ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಬದುಕುಳಿಯಿತು ಕಾಡಾನೆ ಜೀವ: ನೆಟ್ಟಿಗರಿಂದ ಎಲ್ಲೆಡೆ ಶ್ಲಾಘನೆ

| Updated By: ಗಂಗಾಧರ​ ಬ. ಸಾಬೋಜಿ

Updated on: May 14, 2022 | 2:19 PM

ಬುಧವಾರ ಸಂಜೆ 5:35ಕ್ಕೆ ಗುಲ್ಮಾ ಮತ್ತು ಸಿವೋಕ್ ನಡುವೆ ಈ ಘಟನೆ ನಡೆದಿದೆ. ರೈಲು ಅಷ್ಟು ದೂರದಲ್ಲಿಲ್ಲದಿದ್ದಾಗ ಆನೆಯೊಂದು ರೈಲ್ವೇ ಹಳಿಗಳ ಸಮೀಪ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಬದುಕುಳಿಯಿತು ಕಾಡಾನೆ ಜೀವ: ನೆಟ್ಟಿಗರಿಂದ ಎಲ್ಲೆಡೆ ಶ್ಲಾಘನೆ
ರೈಲ್ವೆ ಹಳಿ ದಾಟ್ಟುತ್ತಿರುವ ಕಾಡಾನೆ
Image Credit source: indianexpress.com
Follow us on

ಬಂಗಾಳ: ರೈಲು ಚಾಲಕನ ಕ್ಷಿಪ್ರ ಆಲೋಚನೆ ಮತ್ತು ಸಮಯ ಪ್ರಜ್ಞೆಯಿಂದ ರೈಲು ಹಳಿ ಮೇಲೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಕಾಡಾನೆಯೊಂದು ಪ್ರಾಣ ಉಳಿದಿದೆ. ಆನೆ ರೈಲು ಹಳಿ ದಾಟಲು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ನಿಧಾನಗತಿಯಲ್ಲಿ ಸಾಗುತ್ತಿರುವ ವಿಡಿಯೋ ಇದೀಗ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈಶಾನ್ಯ ಫ್ರಾಂಟಿಯರ್ ರೈಲ್ವೇಯ ಅಲಿಪುರ್ದೂರ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (DRM) ಹಂಚಿಕೊಂಡ ವಿಡಿಯೋದಲ್ಲಿ ಕಾಡು ಆನೆಯೊಂದು ರೈಲ್ವೆ ಹಳಿಯನ್ನು ದಾಟುತ್ತಿರುವುದನ್ನು ಕಾಣಬಹುದಾಗಿದೆ. ಸಿಲಿಗುರಿ ಜಂಕ್ಷನ್‌ನಿಂದ ಅಲಿಪುರ್ ದುವಾರ್‌ಗೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲನ್ನು ಲೊಕೊ ಪೈಲಟ್ ಆರ್‌ಆರ್ ಕುಮಾರ್ ಮತ್ತು ಸಹಾಯಕ ಲೊಕೊ ಪೈಲಟ್ ಎಸ್ ಕುಂದು ನಿರ್ವಹಿಸಿದ್ದಾರೆ ಎಂದು ಡಿಆರ್‌ಎಂ ಗಮನಿಸಿದರು. ಬುಧವಾರ ಸಂಜೆ 5:35ಕ್ಕೆ ಗುಲ್ಮಾ ಮತ್ತು ಸಿವೋಕ್ ನಡುವೆ ಈ ಘಟನೆ ನಡೆದಿದೆ. ರೈಲು ಅಷ್ಟು ದೂರದಲ್ಲಿಲ್ಲದಿದ್ದಾಗ ಆನೆಯೊಂದು ರೈಲ್ವೇ ಹಳಿಗಳ ಸಮೀಪ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವೇಳೆ ಎಚ್ಚೆತ್ತ ಲೋಕೋ ಪೈಲಟ್‌ಗಳಾದ ಆರ್.ಆರ್.ಕುಮಾರ್ ಮತ್ತು ಎಸ್.ಕುಂದು ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕುವ ಮೂಲಕ ಆನೆಯನ್ನು ರಕ್ಷಿಸಿದ್ದಾರೆ.

ವಿಡಿಯೋ ಅಪ್‌ಲೋಡ್ ಮಾಡಿದ ನಂತರ, 500 ಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಕಾಡುಗಳನ್ನು ದಾಟುವಾಗ ರೈಲುಗಳು ಕಡಿಮೆ ವೇಗದಲ್ಲಿ ಚಲಿಸಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇವರ ಶ್ಲಾಘನೀಯ ಕೆಲಸಕ್ಕಾಗಿ ಲೋಕೋ ಪೈಲಟ್‌ಗಳನ್ನು ಶ್ಲಾಘಿಸುವುದನ್ನು ಕಾಣಬಹುದು. ಒಬ್ಬ ವ್ಯಕ್ತಿ ಅವರಿಗೆ ಬಹುಮಾನ ನೀಡಬೇಕು ಎಂದು ಸಲಹೆ ಕೂಡ ನೀಡಿದ್ದಾರೆ.

ಇದಕ್ಕೂ ಮುನ್ನ ಮತ್ತೊಂದು ಆನೆ ವಿಡಿಯೋ ನೆಟ್ಟಿಗರಿಂದ ಸಾಕಷ್ಟು ಗಮನ ಸೆಳೆದಿತ್ತು. ಮರಿ ಆನೆಯೊಂದು ಜಲಾಶಯದಲ್ಲಿ ಬಿದ್ದ ನಂತರ ಅದರ ರಕ್ಷಣಾ ಕಾರ್ಯಾಚರಣೆಯ ಸಂಪೂರ್ಣ ವಿಡಿಯೋ ಚಿತ್ರಿಸಲಾಗಿತ್ತು. ಆನೆ ಮರಿಯ ಸ್ಥಳಾಂತರದ ದೃಶ್ಯಗಳನ್ನು ಮೈಕ್ರೊ ಬ್ಲಾಗಿಂಗ್ ಸೈಟ್‌ನಲ್ಲಿ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಪೋಸ್ಟ್ ಮಾಡಿದ್ದಾರೆ, ಅವರು ಘಟನೆಯ ವಿವರಗಳನ್ನು ವಿವರಿಸಿದ್ದರು. ಮೂರ್ನಾಲ್ಕು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಅರಣ್ಯಾಧಿಕಾರಿಗಳು ಜಲಾಶಯದ ಗೋಡೆಗಳನ್ನು ಭಾಗಶಃ ಒಡೆದು ಆನೆ ಮರಿ ಹೊರ ಬರುವಂತೆ ಮಾಡಿದ್ದಾರೆ. ನಂತರ ಅಧಿಕಾರಿಗಳು ಸುರಕ್ಷಿತವಾಗಿ ಆನೆಯನ್ನು ಸ್ಥಳಾಂತರಿಸಿ ಅದರ ಕುಟುಂಬದೊಂದಿಗೆ ಸೇರಿಸಿದರು.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:04 pm, Sat, 14 May 22