Viral Video: ಚಿಂತೆಗಳನ್ನೆಲ್ಲಾ ಬದಿಗಿಟ್ಟು ಟ್ರಾಫಿಕ್ ಮಧ್ಯೆ  ಹಾಡು ಕೇಳುತ್ತಾ ಎಂಜಾಯ್ ಮಾಡಿದ ಆಟೋ ಚಾಲಕ

ನಾವೇನಾದರೂ ಟ್ರಾಫಿಕ್ ಮಧ್ಯೆ ಸಿಳುಕಿಹಾಕಿಕೊಂಡರೆ, ಅಯ್ಯೋ ದೇವ್ರೆ ಈ ಟ್ರಾಫಿಕ್ ಇನ್ನು ಎಷ್ಟು ಹೊತ್ತು ಇರುತ್ತೋ,   ನನ್ಗೆ ಬೇಗ ಮನೆಗೆ ಹೋಗ್ಬೇಕು, ಆಫೀಸಿಗೆ ಹೋಗ್ಬೇಕು ಅಂತೆಲ್ಲಾ ಟೆನ್ಶನ್ ಮಾಡಿಕೊಳ್ಳುತ್ತೇವೆ. ಆದ್ರೆ ಇಲ್ಲೊಂದು ಆಟೋ ಚಾಲಕರೊಬ್ಬರು ಈ ಟ್ರಾಫಿಕ್ ಟೆನ್ಶನ್ ಯಾವಾಗಲೂ ಇದ್ದಿದ್ದೇ ಎನ್ನುತ್ತಾ, ಆ ಟೆನ್ಶನ್ ಎಲ್ಲಾ ಬದಿಗಿಟ್ಟು ʼಐ ಹಾವ್ ಡೈ ಎವ್ರಿ ಡೇ, ವೈಟಿಂಗ್ ಫಾರ್ ಯುʼ ಎಂಬ ಸುಪ್ರಸಿದ್ಧ ಹಾಡನ್ನು ಆಲಿಸುತ್ತಾ, ಆ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. 

Viral Video: ಚಿಂತೆಗಳನ್ನೆಲ್ಲಾ ಬದಿಗಿಟ್ಟು ಟ್ರಾಫಿಕ್ ಮಧ್ಯೆ  ಹಾಡು ಕೇಳುತ್ತಾ ಎಂಜಾಯ್ ಮಾಡಿದ ಆಟೋ ಚಾಲಕ
ವೈರಲ್​​ ವಿಡಿಯೋ ಇಲ್ಲಿದೆ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 27, 2023 | 5:59 PM

ಪ್ರತಿನಿತ್ಯ ಸಂಗೀತವನ್ನು ಕೇಳುವುದು ಮಾನಸಿಕ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ. ಸಂಗೀತ ಸ್ಟ್ರೆಸ್ ಬಸ್ಟರ್ ಆಗಿದ್ದು, ಇದು ನಮ್ಮ ಒತ್ತಡವನ್ನು ನಿವಾರಿಸುವುದರ ಜೊತೆಗೆ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ. ಇದು ನಿಜನೇ ಅಲ್ವಾ. ನಾವು ಬೇಜಾರಾದಾಗ ಅಥವಾ ಯಾವುದೋ ಟೆನ್ಶನ್ ಅಲ್ಲಿ ಇದ್ದಾಗ, ಸಂಗೀತವನ್ನು ಆಲಿಸಿದ್ರೆ, ಮನದಲ್ಲಿರುವ ನೋವು, ಒತ್ತಡಗಳೆಲ್ಲಾ ಮಾಯವಾಗಿ, ಹಾಡನ್ನು ಕೇಳುತ್ತಾ, ಸಂತೋಷವಾಗಿರುತ್ತೇವೆ. ಇದಕ್ಕೆ  ಸೂಕ್ತ ಉದಾಹರಣೆಯೆಂಬಂತೆ ಇಲ್ಲೊಂದು ವಿಡಿಯೋ ಹರಿದಾಡುತ್ತಿದ್ದು, ಟ್ರಾಫಿಕ್ ಮಧ್ಯೆ ಸಿಳುಕಿಕೊಂಡಂತಹ ಆಟೋ ಚಾಲಕರೊಬ್ಬರು, ಈ ಟ್ರಾಫಿಕ್ ಯಾವಾಗಲೂ ಇದ್ದಿದ್ದೆ, ಈ   ಚಿಂತೆಯನ್ನೆಲ್ಲಾ ಬದಿಗಿಟ್ಟು, ಹಾಡನ್ನು ಕೇಳುತ್ತಾ ಟೈ ಪಾಸ್ ಮಾಡಿದ್ರೆ ಆಯ್ತಪ್ಪಾ ಎನ್ನುತ್ತಾ ಅಮೇರಿಕಾದ ಸುಪ್ರಸಿದ್ಧ ಗಾಯಕಿ ಕ್ರಿಸ್ಟಿನಾ ಪೆರ್ರಿ ಹಾಡಿರುವ  ʼಐ ಹಾವ್ ಡೈ ಎವ್ರಿ ಡೇ, ವೈಟಿಂಗ್ ಫಾರ್ ಯುʼ ಎಂಬ ಹಾಡನ್ನು ಕೇಳುತ್ತಾ, ಆ ಕ್ಷಣವನ್ನು ಆನಂದಿಸಿದ್ದಾರೆ, ಈ ಸೊಗಸಾದ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

ಈ ವಿಡಿಯೋವನ್ನು ನೀರ್ಜಾ ಶಾ (@Neerjargon) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ಪ್ರತಿಯೊಬ್ಬರೂ @christinaperri ಅವರ ಹಾಡನ್ನು ಪ್ರೀತಿಸುತ್ತಾರೆ ಎಂಬುದಕ್ಕೆ ಪುರಾವೆಯಿದು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಟ್ರಾಫಿಕ್ ಅಲ್ಲಿ ಸಿಳುಕಿಕೊಂಡಂತಹ ಆಟೋ ಚಾಲಕ ಕ್ರಿಸ್ಟಿನಾ ಪೆರ್ರಿ ಹಾಡಿರುವು ಸುಪ್ರಸಿದ್ಧ  ಹಾಡೊಂದನ್ನು ಕೇಳುತ್ತಾ ಎಂಜಾಯ್ ಮಾಡುತ್ತಿರುವ  ಸುಂದರ ದೃಶ್ಯವನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ;

ವೈರಲ್ ವಿಡಿಯೋದಲ್ಲಿ ರಾತ್ರಿಯ ವೇಳೆ ಬೆಂಗಳೂರಿನ ಟ್ರಾಫಿಕ್ ಅಲ್ಲಿ ಸಿಳುಕಿಹಾಕಿಕೊಂಡಿದ್ದ ಆಟೋ ಚಾಲಕರೊಬ್ಬರು ಅಮೇರಿಕಾದ ಗಾಯಕಿ ಕ್ರಿಸ್ಟಿನಾ ಪೆರ್ರಿ ಅವರು ಹಾಡಿರುವ ʼಐ ಹಾವ್ ಡೈ ಎವ್ರಿ ಡೇ ವೈಟಿಂಗ್ ಫಾರ್ ಯುʼ ಎಂಬ ಸುಪ್ರಸಿದ್ಧ ಹಾಡನ್ನು ಕೇಳುತ್ತಾ, ಚಿಂತೆಗಳನ್ನೆಲ್ಲಾ ಬದಿಗಿಟ್ಟು ಆ ಕ್ಷಣವನ್ನು ಆನಂದಿಸುತ್ತಿರುವ  ಸುಂದರ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಎಲ್ಲಿದೆ ನೈರ್ಮಲ್ಯ? ಈ ವೈರಲ್ ವಿಡಿಯೋವನ್ನು ನೋಡಿದ್ರೆ ಪಾನಿಪುರಿ ತಿನ್ನೋದೇ ಬೇಡಾ ಅಂತಿರಾ

ಡಿಸೆಂಬರ್ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ 80 ಸಾವಿರಕ್ಕಿಂತಲೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನನ್ನ ಆಲ್ ಟೈಮ್ ಫೆವರೆಟ್ ಸಾಂಗ್ʼ ಎಂದು ಕಮೆಂಟ್ ಮಾಡಿದ್ದಾರೆ.  ಇನ್ನು ಅನೇಕರು ʼಸಂಗೀತವು ಸಂತೋಷದ ಸಾರ್ವತ್ರಿಕ ಭಾಷೆಯಾಗಿದೆʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ