Viral Video: ಫಾಂಟಾ ಕೋಲ್ಡ್ ಡ್ರಿಂಕ್ಸ್​ ವಿತ್ ನೂಡಲ್ಸ್ ಸವಿದಿದ್ದೀರಾ? ಹೆಸರು ಕೇಳಿಯೇ ಕನ್​ಫ್ಯೂಸ್​ ಆದ ನೆಟ್ಟಿಗರು

TV9 Digital Desk

| Edited By: shruti hegde

Updated on:Nov 21, 2021 | 9:19 AM

ಇದೀಗ ಫುಲ್ ವೈರಲ್ ಆದ ಸುದ್ದಿಯೊಂದರಲ್ಲಿ ನೂಡಲ್ಸ್ಅನ್ನು ಫಾಂಟಾ ಕೋಲ್ಡ್ ಡ್ರಿಂಕ್ಸ್ ಜೊತೆ ತಯಾರಿಸಲಾಗಿದೆ. ನೀರಿನ ಬದಲು ಫಾಂಟಾ ಹಾಕಿ ನೂಡಲ್ಸ್​ ತಯಾರಿಸಲಾಗಿದೆ. ಫಾಂಟಾ ಕೋಲ್ಡ್ ಡ್ರಿಂಕ್ಸ್ ವಿತ್ ನೂಡಲ್ಸ್ ರೆಸಿಪಿ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

Viral Video: ಫಾಂಟಾ ಕೋಲ್ಡ್ ಡ್ರಿಂಕ್ಸ್​ ವಿತ್ ನೂಡಲ್ಸ್ ಸವಿದಿದ್ದೀರಾ? ಹೆಸರು ಕೇಳಿಯೇ ಕನ್​ಫ್ಯೂಸ್​ ಆದ ನೆಟ್ಟಿಗರು
ಫಾಂಟಾ ಕೋಲ್ಡ್ ಡ್ರಿಂಕ್ಸ್​ ವಿತ್ ನೂಡಲ್ಸ್
Follow us


ನೂಡಲ್ಸ್ ಅಂದ್ರೆ ನಿಮಗಿಷ್ಟಾನಾ? ಇಲ್ವಾ? ಸಾಮಾನ್ಯವಾಗಿ ದಿಢೀರ್​ ಸ್ನ್ಯಾಕ್ಸ್ (Snacks) ತಯಾರಿಸಲು ಮೊದಲ ಆಯ್ಕೆ ನೂಡಲ್ಸ್​ ಅಥವಾ ಮ್ಯಾಗಿ. ಇತ್ತೀಚಿನಗಿನವರಿಗಂತೂ ನೂಡಲ್ಸ್​ನಂತಹ​ ಫುಡ್​ಗಳನ್ನು ತುಂಬಾ ಇಷ್ಟಪಡುತ್ತಾರೆ. ಈಗೆಲ್ಲಾ ಇನ್​ಸ್ಟಂಟ್​ ಮ್ಯಾಗಿ ಇರೋದ್ರಿಂದ ಕೆಲ ನಿಮಿಷಗಳಲ್ಲಿ ಮನೆಯಲ್ಲಿಯೇ ರೆಸಿಪಿ (Recipe) ತಯಾರಿಸಿಕೊಳ್ಳಬಹುದು. ಸಾಮಾನ್ಯವಾಗಿ ನೂಡಲ್ಸ್​ಅನ್ನು ಬಿಸಿ ನೀರಿನಲ್ಲಿ ಬೇಯಿಸಿ ಮಸಾಲಾ ಜೊತೆ ಮಿಶ್ರಣ ಮಾಡಿ ತಯಾರಿಸಲಾಗುತ್ತೆ. ಆದರೆ ಇದೀಗ ಫುಲ್ ವೈರಲ್ ಆದ ಸುದ್ದಿಯೊಂದರಲ್ಲಿ ನೂಡಲ್ಸ್ಅನ್ನು(Noodles) ಫಾಂಟಾ ಕೋಲ್ಡ್ ಡ್ರಿಂಕ್ಸ್ (Fanta Cold Drinks) ಜೊತೆ ತಯಾರಿಸಲಾಗಿದೆ. ನೀರಿನ ಬದಲು ಫಾಂಟಾ ಹಾಕಿ ನೂಡಲ್ಸ್​ ತಯಾರಿಸಲಾಗಿದೆ. ಫಾಂಟಾ ಕೋಲ್ಡ್ ಡ್ರಿಂಕ್ಸ್ ವಿತ್ ನೂಡಲ್ಸ್ ರೆಸಿಪಿ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಫುಲ್ ವೈರಲ್ ಆಗಿದೆ.

ಯೂಟ್ಯೂಬ್​ನಲ್ಲಿ ಈ ರೆಸಿಪಿಯ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ದೆಹಲಿಯ ಎನ್​ಸಿಆರ್​ ಫುಡ್ ಸ್ಟ್ರೀಟ್​ನಲ್ಲಿ ತಯಾರಾಗುತ್ತಿದ್ದ ಈ ಹೊಸ ರೆಸಿಪಿಯನ್ನು ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. 4 ನಿಮಿಷದ ಈ ವಿಡಿಯೊ ಸಕತ್ ವೈರಲ್ ಆಗಿದೆ.

ಪಾತ್ರೆಗೆ ತುಪ್ಪು ಹಾಕುವ ಮೂಲಕ ರೆಸಿಪಿ ಪ್ರಾರಂಭವಾಗುತ್ತದೆ. ಫಾಂಟಾ ವಿತ್ ನೂಡಲ್ಸ್ಅನ್ನು ಹೇಗೆ ತಯಾರಿಸುವುದು ಎಂಬುದನ್ನು ವಿಡಿಯೊದಲ್ಲಿ ನೋಡಬಬಹುದಾಗಿದೆ. ಕೆಲವರು ಈ ರೆಸಿಪಿ ನೋಡಿ ಕನ್ಫ್ಯೂಸ್ ಆಗಿದ್ದರೆ, ಇನ್ನು ಕೆಲವರು ವಿಲಕ್ಷಣ ಆಹಾರ ಸಂಯೋಜನೆ ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲವರಿಗೆ ಈ ರೆಸಿಪಿ ಇಷ್ಟವಾಗಿಲ್ಲ.

ನವೆಂಬರ್ 18ಕ್ಕೆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲಾಗಿದ್ದು, ಸುಮಾರು 13 ಸಾವಿರ ವೀಕ್ಷಣೆಗಳನ್ನು ಮತ್ತು 10 ಸಾವಿರ ಲೈಕ್ಸ್​ಗಳನ್ನು ಗಳಿಸಿಕೊಂಡಿದೆ. ನಾನು ಈ ಹಿಂದೆ ಚಿಲ್ಲಿ ಹನಿ ನೂಡಲ್ಸ್ ತಿಂದಿದ್ದೆ ಅದು ರುಚಿಯಾಗಿತ್ತು, ಈ ಫಾಂಟಾ ವಿತ್ ನೂಡಲ್ಸ್ ಕೂಡಾ ಸಿಹಿಯಾಗಿರಬಹುದು ಎಂದು ಓರ್ವರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರಿಗೆ ಈ ಹೊಸ ರೆಸಿಪಿ ಟೇಸ್ಟ್​ ಮಾಡಬೇಕೆಂದೆನಿಸಿದರೆ, ಇನ್ನು ಕೆಲವರು ರೆಸಿಪಿ ವಿಲಕ್ಷಣ ಆಹಾರ ಸಂಯೋಜನೆಯಿಂದ ಕೂಡಿದೆ ಎಂದಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ:

Viral Video: ದೈತ್ಯ ಆನೆ ಕಬ್ಬಿಣದ ಬೇಲಿ ಏರುತ್ತಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಈ ವಿಡಿಯೊ ನೋಡಿ

Viral Video: ವಧು ಮತ್ತು ಸ್ನೇಹಿತೆಯರು ಸೇರಿ ಪ್ರಿಯಾಂಕಾ ಚೋಪ್ರಾ ಹಾಡಿಗೆ ಸಕತ್ ಸ್ಟೆಪ್; ವಿಡಿಯೊ ಫುಲ್ ವೈರಲ್

ತಾಜಾ ಸುದ್ದಿ

Related Stories

Click on your DTH Provider to Add TV9 Kannada