದಿತ್ತು. ನಂತರ ಅದನ್ನು ಆಪರೇಷನ್ ಮೂಲಕ ತೆಗೆಯುವ ಹಂತಕ್ಕೆ ಬಂದಿತ್ತು ಎಂದು ವಿವರಿಸಿದ್ದಾರೆ.
8 ಮಂದಿ ವೈದ್ಯರು ನಾಲ್ಕು ಗಂಟೆಗಳ ಕಾಲ ಆಪರೇಷನ್ ನಡೆಸಿದ್ದು, ಯಶಸ್ವೀ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸದ್ಯ ಮಹಿಳೆ ಆರೋಗ್ಯವಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಮಾನವನ ದೇಹದಿಂದ ಇಷ್ಟು ಭಾರದ ಗಡ್ಡೆಯನ್ನು ಆಪರೇಷನ್ ಮೂಲಕ ತೆಗೆಯಲಾಗಿದೆ ಎಂದು ವೈದ್ಯರ ಹೇಳಿಕೆ ಉಲ್ಲೇಖಿಸಿ ವರದಿ ತಿಳಿಸಿದೆ.
ಇದನ್ನೂ ಓದಿ:
Smriti Irani: ಮಣಿಪುರದ ಮಹಿಳೆಯರೊಂದಿಗೆ ಸಾಂಪ್ರದಾಯಿಕ ನೃತ್ಯ ಮಾಡಿ ಮನ ಗೆದ್ದ ಸಚಿವೆ ಸ್ಮೃತಿ ಇರಾನಿ; ವಿಡಿಯೋ ವೈರಲ್
Published On - 9:53 am, Sun, 20 February 22