Viral Video: ನಾಯಿಯ ಹುಟ್ಟುಹಬ್ಬಕ್ಕೆ ಔತಣಕೂಟ ಏರ್ಪಡಿಸಿದ ಮನೆ ಮಂದಿ! ವಿಡಿಯೊ ವೈರಲ್

ನಾಯಿಗೆ ಅಂಗಿ ತೊಡೆಸಿ ಸಿಂಗಾರ ಮಾಡಲಾಗಿದೆ. ಎದುರಿರುವ ಬಟ್ಟಲಿನಲ್ಲಿ ವಿವಿಧ ಅಡುಗೆ ತಯಾರಾಗಿದೆ. ಮಹಿಳೆ ಚಮಚದಲ್ಲಿ ಆಹಾರವನ್ನು ತಿನ್ನುಸುತ್ತಿದ್ದಾರೆ.

Viral Video: ನಾಯಿಯ ಹುಟ್ಟುಹಬ್ಬಕ್ಕೆ ಔತಣಕೂಟ ಏರ್ಪಡಿಸಿದ ಮನೆ ಮಂದಿ! ವಿಡಿಯೊ ವೈರಲ್
ಮನೆಯಲ್ಲಿ ಸಾಕಿದ್ದ ನಾಯಿ ಹುಟ್ಟುಹಬ್ಬಕ್ಕೆ ಬೊಂಬಾಟ್ ಭೋಜನ!
Edited By:

Updated on: Aug 06, 2021 | 12:37 PM

ಸಾಮಾನ್ಯವಾಗಿ ಸಾಕು ಪ್ರಾಣಿಗಳಲ್ಲಿ ನಾಯಿ ಎಂದರೆ ಎಲ್ಲರಿಗೆ ಇಷ್ಟ. ಮನೆಯನ್ನು ಕಾಯುತ್ತಾ ತನ್ನ ಕರ್ತವ್ಯಕ್ಕೆ ಬದ್ಧನಾಗಿ ಕೆಲಸ ನಿರ್ವಹಿಸುತ್ತದೆ. ಮನೆಯ ಜತೆಗೆ ಮನೆಯ ಜನರ ಕಾವಲಾಗಿ ನಿಲ್ಲುತ್ತದೆ. ಮೂಕ ಪ್ರಾಣಿಯಾದರೂ ಉಂಡ ಮನೆಗೆ ಎಂದೂ ಮೋಸ ಮಾಡದೇ ಮನೆಯ ಸದಸ್ಯರೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತದೆ. ಮನೆಯ ಸದಸ್ಯರ ಹುಟ್ಟುಹಬ್ಬವನ್ನು ಸಂಭ್ರಮಿಸಿದಂತೆಯೇ ಇಲ್ಲೋರ್ವರು ಮನೆಯಲ್ಲಿ ಸಾಕಿದ್ದ ಪ್ರೀತಿಯ ನಾಯಿಗೆ ಹುಟ್ಟ ಹಬ್ಬದ ಶುಭಾಶಯ ಕೋರಿದ್ದಾರೆ. ನಾಯಿಯ ಬರ್ತ ಡೇ ಪಾರ್ಟಿಗೆ ಭರ್ಜರಿ ಔತಣಕೂಟವೇ ರೆಡಿಯಾಗಿದೆ.

ನಾಯಿಗೆ ಅಂಗಿ ತೊಡೆಸಿ ಸಿಂಗಾರ ಮಾಡಲಾಗಿದೆ. ಎದುರಿರುವ ಬಟ್ಟಲಿನಲ್ಲಿ ವಿವಿಧ ಅಡುಗೆ ತಯಾರಾಗಿದೆ. ಮಹಿಳೆ ಆಹಾರವನ್ನು ಕೈಯಾರೆ ತಿನ್ನುಸುತ್ತಿದ್ದಾರೆ. ಎದುರಿರುವ ಅಡುಗೆಯನ್ನು ನೋಡಿದರೆ ಹುಟ್ಟುಹಬ್ಬದ ತಯಾರಿ ಭರ್ಜರಿಯಾಗಿರುವಂತೆ ಅನಿಸುತ್ತಿದೆ.

ನಾಯಿಗೆ ಆರತಿ ಬೆಳಗಲಾಗಿದೆ. ಬಣ್ಣದ ಅಂಗಿ ತೊಟ್ಟು ಬರ್ತ ಡೇ ಆಚರಿಸಿಕೊಳ್ಳಲು ಸಜ್ಜಾಗಿದೆ. ಎದುರು ಕುಳಿತಿರುವ ಮಹಿಳೆ ಆಶೀರ್ವದಿಸಿ ಬೌಲ್​ನಲ್ಲಿರುವ ತಿಂಡಿಯನ್ನು ಚಮಚದಲ್ಲಿ ನೀಡುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ವಿಡಿಯೋ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ:

Viral Video: ಬೆಕ್ಕಿಗೆ ಆಟ, ನಾಯಿಗೆ ಸಂಕಟ! ಅರೇ ಇದೇನಿದು ಹೊಸ ಗಾದೆ ಎನ್ನುತ್ತೀರಾ; ವಿಡಿಯೊ ನೋಡಿ

Shocking News: ವಿಷದ ಇಂಜೆಕ್ಷನ್ ಚುಚ್ಚಿ 300 ನಾಯಿಗಳ ಕೊಲೆ; ಶವಗಳನ್ನು ಕೆರೆಗೆ ಸುರಿದ ಪಾಪಿಗಳು

Published On - 12:37 pm, Fri, 6 August 21