Viral Video: ಪುಟ್ಟ ಮಗುವಿಗೆ ತೆವಳಲು ಕಲಿಸುತ್ತಿರುವ ನಾಯಿ ಮರಿ; ಕ್ಯೂಟ್ ವಿಡಿಯೊ ವೈರಲ್

ಇದೀಗ ವೈರಲ್ ಆದ ವಿಡಿಯೊದಲ್ಲಿ ಗಮನಿಸುವಂತೆ ಪುಟ್ಟ ನಾಯಿ ಮರಿಯೊಂದು ಮಗುವಿಗೆ ತೆವಳಲು ಹೇಳಿಕೊಡುತ್ತಿದೆ. ಈ ಕ್ಯೂಟ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

Viral Video: ಪುಟ್ಟ ಮಗುವಿಗೆ ತೆವಳಲು ಕಲಿಸುತ್ತಿರುವ ನಾಯಿ ಮರಿ; ಕ್ಯೂಟ್ ವಿಡಿಯೊ ವೈರಲ್
ಪುಟ್ಟ ಮಗುವಿಗೆ ತೆವಳಲು ಕಲಿಸುತ್ತಿರುವ ನಾಯಿ ಮರಿ
Updated By: shruti hegde

Updated on: Nov 21, 2021 | 1:34 PM

ಮನೆಯಲ್ಲಿ ಸಾಕಿದ ನಾಯಿ ತನ್ನ ಕರ್ತವ್ಯವನ್ನು ಪಾಲಿಸುತ್ತಾ ಎಂದಿಗು ಮನೆಯವರ ಸುರಕ್ಷತೆಯನ್ನೇ ಬಯಸುತ್ತದೆ. ನಾವು ಎಷ್ಟು ಕಾಳಜಿ, ಪ್ರೀತಿ ಕೊಟ್ಟು ಪ್ರಾಣಿಗಳನ್ನು ನೋಡಿಕೊಳ್ಳುತ್ತೇವೆಯೋ ಅಷ್ಟೇ ಪ್ರೀತಿ ವಿಶ್ವಾಸದೊಂದಿಗೆ ಪ್ರಾಣಿಗಳು ನಮ್ಮೊಂದಿಗೆ ನಡೆದುಕೊಳ್ಳುತ್ತವೆ. ಇದೀಗ ವೈರಲ್ ಆದ ವಿಡಿಯೊದಲ್ಲಿ ಗಮನಿಸುವಂತೆ ಪುಟ್ಟ ನಾಯಿ ಮರಿಯೊಂದು ಮಗುವಿಗೆ ತೆವಳಲು ಹೇಳಿಕೊಡುತ್ತಿದೆ. ಈ ಕ್ಯೂಟ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

ಸಾಮಾನ್ಯವಾಗಿ ತಮಾಷೆಯ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ಎಚ್ಚರಿಕೆಯ ಸಂದೇಶವನ್ನು ಸಾರುತ್ತವೆ. ಸಾಕು ಪ್ರಾಣಿಗಳ ತುಂಟಾಟ, ಮೋಜು, ಮಸ್ತಿ ಜೊತೆಗೆ ಕೆಲವು ಕ್ಯೂಟ್ ವಿಡಿಯೊಗಳು ಹೆಚ್ಚು ಇಷ್ಟವಾಗುತ್ತವೆ. ವಿಡಿಯೊವನ್ನು ನೋಡಿದಾಕ್ಷಣ ಮತ್ತೆ ಮತ್ತೆ ಆ ದೃಶ್ಯವನ್ನೇ ನೋಡೋಣ ಅನ್ನುವಷ್ಟರ ಮಟ್ಟಿಗೆ ದೃಶ್ಯ ಮನಸ್ಸಿಗೆ ಹಿಡಿಸಿಬಿಡುತ್ತವೆ. ಅಂತಹುದೇ ಒಂದು ವಿಡಿಯೊ ಇದಾಗಿದ್ದು ಮುದ್ದಾದ ಪುಟ್ಟ ಮಗು ಮತ್ತು ನಾಯಿ ಮರಿಯ ವಿಡಿಯೊ ಸಕತ್ ವೈರಲ್ ಆಗಿದೆ.

ವಿಡಿಯಿವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಐಎಫ್ಎಸ್ ಅಧಿಕಾರಿ ಸುಸಂತಾ ನಂದಾ ಅವರು ಹಂಚಿಕೊಂಡ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಮಗು ನೆಲದ ಮೇಲೆ ಮಲಗಿದೆ. ಮಗುವಿನ ಎದುರು ಮುದ್ದಾದ ನಾಯಿ ಮರಿಯೊಂದು ಮಲಗಿದೆ. ಮಗು ನೆಲದ ಮೇಲೆ ತೆವಳಲು ಹಂಬಲಿಸುತ್ತಿದೆ ಆದರೆ ಸಾಧ್ಯವಾಗುತ್ತಿಲ್ಲ. ನಾಯಿ ಮರಿಯೊಂದು ಮಗುವಿಗೆ ತೆವಳಲು ಹೇಳಿಕೊಡುತ್ತಿದೆ. ವಿಡಿಯೊ ಮುದ್ದಾಗಿದೆ ಎಂದು ಪ್ರತಿಕ್ರಿಯಿಸುವ ಮೂಲಕ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ವಿಡಿಯೊ ಪೋಸ್ಟ್ ಮಾಡಿದಾಗಿನಿಂದ 57 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ನಿಜವಾಗಿಯೂ ವಿಡಿಯೊ ಬಹಳ ಮುದ್ದಾಗಿದೆ ಎಂದು ಓರ್ವರು ಹೇಳಿದ್ದಾರೆ. ನಾಯಿ ಮತ್ತು ಮಗು ಇಬ್ಬರೂ ತುಂಬಾ ಮುದ್ದಾಗಿದ್ದಾರೆ ಎಂದು ಮತ್ತೋರ್ವರು ಹೇಳಿದ್ದಾರೆ. ಮಗುವಿನ ಮನಸ್ಸನ್ನು ನಾಯಿ ಮರಿ ಅರ್ಥ ಮಾಡಿಕೊಂಡಿದೆ, ಎಷ್ಟು ಚುರುಕಾಗಿದೆ ಈ ನಾಯಿ ಮರಿ ಎಂಬ ಅನಿಸಿಕೆಗಳನ್ನು ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಫಾಂಟಾ ಕೋಲ್ಡ್ ಡ್ರಿಂಕ್ಸ್​ ವಿತ್ ನೂಡಲ್ಸ್ ಸವಿದಿದ್ದೀರಾ? ಹೆಸರು ಕೇಳಿಯೇ ಕನ್​ಫ್ಯೂಸ್​ ಆದ ನೆಟ್ಟಿಗರು

Viral Video: ದೈತ್ಯ ಆನೆ ಕಬ್ಬಿಣದ ಬೇಲಿ ಏರುತ್ತಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಈ ವಿಡಿಯೊ ನೋಡಿ