Viral News: ಚೀನಾದಲ್ಲಿ ನಾಯಿ, ಬೆಕ್ಕುಗಳಿಗೂ ಪ್ಲಾಸ್ಟಿಕ್ ಸರ್ಜರಿ ಮಾಡ್ತಾರೆ!

ಚೀನಾದ ವಿಚಿತ್ರವಾದ ಪ್ರವೃತ್ತಿಯೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಇಲ್ಲಿನ ಜನರು ತಮ್ಮ ಸಾಕು ಪ್ರಾಣಿಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡುವಲ್ಲಿ ನಿರತರಾಗಿದ್ದಾರೆ. ಪ್ರಾಣಿ ಪ್ರೇಮಿಗಳು ಈ ವಿಚಿತ್ರವಾದ ಪ್ರವೃತ್ತಿಯ ವಿರುದ್ಧ ಈಗಾಗಲೇ ಪ್ರತಿಭಟನೆ ಪ್ರಾರಂಭಿಸಿದ್ದಾರೆ.

Viral News: ಚೀನಾದಲ್ಲಿ ನಾಯಿ, ಬೆಕ್ಕುಗಳಿಗೂ ಪ್ಲಾಸ್ಟಿಕ್ ಸರ್ಜರಿ ಮಾಡ್ತಾರೆ!
Plastic surgery for cats and dogsImage Credit source: Shutterstock
Follow us
ಅಕ್ಷತಾ ವರ್ಕಾಡಿ
|

Updated on: Dec 28, 2023 | 3:51 PM

ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಚೀನಾದಲ್ಲಿ ಜನರು ತಮ್ಮ ಸಾಕುಪ್ರಾಣಿಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಪ್ರಸಿದ್ಧ ಕಾರ್ಟೂನ್ ಪಾತ್ರವಾದ ‘ಮಿಕ್ಕಿ ಮೌಸ್’ ನಂತೆ ಕಾಣಲು ಬೆಕ್ಕಿನ ಮರಿಗಳ ಕಿವಿಗಳನ್ನು ವಿಚಿತ್ರವಾಗಿ ಕತ್ತರಿಸುವ ಮೂಲಕ ಪ್ಲಾಸ್ಟಿಕ್ ಸರ್ಜರಿಗೆ ಒಳಪಡಿಸುತ್ತಿದ್ದಾರೆ. ಚಾಂಗ್‌ಕಿಂಗ್‌ನ ಬೀಬೈ ಜಿಲ್ಲೆಯ ಪ್ರಾಣಿ ಚಿಕಿತ್ಸಾಲಯದ ಹೊರಗೆ ಸಾಕುಪ್ರಾಣಿಗಳಿಗೆ ಕಾಸ್ಮೆಟಿಕ್ ಸರ್ಜರಿಯ ವಿಶಿಷ್ಟ ಕೊಡುಗೆಯನ್ನು ಕೇವಲ 40 ಡಾಲರ್‌ಗಳಿಗೆ (ಅಂದರೆ ರೂ. 3,300 ) ಒದಗಿಸಲಾಗುವುದು ಎಂದು ಹಾಕಿರುವ ಜಾಹೀರಾತು ಸದ್ಯ ಎಲ್ಲೆಡೆ ವೈರಲ್​ ಆಗಿದೆ. ಪ್ರಾಣಿ ಪ್ರೇಮಿಗಳು ಈ ಜಾಹೀರಾತನ್ನು ಗಮನಿಸಿ ವಿಚಿತ್ರವಾದ ಪ್ರವೃತ್ತಿಯ ವಿರುದ್ಧ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಪಶುವೈದ್ಯಕೀಯ ತಜ್ಞರು ಇದು ಅಪಾಯಕಾರಿ ಎಂದು ಕರೆದಿದ್ದು, ಈ ಅಸಂಬದ್ಧ ಪ್ರವೃತ್ತಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಇದರಿಂದ ಪ್ರಾಣಿಗಳು ದೈಹಿಕ ಮಾತ್ರವಲ್ಲ ಮಾನಸಿಕವಾಗಿಯೂ ನೋವು ಅನುಭವಿಸುತ್ತಿವೆ ಎನ್ನುತ್ತಾರೆ ಪಶುವೈದ್ಯರು.

ಜನರು ತಮ್ಮ ಮುದ್ದಿನ ಬೆಕ್ಕು ಮತ್ತು ನಾಯಿಗಳ ಕಿವಿಗಳನ್ನು ತಮ್ಮ ಬಾಲಗಳನ್ನು ಮಿಕ್ಕಿ ಮೌಸ್‌ನಂತೆ ಕಾಣಲು ಶಸ್ತ್ರ ಚಿಕಿತ್ಸೆಗೆ ಒಳಪಡಿಸುತ್ತಿದ್ದಾರೆ. ಇದರ ಮೂಲಕ ನಾಯಿಗಳ ಬಾಲವನ್ನು ಅರ್ಧ ಅಥವಾ ಸಂಪೂರ್ಣವಾಗಿ ಕತ್ತರಿಸಲಾಗುತ್ತಿದೆ. ಇದರೊಂದಿಗೆ ಸಾಕುಪ್ರಾಣಿಗಳ ನೈಸರ್ಗಿಕ ತುಪ್ಪಳದ ಬಣ್ಣವೂ ಹಾಳಾಗುತ್ತಿದೆ.

ಇದನ್ನೂ ಓದಿ: ಮದ್ಯದ ನಶೆಯಲ್ಲಿ ವಧುವಿನ ಬದಲು ಬೇರೊಬ್ಬಳಿಗೆ ಹಾರ ಹಾಕಿದ ವರ; ಮುಂದೇನಾಯಿತು ಗೊತ್ತಾ?

ಸುಮಾರು ಅರ್ಧ ಗಂಟೆ ನಡೆಯುವ ಶಸ್ತ್ರ ಚಿಕಿತ್ಸೆಯಲ್ಲಿ ಮಿಕ್ಕಿ ಮೌಸ್ ನಂತೆ ಕಿವಿಗಳ ಆಕಾರ ನೀಡಲು ಯಾವುದೇ ತೊಂದರೆಯಾಗದಂತೆ ಇಂಜೆಕ್ಷನ್​​​ ನೀಡಿ ಪ್ರಜ್ಞೆ ತಪ್ಪಿಸುತ್ತಾರೆ. ಈ ಪ್ರಕ್ರಿಯೆಯು 20 ರಿಂದ 60 ದಿನಗಳನ್ನು ತೆಗೆದುಕೊಳ್ಳುತ್ತದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪ್ರಾಣಿಗಳಿಗೆ ದೈಹಿಕ ಮತ್ತು ಮಾನಸಿಕ ನೋವು ಉಂಟಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪಶುವೈದ್ಯರು ಮತ್ತು ಪ್ರಾಣಿ ಪ್ರೇಮಿಗಳು ಪ್ರತಿಭಟನೆ ಪ್ರಾರಂಭಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: