AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಯವ್ಯ ಚೀನಾದಲ್ಲಿ ಪ್ರಬಲ ಭೂಕಂಪ: ನೂರಕ್ಕೂ ಹೆಚ್ಚು ಜನ ಸಾವು

China Earthquake: ವಾಯವ್ಯ ಚೀನಾದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಇದುವರೆಗೆ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸುಮಾರು 200 ಮಂದಿ ಗಾಯಗೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಭೂಕಂಪದಲ್ಲಿ ಕೆಲವು ಕಟ್ಟಡಗಳು ಸಹ ನಾಶವಾಗಿವೆ. ಸದ್ಯ ಜನರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.

ವಾಯವ್ಯ ಚೀನಾದಲ್ಲಿ ಪ್ರಬಲ ಭೂಕಂಪ: ನೂರಕ್ಕೂ ಹೆಚ್ಚು ಜನ ಸಾವು
ವಾಯವ್ಯ ಚೀನಾದಲ್ಲಿ ಪ್ರಬಲ ಭೂಕಂಪ: ನೂರಕ್ಕೂ ಹೆಚ್ಚು ಜನ ಸಾವು
Ganapathi Sharma
|

Updated on:Dec 19, 2023 | 8:33 AM

Share

ಬೀಜಿಂಗ್, ಡಿಸೆಂಬರ್ 19: ವಾಯವ್ಯ ಚೀನಾದ (China) ಹಲವೆಡೆ ಸಂಭವಿಸಿದ ಭೂಕಂಪದಿಂದಾಗಿ (Earthquake) 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.9 ರಷ್ಟಿತ್ತು ಎನ್ನಲಾಗಿದೆ. ವಾಯವ್ಯ ಚೀನಾದ ಗನ್ಸು ಮತ್ತು ಕಿಂಗ್ಹೈ ಪ್ರಾಂತ್ಯಗಳಲ್ಲಿ ಭೂಕಂಪ ಸಂಭವಿಸಿದೆ. ದುರಂತದಲ್ಲಿ ಸುಮಾರು 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ‘ಕ್ಸಿನ್ಹುವಾ’ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ‘ಎಪಿ’ ವರದಿ ಮಾಡಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ,ಭೂಕಂಪದಿಂದ ಹತ್ತಾರು ಕಟ್ಟಡಗಳು ನಾಶವಾಗಿವೆ. ಸದ್ಯ ಅವಶೇಷಗಡಳಡಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಯುಎಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಭೂಕಂಪವು ಲಿನ್ಕ್ಸಿಯಾ ಚೆಂಗ್ಗುವಾನ್ಜೆನ್, ಗನ್ಸು ಮತ್ತು ಗನ್ಸುವಿನ ಲಾಂಜೌದಿಂದ ಸುಮಾರು 100 ಕಿಮೀ ದೂರದಲ್ಲಿ ಸಂಭವಿಸಿದೆ. ಭೂಕಂಪವು ಸುಮಾರು 10 ಕಿಲೋಮೀಟರ್ ಆಳದಲ್ಲಿ ಕೇಂದ್ರಿತವಾಗಿತ್ತು ಎಂದು ಹೇಳಲಾಗಿದೆ.

ಸೋಮವಾರ ಸಂಜೆ ದೇಶದ ಗನ್ಸು ಪ್ರಾಂತ್ಯದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದಾದ ನಂತರ ಇತರೆಡೆಗಳಲ್ಲಿಯೂ ಭೂಮಿ ಕಂಪಿಸಿದೆ.

ಇದನ್ನೂ ಓದಿ: ಗಾಜಾ ಜಾಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: 90 ಮಂದಿ ಸಾವು

ರಕ್ಷಣಾ ಕಾರ್ಯಾಚರಣೆಗೆ ಅಧ್ಯಕ್ಷ ಜಿನ್‌ಪಿಂಗ್ ನಿರ್ದೇಶನ

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಭೂಕಂಪದ ನಂತರ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಪ್ರಮುಖ ನಿರ್ದೇಶನಗಳನ್ನು ನೀಡಿದರು. ಅವಶೇಷಗಳಡಿ ಸಿಲುಕಿರುವವರ ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳು, ಪೀಡಿತ ಜನರ ಪುನರ್ವಸತಿ ಮತ್ತು ಜನರ ಜೀವನ ಮತ್ತು ಆಸ್ತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗರಿಷ್ಠ ಪ್ರಯತ್ನಗಳನ್ನು ನಡೆಲಾಗುತ್ತಿದೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.

ಭೂಕಂಪದಿಂದ ಅಪಾರ ಹಾನಿಯಾಗಿದೆ. ಭೂಕಂಪದಿಂದ ಮನೆಗಳ ಕುಸಿತ ಸೇರಿದಂತೆ ಗಂಭೀರ ಹಾನಿ ಸಂಭವಿಸಿದೆ. ಭೀತಿಗೊಂಡ ಜನರು ಕಟ್ಟಡಗಳಿಂದ ಹೊರಬಂದು ಬೀದಿಗಳಿಗೆ ಓಡಲು ಪ್ರಾರಂಭಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:41 am, Tue, 19 December 23