ಪಿ.ಎಚ್.ಡಿ ಸಬ್ಜಿ ವಾಲಾ: ನಾಲ್ಕು ಎಂ.ಎ ಪದವಿ, ಪಿ.ಎಚ್.ಡಿ ಮಾಡಿದರೂ ಬೀದಿಗಳಲ್ಲಿ ತರಕಾರಿ ಮಾರುತ್ತಿರುವ ವ್ಯಕ್ತಿ

ಪ್ರತಿಯೊಬ್ಬರೂ ಕೂಡಾ ತಮ್ಮ ವಿದ್ಯೆಗೆ ತಕ್ಕ ಉದ್ಯೋಗ ಸಿಗಬೇಕೆಂದು ಬಯಸುತ್ತಾರೆ. ಆದರೆ ಹೆಚ್ಚಿನವರ ಈ ಕನಸು ಕನಸಾಗಿಯೇ ಉಳಿದುಬಿಡುತ್ತದೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ನಾಲ್ಕು ಎಂ.ಎ ಮತ್ತು ಪಿ.ಎಚ್.ಡಿ ಪದವಿಯನ್ನು ಮಾಡಿದ್ದರೂ ಸರಿಯಾದ ಉದ್ಯೋಗ ದೊರೆಯಲಿಲ್ಲ ಎಂಬ ಕಾರಣಕ್ಕೆ ಜೀವನೋಪಾಯಕ್ಕಾಗಿ ಅಮೃತಸರದ ಬೀದಿಗಳಲ್ಲಿ ತರಕಾರಿಯನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. 

ಪಿ.ಎಚ್.ಡಿ ಸಬ್ಜಿ ವಾಲಾ: ನಾಲ್ಕು ಎಂ.ಎ ಪದವಿ, ಪಿ.ಎಚ್.ಡಿ ಮಾಡಿದರೂ ಬೀದಿಗಳಲ್ಲಿ ತರಕಾರಿ ಮಾರುತ್ತಿರುವ ವ್ಯಕ್ತಿ
ವೈರಲ್​​ ಸ್ಟೋರಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 27, 2023 | 10:25 AM

ಪೋಷಕರು ತಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸವನ್ನು ಪಡೆದು, ಒಂದೊಳ್ಳೆ ಉದ್ಯೋಗವನ್ನು ಪಡೆಯಬೇಕೆಂದು ಬಯಸುತ್ತಾರೆ. ಆದ್ರೆ ಇಂದಿಗೂ ಅನೇಕರು  ತಮ್ಮ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು,  4 ಎಂ.ಎ ಮತ್ತು ಪಿ.ಎಚ್.ಡಿ ಪದವಿ ಪಡೆದಿರುವ ವ್ಯಕ್ತಿಯೊಬ್ಬರು, ತಮ್ಮ ವಿದ್ಯೆಗೆ ತಕ್ಕಂತೆ ಉದ್ಯೋಗ ಸಿಕ್ಕಿಲ್ಲವೆಂದು ಇಂದು ತರಕಾರಿಗಳನ್ನು ಮಾರಿ ಜೀವನ ನಡೆಸುತ್ತಿದ್ದಾರೆ.  ಹೌದು ಪಂಜಾಬಿನ ಡಾ. ಸಂದೀಪ್ ಸಿಂಗ್ ಅವರು ಪಿ.ಎಚ್.ಡಿ ಸೇರಿದಂತೆ  ನಾಲ್ಕು ಎಂ.ಎ ಪದವಿಗಳನ್ನು ಪಡೆದಿದ್ದು, ಆದರೆ ಅವರಿಗೆ  ಸರಿಯಾದ  ಉದ್ಯೋಗ ದೊರೆಯದ ಕಾರಣ ಇಂದು ಅಮೃತಸರದ ಬೀದಿ ಬೀದಿಗಳಲ್ಲಿ ತರಕಾರಿ ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ.

ಮೂಲತಃ ಭರದಿವಾಲ್ ಪ್ರದೇಶದ ನಿವಾಸಿಯಾಗಿರುವ ಡಾ. ಸಂದೀಪ್ ಅಮೃತಸರದ ಬೀದಿಗಳಲ್ಲಿ ತರಕಾರಿ ಮಾರಾಟ ಮಾಡುತ್ತ ಜೀವನ ನಡೆಸುತ್ತಿದ್ದಾರೆ.  ಒಂದು ದಿನ ಇದೇ ರೀತಿ ಸಂದೀಪ್ ಅವರು ತರಕಾರಿ ಮಾರುತ್ತಿದ್ದಾಗ, ತರಕಾರಿ ಕೊಳ್ಳಲು ಬಂದಂತಹ ಮಹಿಳೆಯೊಬ್ಬರು ಸಂದೀಪ್ ಅವರ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸುತ್ತಾರೆ. ಇಷ್ಟೆಲ್ಲಾ ಉನ್ನತ ಶಿಕ್ಷಣ ಪಡೆದಿದ್ದೀರಾ ಅಲ್ವಾ,  ʼಪಿ.ಎಚ್.ಡಿ-ಸಬ್ಜಿ ವಾಲಾʼ ಎಂಬ ಬೋರ್ಡ್ ಅನ್ನು ತರಕಾರಿ ಗಾಡಿಯಲ್ಲಿ ಹಾಕಿ ಇದರಿಂದ ನಿಮ್ಮ ಸಾಮರ್ಥ್ಯ ಮತ್ತು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಈ ಸಮಾಜಕ್ಕೆ ತಿಳಿಯುತ್ತೆ ಎಂದು  ಆ ಮಹಿಳೆ ಸಲಹೆ ನೀಡುತ್ತಾರೆ. ಅಂದಿನಿಂದ ಡಾ. ಸಂದೀಪ್ ತಮ್ಮ ತರಕಾರಿ ಗಾಡಿಗೆ ʼಪಿ.ಎಚ್.ಡಿ ಸಬ್ಜಿ ವಾಲಾʼ ಬೋರ್ಡ್ ಹಾಕಿ ಬೀದಿಗಳಲ್ಲಿ ತರಕಾರಿ ಮಾರಾಟ ಮಾರುತ್ತಿದ್ದಾರೆ.

11 ವರ್ಷಗಳ ಕಾಲ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದ ಡಾ. ಸಂದೀಪ್:

ಪಿ.ಎಚ್.ಡಿ  ಪದವಿಯನ್ನು ಪಡೆದಿರುವ ಡಾ. ಸಂದೀಪ್ ಪಟಿಯಾಲದ ಪಂಜಾಬ್ ವಿಶ್ವವಿದ್ಯಾನಿಯದಲ್ಲಿ ಸುಮಾರು 11 ವರ್ಷಗಳ ಕಾಲ ಅಥಿತಿ ಉಪನ್ಯಾಸಕರಾಗಿ  ಸೇವೆಯನ್ನು ಸಲ್ಲಿಸಿದ್ದಾರೆ. ಆದರೆ ಖಾಯಂ ಉದ್ಯೋಗ ದೊರೆಯದ ಕಾರಣ ಈ ಕೆಲಸವನ್ನು ಸಹ ಬಿಡಬೇಕಾಯಿತು. ನಂತರ ಸಂಸಾರವನ್ನು ಸಾಗಿಸಲು ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುವ  ನಿರ್ಧಾರವನ್ನು ಮಾಡುತ್ತಾರೆ.

ಈ ಕುರಿತು ಮಾತನಾಡಿದ ಸಂದೀಪ್ ಸಿಂಗ್ ನಾನು ಈಗಾಗಲೇ 4 ಎಂ.ಎ ಮತ್ತು ಪಿ.ಎಚ್.ಡಿ ಮಾಡಿದ್ದು ಈಗಲೂ ಓದುವುದನ್ನು ಮುಂದುವರೆಸಿದ್ದೇನೆ.  ಉನ್ನತ ವಿದ್ಯಾಭ್ಯಾಸವನ್ನು ಪಡೆದುಕೊಂಡರೂ ತರಕಾರಿ ಮಾರುತ್ತಿರುವುದು ಏಕೆ ಎಂದು ಜನರು ಕೇಳುತ್ತಿರುತ್ತಾರೆ. ನನಗೆ  ಉದ್ಯೋಗದ ಬಗ್ಗೆ  ಸರ್ಕಾರದಿಂದ ಯಾವುದೇ ಭರವಸೆ ಇಲ್ಲ, ಲಂಚ ಕೊಟ್ಟರೆ ಮಾತ್ರ ಇಲ್ಲಿ ಉದ್ಯೋಗ ಸಿಗುತ್ತೆ. ಅಷ್ಟೇ ಅಲ್ಲದೆ ನಾನು ಉಪನ್ಯಾಸಕನಾಗಿ ಸೇವೆಸಲ್ಲಿಸಿದ  ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕೂಡ ನನಗೆ ಖಾಯಂ ಉದ್ಯೋಗವನ್ನು ನೀಡಲಿಲ್ಲ. ಈ ಕಾರಣಕ್ಕಾಗಿಯೇ ತರಕಾರಿ ಮಾಡುತ್ತಾ ಜೀವನ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೀಲ್ಸ್ ನೋಡುತ್ತಾ ಮೊಬೈಲ್ ಡೇಟಾ ಖಾಲಿ ಮಾಡಿದ ಅತ್ತೆ, ಪೋಲಿಸ್ ಠಾಣೆ ಮೆಟ್ಟಿಲೇರಿದ ಸೊಸೆ

2004ರಲ್ಲಿ ಸಂದೀಪ್  ಅವರು  ಪದವಿ ಶಿಕ್ಷಣವನ್ನು ಪಡೆದಿದ್ದು, ಇದಾದ ನಂತರ 2009 ರಲ್ಲಿ ಎಲ್.ಎಲ್.ಬಿ, 2011ರಲ್ಲಿ ಎಂ.ಎ ಪಂಜಾಬಿ ಪದವಿಯನ್ನು ಪಡೆಯುತ್ತಾರೆ. ನಂತರ ಅವರು 2017 ರಲ್ಲಿ ಪಟಿಯಾಲದ ಪಂಜಾಬ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿಯನ್ನು ಪೂರ್ಣಗೊಳಿಸುತ್ತಾರೆ. ನಂತರ  ಎಂ.ಎ ಪತ್ರಿಕೋದ್ಯಮ, ಎಂ.ಎ ಇನ್ ವಿಮೆನ್ ಸ್ಟಡೀಸ್ ಮತ್ತು ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಪಡೆದುಕೊಳ್ಳುತ್ತಾರೆ. ಪ್ರಸ್ತುತ ತರಕಾರಿ ಮಾರುತ್ತಿರುವ ಸಂದೀಪ್ ಅವರು ಶೀಘ್ರದಲ್ಲೇ  ಯುವಕರಿಗೆ ಶಿಕ್ಷಣ ನೀಡಲು ತಮ್ಮದೇ ಆದ ಕೋಚಿಂಗ್ ಸೆಂಟರ್ ಅಥವಾ ಅಕಾಡೆಮಿಯನ್ನು ಪ್ರಾರಂಭಿಸುವ ಯೋಜನೆಯಲ್ಲಿದ್ದಾರೆ. ಇದಕ್ಕಾಗಿ ಹಣವನ್ನು ಕೂಡಾ ಸಂಗ್ರಹಿಸುತ್ತಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ