Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೇಗ ರಸ್ತೆ ದಾಟ್ರೋ, ತನ್ನ ಮರಿಗಳನ್ನು ರಸ್ತೆ ದಾಟಿಸಲು ತಾಯಿ ಕರಡಿ ಪಟ್ಟಪಾಡು ನೋಡಿ 

ವನ್ಯ ಜೀವಿಗಳಿಗೆ ಸಂಬಂಧಿಸಿದ ಹಲವಾರು ಮುದ್ದಾದ  ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ತಾಯಿ ಮತ್ತು ಮಕ್ಕಳ ಬಾಂಧವ್ಯದ ಸುಂದರ ವಿಡಿಯೋವೊಂದು ಹರಿದಾಡುತ್ತಿದ್ದು,  ತಾಯಿ ಕರಡಿಯೊಂದು ತನ್ನ ತುಂಟ ಮಕ್ಕಳನ್ನು ರಸ್ತೆ ದಾಟಿಸಲು ಹರಸಾಹಸ ಪಟ್ಟಿದೆ, ಈ ಮುದ್ದಾದ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. 

Viral Video: ಬೇಗ ರಸ್ತೆ ದಾಟ್ರೋ, ತನ್ನ ಮರಿಗಳನ್ನು ರಸ್ತೆ ದಾಟಿಸಲು ತಾಯಿ ಕರಡಿ ಪಟ್ಟಪಾಡು ನೋಡಿ 
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 26, 2023 | 5:57 PM

ತಾಯಿ ಅಂದ್ರೆ ಹಾಗೇನೇ  ಅಲ್ವಾ, ತನಗೆ ಎಷ್ಟೇ ಕಷ್ಟವಾದ್ರೂ ಸರಿ ತನ್ನ ಮಕ್ಕಳನ್ನು ಎಲ್ಲಾ ಸಂದರ್ಭದಲ್ಲಿಯೂ ಜೋಪಾನವಾಗಿ ನೋಡಿಕೊಳ್ಳುತ್ತಾಳೆ.  ತಾಯಿ ಮತ್ತು ಮಗುವಿನ  ಪ್ರೀತಿ, ಬಾಂಧವ್ಯ ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿ ಪಕ್ಷಿಗಳಲ್ಲೂ  ಕೂಡಾ ಇದೆ. ಪ್ರಾಣಿಗಳು ಪ್ರಾಣವನ್ನು ಪಣಕ್ಕಿಟ್ಟು ತಮ್ಮ ಮರಿಗಳನ್ನು ಜೋಪಾನವಾಗಿ ನೋಡಿಕೊಳ್ಳುತ್ತವೆ. ಇದಕ್ಕೆ ಸಂಬಂಧಿಸಿದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಈಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ತಾಯಿ ಕರಡಿಯೊಂದು ತನ್ನ ನಾಲ್ಕು ಮರಿಗಳನ್ನು ಜೋಪಾನವಾಗಿ ರಸ್ತೆ ದಾಟಿಸಲು ಹರಸಾಹಸಪಟ್ಟಿದೆ. ತನ್ನ ತುಂಟ ಮಕ್ಕಳ ಚೇಷ್ಟೆಯನ್ನೆಲ್ಲಾ ತಡೆದುಕೊಂಡು ಬಹಳ ತಾಳ್ಮೆಯಿಂದ ನಾಲ್ಕು ಮರಿಗಳನ್ನು ಕರಡಿ ರಸ್ತೆ ದಾಟಿಸುವಲ್ಲಿ ಯಶಸ್ವಿಯಾಗಿದೆ.  ಈ ಮುದ್ದಾದ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

@uddin_heritor ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ತಾಯಿ ಕರಡಿಯೊಂದು ತನ್ನ ನಾಲ್ಕು ತುಂಟ ಮರಿಗಳನ್ನು ರಸ್ತೆ ದಾಟಿಸಲು ಕಷ್ಟಪಡುತ್ತಿರುವುದನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ  ತಾಯಿ ಕರಡಿ ತನ್ನ ನಾಲ್ಕು ತುಂಟ ಮರಿಗಳನ್ನು ಜೋಪಾನವಾಗಿ ರಸ್ತೆ ದಾಟಿಸಲು ಹರಸಾಹಸ ಪಡುತ್ತಿರುವುದನ್ನು ಕಾಣಬಹುದು.  ಹಲವು ವಿಫಲ ಪ್ರಯತ್ನಗಳ ನಂತರ ತಾಯಿ ಕರಡಿ ತನ್ನ ತುಂಟ ಮಕ್ಕಳನ್ನು ರಸ್ತೆ ದಾಟಿಸುವಲ್ಲಿ ಯಶಸ್ವಿಯಾಗಿದೆ. ಹೌದು ತಾಯಿ ಕರಡಿಯೊಂದು ತನ್ನ ನಾಲ್ಕು ಮಕ್ಕಳೊಂದಿಗೆ ಇತ್ತಕಡೆಯಿಂದ  ಅತ್ತ ಕಡೆ ರಸ್ತೆ ದಾಟಲು ಹೋಗುತ್ತೆ. ಆದ್ರೆ ಈ ತುಂಟ ಮರಿಗಳು ರಸ್ತೆ ದಾಟಲ್ಲ ಅಂತ ಒಂದೇ ಸಮನೇ ಹಟ ಮಾಡುತ್ತವೆ. ಇವುಗಳನ್ನು ಹೀಗೆ ಬಿಟ್ರೆ ಇಡೀ ದಿನ ರಸ್ತೆಯಲ್ಲಿಯೇ ಇರಬೇಕಾಗುತ್ತದೆ ಎಂದು ತಾಯಿ ಕರಡಿ ಒಂದೊಂದೇ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಹೋಗಿ ಜೋಪಾನವಾಗಿ ರಸ್ತೆ ದಾಟಿಸುತ್ತದೆ. ಆದ್ರೂ ಕೂಡಾ ಒಂದು ಮರಿ ಪುನಃ ರಸ್ತೆಯ ಮಧ್ಯೆ ಬರಲು ಪ್ರಯತ್ನಿಸುತ್ತದೆ. ಅಂತೂ ಇಂತೂ ಈ ಮರಿಗಳನ್ನು ರಸ್ತೆ ದಾಟಿಸುವಷ್ಟರಲ್ಲಿ ತಾಯಿ ಕರಡಿ ಸುಸ್ತಾಗಿ ಹೋಗಿತ್ತು.

ಇದನ್ನೂ ಓದಿ: ಓಹ್ ವಾವ್! ಮೊದಲ ಬಾರಿ ರೈಲು ನೋಡಿ ಮಗುವಿನ ಪ್ರತಿಕ್ರಿಯೆ ಹೀಗಿತ್ತು

ಡಿಸೆಂಬರ್ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼತಾಯಿ ಎಂದೆಂದಿಗೂ ತಾಯಿಯೇʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಕರಡಿಗಳು ರಸ್ತೆ ದಾಟುವವರೆಗೂ ತಾಳ್ಮೆಯಿಂದ ಕಾದ ಕಾರು ಚಾಲಕರಿಗೆ ನನ್ನದೊಂದು ಸೆಲ್ಯೂಟ್ʼ ಎಂದು ಹೇಳಿದ್ದಾರೆ.  ಮತ್ತೊಬ್ಬ ಬಳಕೆದಾರರು ʼಮಕ್ಕಳು ಹೀಗೆ ಅಲ್ವಾ ತಾಯಿಯ ಮಾತನ್ನು ಕೇಳೋದೇ ಇಲ್ಲʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಮರಿ ಕರಡಿಗಳ ತುಂಟಾಟ ತುಂಬಾ ಮುದ್ದಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: