Viral Video: ಮದುವೆಯಲ್ಲಿ ಮಹಿಳೆ ಜೊತೆ ಡ್ಯಾನ್ಸ್ ಮಾಡಬೇಕೆಂದು ಹೊಡೆದಾಡಿಕೊಂಡ ಪುರುಷರು; ತಮಾಷೆಯ ವಿಡಿಯೋ ಇಲ್ಲಿದೆ
ನಿಜ ಜೀವನದ ಮದುವೆಗಳಲ್ಲಿ ಕೆಲವೊಮ್ಮೆ ಹೊಡೆದಾಟವೂ ನಡೆಯುತ್ತದೆ. ಎಂತಹ ವಿಷಯಗಳಿಗೆ ಜಗಳಗಳು ನಡೆಯುತ್ತವೆ ಎಂಬುದನ್ನು ಯಾರೂ ಊಹಿಸಲೂ ಸಾಧ್ಯವಿಲ್ಲ. ಅಂತಹ ವೈರಲ್ ವೀಡಿಯೊವೊಂದು ಇಲ್ಲಿದೆ.
ಮದುವೆ ಮನೆಯಲ್ಲಿ ಮಹಿಳೆಯೊಬ್ಬರ ಜೊತೆ ಡ್ಯಾನ್ಸ್ (Dance Video) ಮಾಡಬೇಕೆಂದು ಅಲ್ಲಿದ್ದ ಜನರು ವೇದಿಕೆಯಲ್ಲೇ ಜಗಳವಾಡುತ್ತಿರುವ, ಹೊಡೆದಾಡಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಂದಿಗೆ ನೃತ್ಯ ಮಾಡಲು ಜನರು ಡ್ಯಾನ್ಸ್ ಫ್ಲೋರ್‌ನಲ್ಲಿ ಪರಸ್ಪರ ಜಗಳವಾಡಲು ಪ್ರಾರಂಭಿಸುತ್ತಾರೆ. ಅಷ್ಟೇ ಅಲ್ಲ ಒಬ್ಬರಿಗೊಬ್ಬರು ಒದ್ದು, ಗುದ್ದಾಡುತ್ತಾರೆ.
ಬಾಲಿವುಡ್ ಸಿನಿಮಾಗಳಲ್ಲಿ ಮದುವೆಗಳನ್ನು ಬಹಳ ಕಾಲ್ಪನಿಕ ಕಥೆಯಂತೆ ತೋರಿಸಲಾಗುತ್ತದೆ. ಸಿನಿಮಾಗಳಲ್ಲಿ ತೋರಿಸುವ ಮದುವೆಗಳನ್ನು ನೋಡಿದ ನಂತರ ನಿಮಗೂ ಅದೇ ರೀತಿ ಮದುವೆಯಾಗಬೇಕು ಅನಿಸುತ್ತದೆ. ಆದರೆ, ನಿಜ ಜೀವನದಲ್ಲಿ ಅಂತಹ ಮದುವೆಗಳು ನಡೆಯುವುದು ವಿರಳ. ಆದರೂ ನಿಜ ಜೀವನದ ಮದುವೆಯ ಕೆಲವು ವೀಡಿಯೋಗಳನ್ನು ನೀವು ನೋಡಿದರೆ, ಮದುವೆ ಮತ್ತು ಅದರಲ್ಲಿನ ಎಲ್ಲಾ ವಿಧಿವಿಧಾನಗಳನ್ನು ನೋಡಿ ನೀವು ಖಂಡಿತವಾಗಿಯೂ ಬೆಚ್ಚಿ ಬೀಳುತ್ತೀರಿ. ನಿಜ ಜೀವನದ ಮದುವೆಗಳಲ್ಲಿ ಕೆಲವೊಮ್ಮೆ ಹೊಡೆದಾಟವೂ ನಡೆಯುತ್ತದೆ. ಎಂತಹ ವಿಷಯಗಳಿಗೆ ಜಗಳಗಳು ನಡೆಯುತ್ತವೆ ಎಂಬುದನ್ನು ಯಾರೂ ಊಹಿಸಲೂ ಸಾಧ್ಯವಿಲ್ಲ. ಅಂತಹ ವೈರಲ್ ವೀಡಿಯೊವೊಂದು ಇಲ್ಲಿದೆ.
ಈ ವಿಡಿಯೋ ನೋಡಿದರೆ ನೀವು ಹೊಟ್ಟೆ ಹುಣ್ಣಾಗುವಂತೆ ನಗುವುದು ಗ್ಯಾರಂಟಿ. ಯೂಟ್ಯೂಬ್ನಲ್ಲಿ ಈ ವೀಡಿಯೊವನ್ನು ದೀಪ್ ಕುಮಾರ್ ಅವರ ಚಾನಲ್‌ನಿಂದ ಹಂಚಿಕೊಳ್ಳಲಾಗಿದೆ. ಈ ವಿಡಿಯೊದಲ್ಲಿ ಬ್ಯಾಕ್ ಟು ಬ್ಯಾಕ್ ಹಾಡುಗಳು ಪ್ಲೇ ಆಗುತ್ತಿರುವುದನ್ನು ನೀವು ನೋಡಬಹುದು. ಅದರ ಜೊತೆಗೆ ಜನರು ಡ್ಯಾನ್ಸ್ ಫ್ಲೋರ್‌ನಲ್ಲಿ ಖುಷಿಯಿಂದ ನೃತ್ಯ ಮಾಡುತ್ತಿದ್ದಾರೆ. ಪವನ್ ಸಿಂಗ್ ಅವರ ಪ್ರಸಿದ್ಧ ಹಾಡು ‘ಲಗವೇಲು ಜಬ್ ಲಿಪಿಸ್ಟಿಕ್’ ಕೂಡ ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದೆ. ಈ ಹಾಡಿಗೆ ಡ್ಯಾನ್ಸ್ ಮಾಡುತ್ತಾ ಜನರು ಮೋಜಿನಲ್ಲಿ ತೂಗಾಡುತ್ತಿದ್ದಾರೆ.
ನಂತರ ಮುಂದಿನ ಹಾಡಿನಲ್ಲಿ ಒಬ್ಬಳು ಮಹಿಳೆ ವೇದಿಕೆಗೆ ನೃತ್ಯ ಮಾಡಲು ಬರುತ್ತಾರೆ. ಅವರೊಂದಿಗೆ ಜನರು ನೃತ್ಯ ಮಾಡಲು ಪರಸ್ಪರ ಜಗಳವಾಡುತ್ತಾರೆ. ನೆಲದ ಮೇಲೆಯೇ ಇಬ್ಬರು ಒಬ್ಬರಿಗೊಬ್ಬರು ಒದೆಯಲು ಮತ್ತು ಗುದ್ದಲು ಪ್ರಾರಂಭಿಸುತ್ತಾರೆ. ಈ ವಿಡಿಯೋವನ್ನು 21 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಬಗ್ಗೆ ಜನರು ತಮ್ಮದೇ ಆದ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. “ನನ್ನ ಮದುವೆಗೆ ಈ ಡಿಜೆ ಬೇಕು”, “ಅಂತೂ ಮದುವೆ ಸಂಪನ್ನವಾಯಿತು” ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ