AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಈ ವ್ಯಕ್ತಿ 180ಕ್ಕೂ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ್ದಾನೆ, ಆದ್ರೆ ಇನ್ನೂ ಮದುವೆಯಾಗಿಲ್ಲ

ಬ್ರಿಟನ್‌ನ 51 ವರ್ಷದ ವ್ಯಕ್ತಿಯೊಬ್ಬರು ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಈ ವ್ಯಕ್ತಿಯಿಂದ ಇಲ್ಲಿಯವರೆಗೆ ಸುಮಾರು 200 ಮಹಿಳೆಯರು ಗರ್ಭಧರಿಸಿದ್ದಾರೆ. ಆದರೆ ಈ ವ್ಯಕ್ತಿಗೆ ಮದುವೆಯಾಗಿಲ್ಲ. ನಾನಿನ್ನೂ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Viral : ಈ ವ್ಯಕ್ತಿ 180ಕ್ಕೂ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ್ದಾನೆ, ಆದ್ರೆ ಇನ್ನೂ ಮದುವೆಯಾಗಿಲ್ಲ
A Man Donors Sperm to 180 Women
ಅಕ್ಷತಾ ವರ್ಕಾಡಿ
|

Updated on: Dec 28, 2023 | 1:06 PM

Share

ತಾಯಿಯಾಗುವುದು ಪ್ರತೀ ಮಹಿಳೆಗಿರುವ ಕನಸು. ಆದಾಗ್ಯೂ, ಕೆಲವೊಮ್ಮೆ ಮಹಿಳೆಯರು ಗರ್ಭಧರಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ವೀರ್ಯ ದಾನಿಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ ಅಥವಾ ಗರ್ಭಧಾರಣೆಯ ಇತರ ವೈದ್ಯಕೀಯ ವಿಧಾನಗಳನ್ನು ಬಳಸುತ್ತಾರೆ. ಈರೀತಿಯಾಗಿ ಮಗುವನ್ನು ಪಡೆಯುವುದು ಭಾರತದಲ್ಲೂ ಸಾಮಾನ್ಯವಾಗಿ ಬಿಟ್ಟಿದೆ. ಪ್ರಸ್ತುತ, ಬ್ರಿಟನ್‌ನ 51 ವರ್ಷದ ವ್ಯಕ್ತಿಯೊಬ್ಬರು ತನ್ನ ವೀರ್ಯಾಣು ದಾನದಿಂದಲೇ ಭಾರೀ ಸುದ್ದಿಯಲ್ಲಿದ್ದಾರೆ. ಈ ವ್ಯಕ್ತಿಯ ವೀರ್ಯ ದಾನದಿಂದಾಗಿ ಇಲ್ಲಿಯವರೆಗೆ ಸುಮಾರು 200 ಮಹಿಳೆಯರು ಗರ್ಭಧರಿಸಿದ್ದಾರೆ.

ನ್ಯೂಕ್ಯಾಸಲ್‌ನ ನಿವಾಸಿಯಾಗಿರುವ ಈ 51 ವರ್ಷದ ವೀರ್ಯ ದಾನಿ ಇಲ್ಲಿಯವರೆಗೆ ಮದುವೆಯಾಗಿಲ್ಲಾ, ನಾನಿನ್ನೂ ಏಕಾಂಗಿಯಾಗಿರುವೆ ಎಂದು ಹೇಳಿಕೊಂಡಿದ್ದಾರೆ. ಆದ್ರೆ ಮದುವೆಯಾಗದಿರಲು ಕಾರಣವಿದೆಯಂತೆ, ಪ್ರತೀ ಮಹಿಳೆಗೆ ತನ್ನ ಪತಿ ತನ್ನಿಂದ ಮಾತ್ರ ಮಗು ಪಡೆಯಬೇಕೆಂದು ಹಂಬಲಿಸುತ್ತಾಳೆ. ಆದ್ದರಿಂದ ತನ್ನ ವೀರ್ಯಾ ದಾನದ ಕೆಲಸದಿಂದಾಗಿ ನನ್ನನ್ನು ಮದುವೆಯಾಗಲು ಯಾರು ಒಪ್ಪುತ್ತಿಲ್ಲ ಎಂದು ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ಮದ್ಯದ ನಶೆಯಲ್ಲಿ ವಧುವಿನ ಬದಲು ಬೇರೊಬ್ಬಳಿಗೆ ಹಾರ ಹಾಕಿದ ವರ; ಮುಂದೇನಾಯಿತು ಗೊತ್ತಾ?

ವಿದೇಶದಲ್ಲಿಯೂ ವೀರ್ಯ ದಾನ:

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಕಳೆದ 13 ವರ್ಷಗಳಿಂದ ವೀರ್ಯ ದಾನಿಯಾಗಿ ಕೆಲಸ ಮಾಡುತ್ತಿದ್ದಾರೆ ಈ ವ್ಯಕ್ತಿ. ಅವರ ವೀರ್ಯದಿಂದ 180 ಕ್ಕೂ ಹೆಚ್ಚು ಮಹಿಳೆಯರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಮೆರಿಕದಿಂದ ಅರ್ಜೆಂಟೀನಾ ಮತ್ತು ಸಿಂಗಾಪುರಕ್ಕೆ ತನ್ನ ವೀರ್ಯವನ್ನು ದಾನ ಮಾಡಲು ಎಲ್ಲೆಡೆ ಪ್ರಯಾಣಿಸುವುದಾಗಿ ಹೇಳಿಕೊಂಡಿದ್ದಾನೆ. ಮಹಿಳೆಯರು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಅವರನ್ನು ಸಂಪರ್ಕಿಸುತ್ತಾರೆ. ನಂತರ ಇಬ್ಬರ ನಡುವೆ ಸಂಭಾಷಣೆ ನಡೆಯುತ್ತದೆ ಮತ್ತು ಅನೇಕ ಮಹಿಳೆಯರು ಗರ್ಭಧಾರಣೆಯ ದಿನಾಂಕವನ್ನು ನಿರ್ಧರಿಸುತ್ತಾರೆ ಮತ್ತು ಇದಕ್ಕಾಗಿ ಅವರು AI (ಕೃತಕ ಗರ್ಭಧಾರಣೆ), PI (ಭಾಗಶಃ ಗರ್ಭಧಾರಣೆ) ಅಥವಾ NI (ನೈಸರ್ಗಿಕ ಗರ್ಭಧಾರಣೆ) ಆಯ್ಕೆ ಮಾಡುತ್ತಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: