ಇನ್ಸ್ಟಾಗ್ರಾಮ್​ನಲ್ಲಿ 300 ಮಿಲಿಯನ್​ ಫಾಲೋವರ್ಸ್​ ಪಡೆದ ಮೊದಲ ಮಹಿಳೆ ಎನಿಸಿಕೊಂಡ ಕೈಲಿ ಜೆನ್ನರ್

ಅಮೆರಿಕದ ಸೋಷಿಯಲ್​ ಮೀಡಿಯಾ ಸ್ಟಾರ್​ ಹಾಗೂ ಉದ್ಯಮಿ ಕೈಲಿ ಜೆನ್ನರ್ ಇನ್ಸ್ಟಾಗ್ರಾಮ್​ನಲ್ಲಿ 300 ಮಿಲಿಯನ್​ ಫಾಲೋವರ್ಸ್​ ಪಡೆದ  ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ಕೈಲಿ ಕಾಸ್ಮೆಟಿಕ್ಸ್​ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿಯಾದ ಕೈಲಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ.

ಇನ್ಸ್ಟಾಗ್ರಾಮ್​ನಲ್ಲಿ 300 ಮಿಲಿಯನ್​ ಫಾಲೋವರ್ಸ್​ ಪಡೆದ ಮೊದಲ ಮಹಿಳೆ ಎನಿಸಿಕೊಂಡ ಕೈಲಿ ಜೆನ್ನರ್
ಕೈಲಿ ಜೆನ್ನರ್ ​

ಅಮೆರಿಕದ ಸೋಷಿಯಲ್​ ಮೀಡಿಯಾ ಸ್ಟಾರ್​ ಹಾಗೂ ಉದ್ಯಮಿ ಕೈಲಿ ಜೆನ್ನರ್ ​ ಇನ್ಸ್ಟಾಗ್ರಾಮ್​ನಲ್ಲಿ 300 ಮಿಲಿಯನ್​ ಫಾಲೋವರ್ಸ್​ ಪಡೆದ  ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ಕೈಲಿ ಕಾಸ್ಮೆಟಿಕ್ಸ್​ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿಯಾದ ಕೈಲಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕೈಲಿ ಇತ್ತೀಚೆಗೆ ಗರ್ಭಿಣಿಯಾಗಿರುವ ಬಗ್ಗೆ ಫೋಟೋವನ್ನು ಇತ್ತೀಚೆಗೆ ಹಂಚಿಕೊಂಡಿದ್ದರು. ಕೈಲಿ 300 ಮಿಲಿಯನ್​ ಫಾಲೋವರ್ಸ್​ ಹೊಂದಿದ ಮಹಿಳೆಯಾಗುವ ಮೂಲಕ ಈ ವರೆಗೆ ಮೊದಲ ಸ್ಥಾನದಲ್ಲಿದ್ದ ಪಾಪ್​ ತಾರೆ ಅರಿಯಾನಾ ಗ್ರಾಂಡ್​ ಅವರನ್ನು ಹಿಂದಿಕ್ಕಿದ್ದಾರೆ.

24 ವರ್ಷದ ಉದ್ಯಮಿ ಹಾಗೂ ಸಾಮಾಜಿಕ ಜಾಲತಾಣಗಳ ತಾರೆ  ಕೈಲಿ ಫೋಟೊ ಮತ್ತು ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಅತಿ ಹೆಚ್ಚು ಜನರನ್ನು ತಲುಪಿದ ಮೊದಲ ಮಹಿಳೆ ಎನಿಸಿಕೊಂಡರೆ, ಪುಟ್ಬಾಲ್​​ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ 389 ಮಿಲಿಯನ್​ ಫಾಲೋವರ್ಸ್​ ಹೊಂದುವ ಮೂಲಕ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಪುರುಷ ಎನಿಸಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಕೈಲಿ ಅವರ ಸಂಗಾತಿ ಪಾಪ್​ ತಾರೆ ಟ್ರಾವಿಸ್​ ಸ್ಕಾಟ್​ ಅವರ ಸಂಗೀತ ಪ್ರದರ್ಶನದಲ್ಲಿ ಗಲಭೆ ಸಂಭವಿಸಿ ಕಾಲ್ತುಳಿತದಿಂದ ಹಲವಾರು ಮಂದಿ ಸಾವನ್ನಪ್ಪಿದ್ದರು. ಇದರಿಂದ ಬೇಸರಗೊಂಡ ಕೈಲಿ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದರು. ಆದರೆ ಕೆಲವು ದಿನಗಳ ಹಿಂದೆ ಎರಡನೇ ಮಗುವಿಗೆ ತಾಯಿಯಾಗುತ್ತಿರುವ ವಿಚಾರವನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಸಾಮಾಜಿಕ ಜಾಲತಾಣಗಳತ್ತ ಮುಖ ಮಾಡಿದ್ದರು. ಇದೀಗ ಗುರುವಾರ (ಜ.13) ಇನ್ಸ್ಟಾಗ್ರಾಮ್  ಕೈಲಿ ಜೆನ್ನರ್ ಅವರನ್ನು ಅಧಿಕೃತವಾಗಿ 300 ಮಿಲಿಯನ್​ನ ಫಾಲೋವರ್ಸ್​ ಹೊಂದಿರುವ ಮೊದಲ ಮಹಿಳೆ ಎಂದು ಘೋಷಿಸಿದೆ.

2010ರಲ್ಲಿ ಕೆವಿಲ್​ ಸಿಸ್ಟ್ರೋಮ್​ ಹಾಗೂ ಮೈಕ್​ ಕ್ರಿಗರ್​ ಸ್ಥಾಪಿಸಿದ ಇನ್ಸ್ಟಾಗ್ರಾಮ್​ ಅನ್ನು 2012ರಲ್ಲಿ ಸೋಷಿಯಲ್​ ಮೀಡಿಯಾ ದೈತ್ಯ 1 ಬಿಲಿಯನ್​ ಡಾಲರ್​ಗೆ ಖರೀದಿಸಿತ್ತು. ಈಗ ಇನ್ಸ್ಟಾಗ್ರಾಮ್​ ಅನ್ನು ವಿಶ್ವದಾದ್ಯಂತ 1.3 ಶತಕೋಟಿ ಬಳಕೆದಾರರು ಬಳಸುತ್ತಿದ್ದು, 500 ಮಿಲಿಯನ್​ ಜನರ ಪ್ರತಿದಿನ ಅಪ್ಲಿಕೇಷನ್​ಅನ್ನು ಬಳಸುತ್ತಾರೆ ಎಂದು ಬಿಬಿಸಿ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ:

ಹಿಮದ ರಾಶಿಯ ನಡುವೆ ವಾಲಿಬಾಲ್​ ಆಡಿದ ಭಾರತೀಯ ಯೋಧರು: ವಿಡಿಯೋ ವೈರಲ್​

Click on your DTH Provider to Add TV9 Kannada