Viral Video: ಮಲಗಿದ್ದ ಪುಟ್ಟ ಬಾಲಕಿಯನ್ನು ಏಳಿಸಲು ನಾಯಿ ಮಾಡಿದ ಚೇಷ್ಟೆಗಳನ್ನು ನೋಡಿ

ಇಲ್ಲೊಂದು ಶ್ವಾನ ಹಾಗೂ ಪುಟ್ಟ ಮಗುವಿನ ಸ್ನೇಹದ ವಿಡಿಯೋ ವೈರಲ್​ ಆಗಿದೆ. ಬಿವೈರಲ್​ ಎನ್ನುವ ಯುಟ್ಯೂಬ್​ ಪುಟ ಈ ವಿಡಿಯೂವನ್ನು ಹಂಚಿಕೊಂಡಿದೆ.  ಮಲಗಿದ್ದ ಪುಟ್ಟ ಮಗುವನ್ನು ಏಳಿಸಲು ನಾಯಿ ಮಾಡುವ ಚೇಷ್ಟೆಯ ಸಾಹಸಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

Viral Video: ಮಲಗಿದ್ದ ಪುಟ್ಟ ಬಾಲಕಿಯನ್ನು ಏಳಿಸಲು ನಾಯಿ ಮಾಡಿದ ಚೇಷ್ಟೆಗಳನ್ನು ನೋಡಿ
ಬಾಲಕಿಯನ್ನು ಏಳಿಸುತ್ತಿರುವ ಶ್ವಾನ
Updated By: Pavitra Bhat Jigalemane

Updated on: Jan 14, 2022 | 3:29 PM

ಮನುಷ್ಯನ ಉತ್ತಮ ಸ್ನೇಹಿತ ಎಂದರೆ ನಾಯಿಗಳು. ಅವುಗಳ ಸ್ನೇಹ ಎಂದಿಗೂ ಮೋಸಹೋಗದು. ಶ್ವಾನಗಳು ಒಂದು ಬಾರಿ ಸ್ನೇಹ ಬೆಳೆಸಿದರೆ ಮತ್ತೆ ಹಿಂದೆ ಹೋಗುವ ಮಾತೇ ಇಲ್ಲ. ಚಿಕ್ಕ ಮಕ್ಕಳಿರಲಿ ಅಥವಾ ವಯಸ್ಕರೇ ಇರಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತವೆ. ಹೀಗಾಗಿ ಶ್ವಾನಗಳ ನಿಷ್ಕಲ್ಮಶ ಪ್ರೀತಿ, ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಲ್ಲೊಂದು ಶ್ವಾನ ಹಾಗೂ ಪುಟ್ಟ ಮಗುವಿನ ಸ್ನೇಹದ ವಿಡಿಯೋ ವೈರಲ್​ ಆಗಿದೆ. ಬಿವೈರಲ್​ ಎನ್ನುವ ಯುಟ್ಯೂಬ್​ ಪುಟ ಈ ವಿಡಿಯೂವನ್ನು ಹಂಚಿಕೊಂಡಿದೆ.  ಮಲಗಿದ್ದ ಪುಟ್ಟ ಮಗುವನ್ನು ಏಳಿಸಲು ನಾಯಿ ಮಾಡುವ ಚೇಷ್ಟೆಯ ಸಾಹಸಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಚಿಕ್ಕ ಮಕ್ಕಳೊಂದಿಗೆ ಆಟವಾಡುವಾಗ ನಾಯಿಗಳೂ ಕೂಡ ಮಕ್ಕಳಂತೆ ಚೇಷ್ಟೆ ಮಾಡುತ್ತವೆ ವಿಡಿಯೋ ಈ ವರೆಗೆ 60 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು  2 ಸಾವಿರಕ್ಕೂ ಅಧಿಕ ಲೈಕ್ಸ್​ ಪಡೆದಿದೆ.  ವಿಡಿಯೋ ಆರಂಭವಾಗುತ್ತಿದ್ದಂತೆ ಪುಟ್ಟ ಬಾಲಕಿಯೊಬ್ಬಳು ಹಾಸಿಗೆಯಲ್ಲಿ ಮಲಗಿದ್ದು, ಪಕ್ಕದಲ್ಲೇ ಶ್ವಾನವು ಕುಳಿತಿರುವುದನ್ನು ಕಾಣಬಹುದು. ನಂತರ ನಾಯಿಯು ತನ್ನ ಬಾಯಿಯ ಮೂಲಕ ಬಾಲಕಿಯನ್ನು ಏಳಿಸಲು ಪ್ರಯತ್ನಿಸುತ್ತದೆ. ಎಷ್ಟು ಯತ್ನಿಸಿದರೂ ಮೇಲೆಳದ ಮಗುವನ್ನು ನೋಡಿ ನಾಯಿ ಒಮ್ಮೆ ಸುಮ್ಮನಾಗುತ್ತದೆ. ನಂತರ ಮಲಗಿದಂತೆ ನಟಿಸುತ್ತಿದ್ದ ಬಾಲಕಿಯನ್ನು ತನ್ನಡೆಗೆ ಸೆಳೆದುಕೊಳ್ಳಲು ಹಲವು ಚೇಷ್ಟೆಗಳನ್ನು ಮಾಡುತ್ತದೆ.

ಈ ವಿಡಿಯೋ ಈಗ ನೆಟ್ಟಿಗರ ಮನ ಗೆದ್ದಿದೆ. ಮನುಷ್ಯ ಮತ್ತು ನಾಯಿಗಳ ನಡುವಿನ ಬಾಂಧವ್ಯ ನಿಜಕ್ಕೂ ಅಚ್ಚರಿ ಎಂದು ಬಳಕೆದಾರರು ಕಾಮೆಂಟ್​ ಮಾಡಿದ್ದಾರೆ. ತನ್ನದೇ ರೀತಯಲ್ಲಿ ಮಲಗಿದ್ದ ಮಗುವಿನ ಮೇಲೆ ಅಕ್ಕರೆಯ ಪ್ರೀತಿ ತೋರಿಸುವ ಶ್ವಾನವನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಇನ್ಸ್ಟಾಗ್ರಾಮ್​ನಲ್ಲಿ 300 ಮಿಲಿಯನ್​ ಫಾಲೋವರ್ಸ್​ ಪಡೆದ ಮೊದಲ ಮಹಿಳೆ ಎನಿಸಿಕೊಂಡ ಕೈಲಿ ಜೆನ್ನರ್

Published On - 3:26 pm, Fri, 14 January 22