Viral Video: ಮದ್ಯದ ನಶೆಯಲ್ಲಿ ವಧುವಿನ ಬದಲು ಬೇರೊಬ್ಬಳಿಗೆ ಹಾರ ಹಾಕಿದ ವರ; ಮುಂದೇನಾಯಿತು ಗೊತ್ತಾ?

ಮಹಿಳೆಯೊಬ್ಬಳು ವರನಿಗೆ ಕಪಾಳಮೋಕ್ಷ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಬದಿಯಲ್ಲೇ ವಧು ನಿಂತಿದ್ದು, ಮದ್ಯದ ನಶೆಯಲ್ಲಿ ವರ ತೂರಾಡುತ್ತಿದ್ದು,ವಧುವಿನ ಬದಲು ಬೇರೊಬ್ಬಳಿಗೆ ಹಾರ ಹಾಕಿದ ಪರಿಣಾಮ ವರನಿಗೆ ಬೈದು ಕಪಾಳಮೋಕ್ಷ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Viral Video: ಮದ್ಯದ ನಶೆಯಲ್ಲಿ ವಧುವಿನ ಬದಲು ಬೇರೊಬ್ಬಳಿಗೆ ಹಾರ ಹಾಕಿದ ವರ; ಮುಂದೇನಾಯಿತು ಗೊತ್ತಾ?
Drunk Groom
Image Credit source: Twitter

Updated on: Dec 27, 2023 | 3:11 PM

ಸಾಮಾಜಿಕ ಜಾಲತಾಣಗಳಲ್ಲಿ ಮದುವೆಗೆ ಸಂಬಂಧಿಸಿದ ಹಲವು ವಿಡಿಯೋಗಳು ಹರಿದಾಡುತ್ತಿರುತ್ತವೆ. ಕೆಲವೊಮ್ಮೆ ವಧು-ವರರು ಸಂತೋಷದಿಂದ ನೃತ್ಯ ಮಾಡುತ್ತಿರುವುದು ಕಂಡುಬಂದರೆ, ಕೆಲವೊಮ್ಮೆ ಮದುವೆಯ ಹಾಸ್ಯಸ್ಪದ ವಿಡಿಯೋಗಳು ಕೂಡ ಹರಿದಾಡುತ್ತಿರುತ್ತವೆ. ಇದೀಗಾ ಮದುವೆಯ ಮತ್ತೊಂದು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಮದ್ಯದ ನಶೆಯಲ್ಲಿರುವ ವರನೊಬ್ಬ ತನ್ನ ಬಾಳಸಂಗಾತಿಯಾಗಬೇಕಿದ್ದ ವಧುವಿನ ಬದಲಿಗೆ ಬೇರೊಬ್ಬಳಿಗೆ ಹಾರ ಹಾಕಿದ್ದಾನೆ. ಮದುವೆ ಮಂಟಪದಲ್ಲಿ ಮುಂದೆ ಆಗಿದ್ದೇ ಬೇರೆ. ಸದ್ಯ ಈ ವಿಡಿಯೋ ಎರಡೇ ದಿನದಲ್ಲಿ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ವರನಿಗೆ ಕಪಾಳಮೋಕ್ಷ ಮಾಡುತ್ತಿರುವುದನ್ನು ಕಾಣಬಹುದು. ಬದಿಯಲ್ಲೇ ವಧು ನಿಂತಿರುವುದನ್ನು ಕಾಣಬಹುದು. ಮದ್ಯದ ನಶೆಯಲ್ಲಿ ವರ ತೂರಾಡುತ್ತಿದ್ದು,ವಧುವಿನ ಬದಲು ಬೇರೊಬ್ಬಳಿಗೆ ಹಾರ ಹಾಕಿದ ಪರಿಣಾಮ ವರನಿಗೆ ಬೈದು ಕಪಾಳಮೋಕ್ಷ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲ ಹೊತ್ತಿನ ಬಳಿಕ ವರ “ನನಗೆ ನನ್ನ ಸ್ನೇಹಿತರು ಪೆಪ್ಸಿ ಎಂದು ಮದ್ಯ ನೀಡಿದ್ದರು. ಆದ್ದರಿಂದ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತಿದ್ದೇನೆ” ಎಂದು ಹೇಳುತ್ತಿರುವುದನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: 20 ಲಕ್ಷ ಖರ್ಚು ಮಾಡಿ ಪ್ರತೀ ಕ್ರಿಸ್‌ಮಸ್‌ಗೆ ತುಟಿಯ ಗಾತ್ರ ಹೆಚ್ಚಿಸಿಕೊಳ್ಳುತ್ತಿದ್ದಾಳೆ ಈ ಮಹಿಳೆ; ತುಟಿಯ ಆಕಾರ ಹೇಗಾಗಿದೆ ನೋಡಿ

ಈ ವಿಡಿಯೋವನ್ನು ಡಿಸೆಂಬರ್​​​ 25ರಂದು @HasnaZaruriHai ಎಂಬ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ಹಂಚಿಕೊಂಡ ಕೇವಲ ಎರಡೇ ದಿನಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ಜೊತೆಗೆ ‘ಸ್ನೇಹಿತರು ನೀಡುವ ಪೆಪ್ಸಿ ಆರೋಗ್ಯಕ್ಕೆ ಅಪಾಯಕಾರಿ’ ಎಂದು ವಿಡಿಯೋಗೆ ಕ್ಯಾಪ್ಷನ್​​ ಬರೆಯಲಾಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: