ಸಾಮಾನ್ಯವಾಗಿ ನಾಯಿ ಮೇಲೆ ಚಿರತೆ ದಾಳಿ, ನಾಯಿಯನ್ನು ಹೊತ್ತೊಯ್ದ ಚಿರತೆ ಎಂಬ ಸುದ್ದಿಗಳನ್ನು ಕೇಳಿರುತ್ತೀರಿ. ಆದರೆ ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಇಲ್ಲಿ ಚಿರತೆಯೊಂದನ್ನು ನಾಯಿಗಳ ಗುಂಪು ಬೇಟೆಯಾಡಿ ಕೊಂದಿದೆ. ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಐದಾರು ನಾಯಿಗಳು ಚಿರತೆಯನ್ನು ಸುತ್ತುವರಿದು ದಾಳಿ ಮಾಡಿರುವ ಪರಿಣಾಮ ಚಿರತೆಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಅಲ್ಲೇ ಪ್ರಾಣಬಿಟ್ಟಿದೆ.
@TheBrutalNature ಎಂಬ ಟ್ವಿಟರ್ ಖಾತೆಯಲ್ಲಿ ಈ ಚಿರತೆ ಮೇಲೆ ನಾಯಿಗಳ ದಾಳಿಯ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ. ಆಗಸ್ಟ್ 27ರಂದು ಹಂಚಿಕೊಂಡಿರುವ ಈ ವಿಡಿಯೋ ಕೇವಲ ಮೂರು ದಿನಗಳಲ್ಲಿ 5.7 ಮಿಲಿಯನ್ ಅಂದರೆ 50ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
— NATURE IS BRUTAL (@TheBrutalNature) August 27, 2024
ಇದನ್ನೂ ಓದಿ: ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಹೆಡ್ ಕಾನ್ ಸ್ಟೇಬಲ್ ಸಾವು
ವೈರಲ್ ಆಗಿರುವ ವಿಡಿಯೋದಲ್ಲಿ ನಾಯಿಗಳ ಗುಂಪು ಚಿರತೆಯನ್ನು ಸುತ್ತುವರೆದು ದಾಳಿ ಮಾಡುತ್ತಿರುವುದನ್ನು ಕಾಣಬಹುದು. ಇದನ್ನೂ ದೂರದಲ್ಲಿ ನಿಂತು ಜನರು ವಿಡಿಯೋ ಮಾಡಿದ್ದಾರೆ. ಒಂದು ಚಿರತೆಯನ್ನು ಐದಾರು ನಾಯಿಗಳು ಕಚ್ಚಿ ಎಳೆದಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಆಘಾತಕಾರಿ ವಿಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ